ಮುಸ್ಲಿಂ ಸಮುದಾಯದ ಯೂಟೂಬರ್ ಮುಕಳೆಪ್ಪ ನಕಲಿ ವಿಳಾಸ ದಾಖಲೆ ನೀಡಿ ಹಿಂದು ಹುಡುಗಿಯನ್ನು ಮದುವೆಯಾಗಿ ಮೂರು ತಿಂಗಳು ಕಳೆದಿದ್ದು, ಇದೀಗ ಈ ವಿಷಯವಾಗಿ ಪ್ರಮೋದ ಮುತಾಲಿಕ್ ಹೋರಾಟ ಶುರು ಮಾಡಿದ್ದಾರೆ. ಮುಂಡಗೋಡದಲ್ಲಿ ನಡೆದ ಈ ಮದುವೆ ವಿರುದ್ಧ ಕಿಡಿಕಾರಿದ ಅವರು `ಗಲಬೆ-ಗಲಾಟೆ ಆಗುವುದಕ್ಕಿಂತ ಮುಂಚೆ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ಮುಕಳೆಪ್ಪ ಧಾರವಾಡದ ಗಾಯತ್ರಿ ಅವರನ್ನು ವಿವಾಹವಾಗಿದ್ದರು. ಮುಕಳೆಪ್ಪ ಅವರು ಮುಂಡಗೋಡಿನ ನೋಂದಣಾಧಿಕಾರಿ ಕಚೇರಿ ಮೂಲಕ ಈ ವಿವಾಹವಾಗಿದ್ದು, ಮುಂಡಗೋಡು ನೋಂದಣಾಧಿಕಾರಿಗಳ ಕಚೇರಿ ಅಧಿಕಾರಿ-ಸಿಬ್ಬಂದಿ ವಿರುದ್ಧ ಗಾಯತ್ರಿ ಅವರ ತಾಯಿ ಶಿವಕ್ಕ ಅವರು ಪೊಲೀಸ್ ದೂರು ದಾಖಲಿಸಿದ್ದರು. ಬಂಧನದ ಭೀತಿ ಹಿನ್ನಲೆ ಆ ಕಚೇರಿ ಅಧಿಕಾರಿ-ಸಿಬ್ಬಂದಿ ಪರಾರಿಯಾಗಿದ್ದರು. ಅದಾದ ನಂತರ ಬೇರೆ ತಾಲೂಕಿನ ಅಧಿಕಾರಿಗಳು ಕಚೇರಿ ಬಾಗಿಲು ತೆರೆದು ಕೆಲಸ-ಕಾರ್ಯ ಶುರು ಮಾಡಿದ್ದರು.
ಇದಕ್ಕೂ ಮುಂಚೆ ಮುಕಳೆಪ್ಪನ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸಹ ಜನ ಆಕ್ರೋಶವ್ಯಕ್ತಪಡಿಸಿದ್ದರು. ಪ್ರಮೋದ ಮುತಾಲಿಕ್ ಅವರು ಈ ವಿಷಯವಾಗಿ ಇಷ್ಟು ದಿನಗಳ ಕಾಲ ಮೌನವಾಗಿದ್ದು, ಎಷ್ಟೇ ಹೋರಾಟ ನಡೆದಿರೂ ಪ್ರಯೋಜನವಾಗದ ಹಿನ್ನಲೆ ಅವರು ಕಾರವಾರಕ್ಕೆ ಆಗಮಿಸಿ ಜಿಲ್ಲಾಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿದರು. ಈ ವೇಳೆ ನಕಲಿ ವಿಳಾಸ ದಾಖಲೆ ನೀಡಿ ಹಿಂದು ಹುಡುಗಿಯನ್ನು ಮದುವೆ ಆದ ಯೂಟೂಬರ್ ಮುಕಳೆಪ್ಪ ವಿರುದ್ಧ ಹಿಂದು ಜಾಗರಣಾ ವೇದಿಕೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕಿಡಿಕಾರಿದರು.
`ಒಂದು ತಿಂಗಳಿನಿAದ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ. ವಿವಾಹ ನೋಂದಣಿ ಮಾಡಿಸಿದ ಅಧಿಕಾರಿಗಳ ಅಮಾನತು ಆಗಬೇಕು’ ಎಂದು ಆಗ್ರಹಿಸಿದರು. `ಹಿಂದು ಹುಡುಗಿಯರನ್ನು ಪುಸಲಾಯಿಸಿ ಗೋಮಾಂಸ ತಿನ್ನಿಸಲಾಗಿಸುತ್ತಿದೆ. ನಂತರ ಅವರಿಗೆ ಬುರ್ಕಾ ಹಾಕಿಸುವ ಕೆಲಸ ನಡೆಯುತ್ತಿದೆ. ನಕಲಿ ದಾಖಲೆ ನೀಡಿ ಮದುವೆ ಮಾಡಿದರೂ ಕೇಳುವವರಿಲ್ಲ. ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದಾದರೆ ಕಲ್ಲು ತೆಗೆದುಕೊಂಡು ಹೊಡೆಯಬೇಕಾ? ಅಥವಾ ಬೆಂಕಿ ಹಚ್ಚಿ ಪ್ರತಿಭಟಿಸಬೇಕಾ?’ ಎಂದು ಪ್ರಶ್ನಿಸಿದರು. `ತನಿಖೆಯೂ ಆಗಿಲ್ಲ.. ಬಂಧನವೂ ಆಗಿಲ್ಲ ಎಂದರೆ ನಾವು ಒದ್ದು ತರ್ತಿವಿ’ ಎಂದು ಎಚ್ಚರಿಸಿದರು.
`ನಕಲಿ ದಾಖಲೆಪಡೆದು ಮದುವೆ ಮಾಡಿದವರು ಕೋಟಿ ವೆಚ್ಚದ ಮನೆ ಕಟ್ಟಿದ್ದಾರೆ. ಅವರ ಆದಾಯದ ಮೂಲಗಳ ಬಗ್ಗೆ ತನಿಖೆ ನಡೆಯಬೇಕು. ಇಲ್ಲವಾದಲ್ಲಿ ನಮ್ಮ ದಾರಿ ನಾವು ಹಿಡಿಯುತ್ತೇವೆ’ ಎಂದರು. `ರಾಜ್ಯದ ಎಲ್ಲಡೆ ಬೆಂಕಿ ಹತ್ತುವ ಮುನ್ನ ಕ್ರಮ ಆಗಬೇಕು. ಹೀಗಾಗಿ ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ಮನವಿ ನೀಡುತ್ತಿದ್ದೇವೆ’ ಎಂದರು. ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಅನುಮಾನವ್ಯಕ್ತಪಡಿಸಿದರು.