ಶಿರಸಿಯ ಆಟೋ ಚಾಲಕ ಶರತ್ ಪಾವಸ್ಕರ್ ಅವರನ್ನು ಅವರ ಅಕ್ಕನ ಮಕ್ಕಳಾದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಸೇರಿ ಥಳಿಸಿದ್ದಾರೆ. ಈಗಾಗಲೇ ಭೂ ವ್ಯಾಜ್ಯದ ವಿಷಯವಾಗಿ ಕೋರ್ಟು-ಕಚೇರಿ ಅಲೆದಾಡುತ್ತಿರುವ ಶರತ್ ಪಾವಸ್ಕರ್ ಅವರು ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದು, ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಶಿರಸಿಯ ಆಟೋ ಚಾಲಕ ಶರತ್ ಪಾವಸ್ಕರ್ ಅವರು ನರಬೈಲಿನ ಸರ್ವೇ ನಂ 6ರಲ್ಲಿ ಭೂಮಿ ಹೊಂದಿದ್ದಾರೆ. ಅಲ್ಲಿಯೇ ಅವರು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಆದರೆ `ಆ ಮನೆ ತಮಗೆ ಸೇರದ್ದು’ ಎಂದು ಅದೇ ಊರಿನಲ್ಲಿರುವ ಅವರ ಅಕ್ಕ ನಂದಾ ಅವರು ಕಿರಿಕಿರಿ ಮಾಡುತ್ತಿದ್ದಾರೆ. ಅಕ್ಕನ ಮಕ್ಕಳಾದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಸಹ ಆಸ್ತಿಗಾಗಿ ಜಗಳಕ್ಕೆ ಬರುತ್ತಿದ್ದು, ತಂಟೆ-ತಕರಾರಿನಿAದಾಗಿ ಶರತ್ ಪಾವಸ್ಕರ್ ಅವರು ಸಮಸ್ಯೆಗೆ ಸಿಲುಕಿದ್ದಾರೆ.
ಇದೇ ಭೂ ವ್ಯಾಜ್ಯದ ವಿಷಯವಾಗಿ ಶರತ್ ಪಾವಸ್ಕರ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಮೊರೆ ಹೋದ ಶರತ್ ಪಾವಸ್ಕರ್ ಅವರ ವಿರುದ್ದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಅವರ ಸಿಟ್ಟು ಹೆಚ್ಚಾಗಿದೆ. ಅದೇ ಸಿಟ್ಟಿನಲ್ಲಿ ಆದರ್ಶ ಅಲಗೇರಿಕರ್ ಅವರು ಅಕ್ಟೊಬರ್ 14ರಂದು ಶರತ್ ಪಾವಸ್ಕರ್ ಅವರ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಮನೆ ಮುಂದಿನ ಬೇಲಿ ಮುರಿದು ರಂಪಾಟ ನಡೆಸಿದ್ದಾರೆ.
ಅದರೊಂದಿಗೆ ಶರತ್ ಪಾವಸ್ಕರ್ ಅವರ ಆಟೋ ಸಂಚಾರಕ್ಕೆ ತೊಂದರೆ ಆಗುವಂತೆ ಅಲ್ಲಿ ಬೇಲಿ ಗೂಟ ನೆಟ್ಟಿದ್ದಾರೆ. ಆ ಗೂಟ ತೆಗೆಯಲು ಹೋದಾಗ ಆದಿತ್ಯ ಅವರು ಮಾವನ ಕಪಾಳಕ್ಕೆ ಬಾರಿಸಿದ್ದಾರೆ. ಆದರ್ಶ ಅವರು ಈ ವೇಳೆ ಕೈಯಿಂದ ಗುದ್ದಿ ನೋವು ಮಾಡಿದ್ದಾರೆ. ಅವರಿಬ್ಬರು ಸೇರಿ ಶರತ್ ಪಾವಸ್ಕರ್ ಅವರನ್ನು ನೆಲಕ್ಕೆ ಬೀಳಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಶರತ್ ಪಾವಸ್ಕರ್ ಅವರು ಪೊಲೀಸರಿಗೆ ದೂರಿದ್ದು, ಅದಾದ ನಂತರ ನ್ಯಾಯಾಲಯದ ಮೊರೆ ಹೋಗಿ ಅಕ್ಕನ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
`ಸಣ್ಣ-ಪುಟ್ಟ ವ್ಯಾಜ್ಯಗಳನ್ನು ರಾಜಿಮೂಲಕ ಬಗೆಹರಿಸಿ. ರಾಜಿ ಸಂದಾನಕ್ಕಾಗಿ ಲೋಕ ಅದಾಲತಿನಲ್ಲಿ ಭಾಗವಹಿಸಿ