ಆರ್ಯಈಡಿಗ, ನಾಮಧಾರಿ, ಬಿಲ್ಲವ ಸಮುದಾಯದ ಗುರುಮಠವಾದ ಶ್ರೀರಾಮ ಕ್ಷೇತ್ರದ ಶಿರಸಿ ವಿಭಾಗಾಧ್ಯಕ್ಷರಾಗಿ ವೆಂಕಟೇಶ ಎಲ್ ನಾಯ್ಕ ಅವರು ನೇಮಕವಾಗಿದ್ದಾರೆ. ಸ್ಕೋಡ್‌ವೆಸ್ ಮೂಲಕ ಜನಸ್ನೇಹಿ ಕಾರ್ಯಕ್ರಮ ನಡೆಸುತ್ತಿರುವ ಅವರ ಸೇವೆ ಗಮನಿಸಿ ಬೃಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು ವೆಂಕಟೇಶ ನಾಯ್ಕ ಅವರಿಗೆ ಈ ಜವಾಬ್ದಾರಿ ನೀಡಿದ್ದಾರೆ.
ಶಿರಸಿಯ ಸುಪ್ರಿಯಾ ಇಂಟರ್‌ನ್ಯಾಷನಲ್ ಹೋಟೇಲಿನಲ್ಲಿ ಶನಿವಾರ ಬೃಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಪಾದಪೂಜೆ ನಡೆಯಿತು. ವಿಶೇಷ ಅಭಿನಂದನಾ ಪಾದಪೂಜಾ ಸೇವಾ ಕಾರ್ಯಕ್ರಮದಲ್ಲಿ ವಿವಿಧ ತಾಲೂಕಿನ ಗಣ್ಯರು ಭಾಗವಹಿಸಿದ್ದರು. ಗುರು-ಹಿರಿಯರ ಸಮ್ಮುಖದಲ್ಲಿ ಸ್ವಾಮೀಜಿ ವೆಂಕಟೇಶ ನಾಯ್ಕ ಅವರಿಗೆ ಜವಾಬ್ದಾರಿ ನೀಡಿದರು.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವೆಂಕಟೇಶ ನಾಯ್ಕ ಅವರು ಶ್ರಮಿಸುತ್ತಿದ್ದಾರೆ. ಅನೇಕ ಸಂಘ-ಸAಸ್ಥೆಗಳ ಅಭಿವೃದ್ಧಿಗಾರಿ ಅವರು ದುಡಿದಿದ್ದಾರೆ. ಇದೀಗ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ವ್ಯಾಪ್ತಿಯಲ್ಲಿ ಸಮಾಜ ಮತ್ತು ಶ್ರೀ ರಾಮ ಕ್ಷೇತ್ರದ ಧಾರ್ಮಿಕ ಸಂಘಟನೆಯ ಹೊಣೆಯನ್ನು ಅವರು ಸಂತಸದಿAದ ಒಪ್ಪಿಕೊಂಡಿದ್ದಾರೆ.
ಈ ವೇಳೆ ಶಿರಸಿ ತಾಲೂಕು ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ನೇಮಕವಾಗಿದ್ದಾರೆ. ಜೊತೆಗೆ ಸಿದ್ದಾಪುರದ ಕೆ ಜಿ. ನಾಯ್ಕ, ವಿ ಎನ್ ನಾಯ್ಕ, ಶಿರಸಿಯ ಗಣಪತಿ ನಾಯ್ಕ ದೇವಿಕೆರೆ, ಶ್ರೀನಿವಾಸ ನಾಯ್ಕ, ಆನಂದ ನಾಯ್ಕ, ನಾಗೇಶ ನಾಯ್ಕ, ಭಟ್ಕಳದ ಶ್ರೀಧರ ನಾಯ್ಕ, ಕೃಷ್ಣ ನಾಯ್ಕ, ಮೋಹನ್ ನಾಯ್ಕ, ಹೊನ್ನಾವರದ ಟಿ.ಟಿ. ನಾಯ್ಕ, ವಾಮನ ನಾಯ್ಕ, ಕುಮಟಾದ ಮಂಜುನಾಥ ನಾಯ್ಕ, ಹೆಚ್ ಆರ್ ನಾಯ್ಕ, ಅಂಕೋಲಾದ ನಾಗೇಶ ನಾಯ್ಕ, ಯಲ್ಲಾಪುರದ ನರಸಿಂಹ ನಾಯ್ಕ ಸೇರಿ ಅನೇಕರು ಶ್ರೀಗಳ ಆಶೀರ್ವಾದಪಡೆದರು.