ಹಿಟ್ & ರನ್ ಪ್ರಕರಣದಲ್ಲಿ ಅಪರಿಚಿತ ವಾಹನ ಬಡಿದು ಸಾವನಪ್ಪಿದವರ ಸಂಬoಧಿಕರಿಗೆ ಸರ್ಕಾರ 2 ಲಕ್ಷ ರೂ ಪರಿಹಾರ ಕೊಡುತ್ತದೆ. ಆದರೆ, ಯಲ್ಲಾಪುರದಲ್ಲಿ ನಡೆದ ಅಪರಿಚಿತ ವಾಹನ ಅಪಘಾತದಲ್ಲಿ ಅಪರಿಚಿತ ಭಿಕ್ಷುಕ ಸಾವನಪ್ಪಿದ್ದು, ಪರಿಹಾರಪಡೆಯಲು ಸಹ ಸಂಬoಧಿಕರು ಬಂದಿಲ್ಲ!
ಕೆಲ ದಿನಗಳಿಂದ ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ 70 ವರ್ಷದ ಭಿಕ್ಷುಕರೊಬ್ಬರು ಅಲೆದಾಡುತ್ತಿದ್ದರು. ಸೆಪ್ಟೆಂಬರ್ 15ರ ರಾತ್ರಿ 11 ಗಂಟೆಗೆ ಯಲ್ಲಾಪುರ ತೆಂಗಿನಗೇರಿ ಬಳಿ ವಾಹನವೊಂದು ಅವರಿಗೆ ಗುದ್ದಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಭಿಕ್ಷುಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ರವಾನಿಸಲಾಯಿತು. ಆದರೆ, ಅದರಿಂದ ಅಪರಿಚಿತ ಭಿಕ್ಷುಕನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪಘಾತಕ್ಕೆ ಕಾರಣವಾದ ವಾಹನವನ್ನು ಗುರುತಿಸಲು ಸಾಧ್ಯವಾಗಿಲ್ಲ.
ಅಕ್ಟೊಬರ್ 2ರಂದು ಗಾಯಗೊಂಡಿದ್ದ ಭಿಕ್ಷುಕ ಸಾವನಪ್ಪಿದರು. ಭಿಕ್ಷುಕನ ಹೆಸರು-ವಿಳಾಸ ಹುಡುಕಲು ಪೊಲೀಸರು ಹರಸಾಹಸ ನಡೆಸಿದರು. ಭಿಕ್ಷುಕ ಸಾವನಪ್ಪಿದ ವಿಷಯ ಅವರ ಸಂಬAಧಿಕರಿಗೆ ಗೊತ್ತಾಗಲಿಲ್ಲ. ವಾರಸುದಾರರಿಗೂ ಆ ಬಗ್ಗೆ ಮಾಹಿತಿ ಸಿಗಲಿಲ್ಲ. ಹೀಗಾಗಿ ಭಿಕ್ಷುಕನಿಗೆ ಆದ ಅಪಘಾತ ಹಾಗೂ ಸಾವಿನ ಬಗ್ಗೆ ಯಾರೂಪೊಲೀಸ್ ದೂರು ನೀಡಿರಲಿಲ್ಲ. ಇದನ್ನು ಅರಿತ ತಟಗಾರ ಕ್ರಾಸಿನಲ್ಲಿರುವ ಕ್ರೇನ್ ಆಪರೇಟರ್ ಉಮ್ರಾನ್ ಸನದಿ ಅವರು ಭಿಕ್ಷುಕನಿಗೆ ಆದ ಅಪಘಾತ ಹಾಗೂ ಸಾವಿನ ಬಗ್ಗೆ ಪೊಲೀಸ್ ದೂರು ನೀಡಿದರು.
ಸದ್ಯ ಯಲ್ಲಾಪುರ ಪೊಲೀಸರು ಭಿಕ್ಷುಕನ ವಾರಸುದಾರರ ಹುಡುಕಾಟ ನಡೆಸಿದ್ದಾರೆ. ಸಾವನಪ್ಪಿದ ಅಪರಿಚಿತ ಬಿಕ್ಷÄಕನ ಬಗ್ಗೆ ನಿಮಗೆನಾದರೂ ಗೊತ್ತಿದ್ದರೆ ಇಲ್ಲಿ ಫೋನ್ ಮಾಡಿ: 9480805257 ಅಥವಾ 9480805273