ಶಿರಸಿ ಹೊಸಗದ್ದೆಯ ಪದ್ಮನಾಭ ಹೆಗಡೆ ಅವರು ದಿಡೀರ್ ನಾಪತ್ತೆ ಆಗಿದ್ದಾರೆ. ನಾಲ್ಕು ದಿನ ಹುಡುಕಾಟ ನಡೆಸಿದರೂ ಅವರು ಸಿಕ್ಕಿಲ್ಲ.
ಶಿರಸಿ ಹುಲೆಕಲ್ ಬಳಿಯ ಹೊಸಗದ್ದೆ ನಕ್ಷೆಯಲ್ಲಿ ಪದ್ಮನಾಭ ಹೆಗಡೆ ಅವರು ವಾಸವಾಗಿದ್ದರು. ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 29ರಂದು ಸಂಜೆಯವರೆಗೂ ಮನೆಯಲ್ಲಿದ್ದ ಅವರು ನಂತರ ಯಾರಿಗೂ ಕಾಣಿಸಲಿಲ್ಲ.
ಪದ್ಮನಾಭ ಹೆಗಡೆ ಅವರ ದಿಢೀರ್ ಕಣ್ಮರೆಯ ಬಗ್ಗೆ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾ ಕಡೆ ಅವರ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೆ ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ. ಶಿರಸಿ ಗ್ರಾಮೀಣ ಠಾಣೆಯಲ್ಲಿಯೂ ದೂರು ನೀಡಿದ್ದಾರೆ. ಅವರ ಫೋಟೋ ಹಿಡಿದು ಎಲ್ಲಾ ಕಡೆ ಕಳುಹಿಸಿದ್ದು, ಪೊಲೀಸರು ಸಹ ಪದ್ಮನಾಭ ಹೆಗಡೆ ಅವರ ಹುಡುಕಾಟದಲ್ಲಿದ್ದಾರೆ.
ಪದ್ಮನಾಭ ಹೆಗಡೆ ಅವರು ಮನೆಯಿಂದ ಹೊರ ಹೋಗುವ ಮೊದಲು ಯಾರಿಗೂ ಹೇಳಿಲ್ಲ. ಎಲ್ಲಿ ಹೋಗುವೆ? ಎಂದು ಸಹ ಅವರು ಮಾಹಿತಿ ನೀಡಿಲ್ಲ. ಹೀಗಾಗಿ ಅವರ ಹುಡುಕಾಟ ಸವಾಲಾಗಿದ್ದು, ಕೋಳಿಗಾರ ಬಳಿಯ
ಸಿಂಗನಳ್ಳಿ ಹಲಸರಗಿಯ ಶ್ರೀಧರ ಹೆಗಡೆ ಅವರು ಅವರ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಪೋಸ್ಟರ್ ಸಿದ್ಧಪಡಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.