ನಕಲಿ ವಿಳಾಸ ದಾಖಲೆ ನೀಡಿ ಮುಂಡಗೋಡದಲ್ಲಿ ಮದುವೆಯಾದ ಯೂಟೂಬರ್ ಮುಕಳೆಪ್ಪ ಮಾಡಿದ ಅವಾಂತರಕ್ಕೆ ಅಲ್ಲಿನ ನೋಂದಣಾಧಿಕಾರಿ-ಸಿಬ್ಬoದಿ ಬೆದರಿದ್ದಾರೆ. ಹೀಗಾಗಿ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಅಲ್ಲಿನವರು ಹೋಗಿದ್ದು, ಈ ದಿನ ಬೇರೆ ತಾಲೂಕಿನ ಅಧಿಕಾರಿಗಳು ಆಗಮಿಸಿ ಜನರ ಕೆಲಸ ಶುರು ಮಾಡಿದ್ದಾರೆ.
ನಕಲಿ ದಾಖಲೆ ನೀಡಿ ವಿವಾಹ ನೋಂದಣಿ ಮಾಡಿದ ಕಾರಣ ಉಪನೋಂದಣಿ ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 22ರಂದು ಪ್ರಕರಣ ದಾಖಲಾಗಿದ್ದು, ಸೆಪ್ಟೆಂಬರ್ 24ರಂದು ಅಧಿಕಾರಿ-ಸಿಬ್ಬಂದಿ ನಾಪತ್ತೆ ಆಗಿದ್ದರು. ಹೀಗಾಗಿ ನೋಂದಣಾಧಿಕಾರಿ ಕಚೇರಿ ಬಾಗಿಲು ತೆರೆಯುವವರು ಸಹ ಇರಲಿಲ್ಲ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ಸಮಸ್ಯೆ ಆಗುತ್ತಿದ್ದು, ಈ ದಿನ ಯಲ್ಲಾಪುರ ಮತ್ತು ಸಿದ್ದಾಪುರ ಉಪನೋಂದಣಿ ಕಚೇರಿಯ ಸಿಬ್ಬಂದಿ ಆಗಮಿಸಿ ಬಾಗಿಲು ತೆರೆದರು.
ಏಕಾಏಕಿ ಅಧಿಕಾರಿ ಹಾಗೂ ಸಿಬ್ಬಂದಿ ರಜೆ ಮಾಡಿದ್ದರಿಂದ ಜನ ಸಮಸ್ಯೆ ಅನುಭವಿಸಿದ್ದರು. ಸರ್ಕಾರಿ ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದರು. ಈ ಹಿನ್ನಲೆ ಸದ್ಯ ಯಲ್ಲಾಪುರ ಹಾಗೂ ಸಿದ್ದಾಪುರ ಉಪನೋಂದಣಿ ಕಚೇರಿಯ ಸಿಬ್ಬಂದಿಯನ್ನು ಮುಂಡಗೋಡಿಗೆ ನಿಯೋಜಿಸಲಾಗಿದೆ.