ರಾತ್ರಿ 2.30ಕ್ಕೆ ಭಟ್ಕಳದ ಉದಯ ಕೋಟಾರಿ ಅವರ ಪತ್ನಿ ಮನೆಗೆ ನುಗ್ಗಿದ ಐದು ಜನ ಅಲ್ಲಿದ್ದ ಉದಯ ಕೋಟಾರಿ ಅವರನ್ನು ಎಬ್ಬಿಸಿ ಗಲಾಟೆ ಮಾಡಿದ್ದಾರೆ. ಈ ಗಲಾಟೆ ಅವಧಿಯಲ್ಲಿ ಭಾಸ್ಕರ ಮೊಗೇರ ಅವರು ಉದಯ ಕೋಟಾರಿ ಅವರ ಕೆನ್ನೆಗೆ ಬಾರಿಸಿದ್ದಾರೆ.
ಭಟ್ಕಳ ಬೆಳಕೆಯ ಕಟಗೇರಿ ಉದಯ ಕೋಟಾರಿ ಅವರು ವಾಸವಾಗಿದ್ದಾರೆ. ಅವರ ಮೇಲೆ ಇದೀಗ 2.50 ಲಕ್ಷ ರೂ ಹಣ ಎಗರಿಸಿದ ಆರೋಪ ಬಂದಿದೆ. ಇದೇ ವಿಷಯವಾಗಿ ಮಾತನಾಡುವುದಕ್ಕಾಗಿ ಕಟಗೇರಿಯ ರಾಘು ಮೊಗೇರ, ಸೋಡಿಗದ್ದೆಯ ಭಾಸ್ಕರ ಮೊಗೇರ, ಬೆಳಕೆಯ ಕೇಶವ ಮೊಗೇರ ಜೊತೆ ಮತ್ತಿಬ್ಬರು ಉದಯ ಕೋಟಾರಿ ಅವರಲ್ಲಿ ತೆರಳಿದ್ದು ಈ ವೇಳೆ ಆಕ್ರಮಣ ನಡೆಸಿದ್ದಾರೆ.
ಅಕ್ಟೊಬರ್ 21ರ ಉದಯ ಕೋಟಾರಿ ಅವರು ತಮ್ಮ ಪತ್ನಿ ಮನೆಯಲ್ಲಿದ್ದರು. ಆ ದಿನ ರಾತ್ರಿ 2.30ಕ್ಕೆ ಈ ಐದು ಜನ ಅಲ್ಲಿಗೆ ಬಂದರು. ನಿದ್ರೆಯಲ್ಲಿದ್ದ ಉದಯ ಕೋಟಾರಿ ಅವರನ್ನು ಎಬ್ಬಿಸಿ ಗಲಾಟೆ ಶುರು ಮಾಡಿದರು. 2.50 ಲಕ್ಷ ರೂ ಹಣ ತೆಗೆದುಕೊಂಡ ಬಗ್ಗೆ ಪ್ರಶ್ನಿಸಿದರು. `ನಾನು ಹಣಪಡೆದಿಲ್ಲ’ ಎಂದರೂ ಅವರು ಕೇಳಲಿಲ್ಲ. ಆ ರಾತ್ರಿ ಜಗಳ ಮಾಡಿದ ಜನ ಬೈಯಲು ಶುರು ಮಾಡಿದರು.
ಆ ಅವಧಿಯಲ್ಲಿ ಉದಯ ಕೋಟಾರ ಅವರ ಮೇಲೆ ಭಾಸ್ಕರ ಮೊಗೇರ್ ಅವರು ಕೈ ಮಾಡಿದರು. ಉದಯ ಕೋಟಾರ ಅವರ ಕೆನ್ನೆಗೆ ಬಾರಿಸಿದರು. ರಾತ್ರಿ ಮನೆ ಬಳಿ ಬಂದು ಗಲಾಟೆ ಮಾಡಿದವರ ವಿರುದ್ಧ ಉದಯ ಕೊಟಾರ್ ಅವರು ಪೊಲೀಸ್ ದೂರು ನೀಡಿದ್ದು, ಭಟ್ಕಳ ಗ್ರಾಮೀಣ ಠಾಣೆಯ ಎಎಸ್‌ಐ ಸುನೀಲ ಕುಡ್ತರಕರ ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ, ಉದಯ ಕೋಟಾರ ಅವರು ನ್ಯಾಯಾಲಯದ ಮೊರೆ ಹೋಗಿ ಆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದರು.