ಹೊಸ ವರ್ಷಕ್ಕೆ ಎರಡು ತಿಂಗಳು ಬಾಕಿಯಿರುವಾಗಲೇ ಶಿರಸಿಯ ಪ್ರತಿಷ್ಠಿತ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ 2026ರ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮಾಡಿದೆ.
ADVERTISEMENT
ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಿoದ `ಉತ್ತಮ ಸಹಕಾರಿ ಸಂಘ’ ಎಂಬ ಪ್ರಶಸ್ತಿಪಡೆದಿರುವ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ ಎಲ್ಲರಿಗಿಂತ ಮೊದಲು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ವಿವಿಧ ಜಾತ್ರೆ, ಹಬ್ಬ ಹರಿದಿನ, ಸರ್ಕಾರಿ ರಜೆ ಸೇರಿ ಹಲವು ಮಹತ್ವದ ವಿಷಯಗಳ ಬಗ್ಗೆ ಕ್ಯಾಲೆಂಡರಿನಲ್ಲಿ ನಮೂದಿಸಲಾಗಿದೆ. ಪ್ರತಿ ಪುಟದಲ್ಲಿಯೂ ಮಾರಿಕಾಂಬಾ ದೇವಿಯ ಆಕರ್ಷಕ ಚಿತ್ರವನ್ನು ಬಿಂಬಿಸಲಾಗಿದೆ. ಜೊತೆಗೆ ವಿವಾಹ ಮುಹೂರ್ತ, ಗೃಹ ಪ್ರವೇಶದ ಮುಹೂರ್ತಗಳ ಬಗ್ಗೆ ಕ್ಯಾಲೆಂಡರ್ ಮಾಹಿತಿ ಒದಗಿಸುತ್ತಿದೆ.
ADVERTISEMENT
ಸಿಪಿ ಬಝಾರಿನಲ್ಲಿರುವ ಸಂಘದ ಕಚೇರಿಯಲ್ಲಿ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ನಡೆದಿದ್ದು, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಕ್ಯಾಲೆಂಡರ್ ನೋಡಿ ಮೆಚ್ಚುಗೆವ್ಯಕ್ತಪಡಿಸಿದರು. ಸಾಮಾಜಿಕ ಧುರೀಣ ಉಪೇಂದ್ರ ಪೈ, ಹೈಕೋರ್ಟ ನ್ಯಾಯವಾದಿ ಅರುಣಾಚಲ ಹೆಗಡೆ, ಶಿರಸಿ ಕಾರ್ಯನಿಯರ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ, ಸಂಘದ ಆಂತರಿಕ ಸಲಹೆಗಾರ ಪಿ ಡಿ.ಮುದ್ಗುಣಿ ಹಾಗೂ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ್ ಅವರು ಸಂಘದ ಕೆಲಸಗಳನ್ನು ಗಮನಿಸಿ ಮೆಚ್ಚುಗೆಯ ಮಾತನಾಡಿದರು.
ADVERTISEMENT
`ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಿoದ ಹೊಸ ವರ್ಷಕ್ಕೆ ಎರಡು ತಿಂಗಳ ಮೊದಲೇ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದರಿಂದ ಅನೇಕರಿಗೆ ಅನುಕೂಲವಾಗಲಿದೆ. ಎಲ್ಲಾ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್ ಹಾಗೂ ಡೈರಿ ನಿತ್ಯದ ಕೆಲಸ-ಕಾರ್ಯಗಳಿಗೆ ಪೂರಕವಾಗಿದೆ’ ಎಂದು ಗಣ್ಯರು ಬಣ್ಣಿಸಿದರು. `ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ 25 ವರ್ಷದ ಹೊಸ್ತಿಲಿನಲ್ಲಿದ್ದು, ಈ ಬಾರಿ ರಜತ ಮಹೋತ್ಸವ ಆಚರಣೆ ನಡೆಸುವ ಬಗ್ಗೆ ಸಂಘದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಅವರು ಆಗಮಿಸಿದವರಿಗೆ ಮಾಹಿತಿ ನೀಡಿದರು.
ಡೈರಿ ಬಿಡುಗಡೆಯ ದೃಶ್ಯ
`ಗ್ರಾಹಕರ ಸಹಕಾರವೇ ಸಂಘದ ಯಶಸ್ಸಿಗೆ ಕಾರಣ’ ಎಂದು ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ವಿವರಿಸಿದರು. `ಗಣ್ಯರಿಗೆ ಹಾಗೂ ಗ್ರಾಹಕರಿಗೆ ಸಂಘದಿoದಲೇ ಕ್ಯಾಲೆಂಡರ್ ಹಾಗೂ ಡೈರಿ ತಲುಪಿಸಲಾಗುತ್ತದೆ’ ಎಂದು ಅವರು ತಿಳಿಸಿದರು.