ರಾತ್ರಿ ವೇಳೆ ನಾಯಿ ಹಿಡಿದು ರಸ್ತೆ ಬದಿ ಅಲೆದಾಡುತ್ತಿದ್ದ ಕುಮಟಾದ ಗಜಾನನ ಕೋಡಿಯಾ ಅವರು ಕಾಲು ಮುರಿದುಕೊಂಡಿದ್ದಾರೆ. ಗಾಯಗೊಂಡ ಅವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಮಟಾ ಗೂಡೆಅಂಗಡಿಯ ಗಜಾನನ ಕೋಡಿಯಾ ಅವರು ಕೌರಿಕರಾಗಿದ್ದಾರೆ. ದಿನವಿಡೀ ದುಡಿಯುವ ಅವರು ರಾತ್ರಿ ತಾವು ಪ್ರೀತಿಯಿಂದ ಸಾಕಿದ ನಾಯಿ ಜೊತೆ ಸಮಯ ಕಳೆಯುತ್ತಾರೆ. ರಾತ್ರಿ 10 ಗಂಟೆ ನಂತರ ಅವರು ನಾಯಿ ಕತ್ತಿಗೆ ಸರಪಳಿ ಹಾಕಿ ವಾಕಿಂಕ್ ಹೊರಡುತ್ತಿದ್ದರು. ಆ ವೇಳೆ ನಾಯಿಯನ್ನು ಮೂತ್ರ ವಿಸರ್ಜನೆಗೆ ಕರೆದೊಯ್ಯುವ ಅಭ್ಯಾಸಹೊಂದಿದ್ದರು.
ಅಕ್ಟೊಬರ್ 3ರ ರಾತ್ರಿ 10 ಗಂಟೆಗೆ ಅವರು ನಾಯಿ ಹಿಡಿದು ರಸ್ತೆ ಬದಿಗೆ ಬಂದರು. ಆದರೆ, ಆ ನಾಯಿಯೇ ಗಜಾನನ ಕೋಡಿಯಾ ಅವರನ್ನು ರಸ್ತೆ ನಡುವೆ ಕರೆದೊಯ್ಯಿತು. ಹೀಗಿರುವಾಗ ಗುಡೇಅಂಗಡಿಯ ಚರಣ ನಾಯ್ಕ ಅವರು ಹೊಲನಗದ್ದೆಯಿಂದ ಬಾಡ ಕಡೆ ಸ್ಕೂಟಿಯಲ್ಲಿ ಬರುತ್ತಿದ್ದು, ಆ ಸ್ಕೂಟಿಗೆ ನಾಯಿ ಅಡ್ಡ ಬಂದಿತು. ಗಡಿಬಿಡಿಯಲ್ಲಿ ಚರಣ ನಾಯ್ಕ ಅವರು ಸ್ಕೂಟಿಯನ್ನು ತಿರುಗಿಸಿದರು. ಆಗ, ಸ್ಕೂಟಿ ಗಜಾನನ ಕೋಡಿಯಾ ಅವರಿಗೆ ಗುದ್ದಿತು.
ಪರಿಣಾಮ ಗಜಾನನ ಕೋಡಿಯಾ ಅವರು ನೆಲಕ್ಕೆ ಬಿದ್ದರು. ಅವರ ಎಡಕಾಲಿನ ತೊಡೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ತಮ್ಮನಿಗೆ ಆದ ಅಪಘಾತದ ಬಗ್ಗೆ ಮಂಜುನಾಥ ಕೋಡಿಯಾ ಅವರು ಕುಮಟಾ ಠಾಣೆಗೆ ಮಾಹಿತಿ ನೀಡಿ, ಪೊಲೀಸ್ ಪ್ರಕರಣ ದಾಖಲಿಸಿದರು.