ಮೇಷ ರಾಶಿ: ನಿಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡಲು ಅನುಕೂಲಕರವಾದ ದಿನ. ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ಸಮತೋಲನದ ಆಹಾರ ಪದ್ಧತಿ ಅನುಸರಿಸಿ.
ವೃಷಭ ರಾಶಿ: ಹೊಸ ಸ್ನೇಹಿತರ ಭೇಟಿ ಆಗಲಿದೆ. ವ್ಯಾಪಾರ-ವಹಿವಾಟುಗಳು ಸರಾಗವಾಗಿ ಸಾಗಲಿದೆ. ಆರೋಗ್ಯದ ವಿಷಯದಲ್ಲಿ ಕಾಳಜಿವಹಿಸುವುದು ಮುಖ್ಯ.
ಮಿಥುನ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಹೆಚ್ಚು ಗೌರವ ಸಿಗಲಿದೆ. ಆಯಾಸ ಆದಾಗ ಇನ್ನಷ್ಟು ದುಡಿಯುವ ಬದಲು ಕೆಲ ಕಾಲ ವಿಶ್ರಾಂತಿಪಡೆಯಿರಿ. ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ.
ಕರ್ಕ ರಾಶಿ: ನಿಮ್ಮ ವೃತ್ತಿ ಬೆಳವಣಿಗೆಗೆ ಉತ್ತಮ ಅವಕಾಶ ಬರಲಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಮೇಲಧಿಕಾರಿಗಳ ಮುಂದೆ ಚಂಚಲತೆಯಿAದ ವರ್ತಿಸಬೇಡಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಶ್ರೇಯಸ್ಸು ಹೆಚ್ಚಲಿದೆ.
ಸಿಂಹ ರಾಶಿ: ನಿಮ್ಮ ನಾಯಕತ್ವ ಗುಣದ ಬಗ್ಗೆ ಮೆಚ್ಚುಗೆವ್ಯಕ್ತವಾಗಲಿದೆ. ಹಣಕಾಸು ವಿಷಯ ನಿರ್ವಹಣೆಯಲ್ಲಿ ಶಿಸ್ತು ರೂಡಿಸಿಕೊಳ್ಳಿ. ನಿಮ್ಮೊಳಗಿನ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಚಿತ.
ಕನ್ಯಾ ರಾಶಿ: ನಿಮ್ಮ ಕೆಲಸದಲ್ಲಿ ಹೆಚ್ಚಿನ ಹೊಣೆಗಾರಿಕೆ ಬರಲಿದೆ. ಆತ್ಮ ವಿಶ್ವಾಸದಿಂದ ಮಾಡುವ ಕೆಲಸ ಯಶಸ್ಸಿಗೆ ಕಾರಣವಾಗಲಿದೆ. ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರಲು ಸಕಾಲ.
ತುಲಾ ರಾಶಿ: ಆಪ್ತರ ಜೊತೆ ಸಮಾಲೋಚನೆಯಿಂದ ಸ್ನೇಹ ಗಟ್ಟಿ ಆಗಲಿದೆ. ಹೊಸ ವಿಷಯಗಳು ನಿಮ್ಮನ್ನು ಆವರಿಸಲಿದೆ. ಜೀವನದಲ್ಲಿ ಸಾರ್ಥಕ ಮನೋಭಾವವನ್ನು ತಾಳಲಿದ್ದೀರಿ.
ವೃಶ್ಚಿಕ ರಾಶಿ: ಸಂಕಟ ಹಾಗೂ ಸವಾಲುಗಳನ್ನು ನೀವು ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ಮನಸ್ಸಿನಲ್ಲಿ ದೃಢವಾದ ವಿಷಯ ಬೇರೂರಲಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಧನು ರಾಶಿ; ಹೊಸ ಅವಕಾಶಗಳಿಗಾಗಿ ಪ್ರಯಾಣದ ಸಾಧ್ಯತೆಗಳಿವೆ. ನಿಮ್ಮ ಓದು-ಅಧ್ಯಯನ ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ. ಉತ್ತಮ ಸಂವಹನ ನಿಮಗೆ ಪ್ರಯೋಜನಕಾರಿ.
ಮಕರ: ಕೆಲಸದ ವಿಷಯದಲ್ಲಿ ದೊಡ್ಡ ಸಾಧನೆ ಸಾಧ್ಯವಿದೆ. ಕುಟುಂಬದವರ ಜೊತೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉತ್ತಮ. ಹೊಸ ತಂತ್ರಗಳನ್ನು ಅನುಸರಿಸುವುದು ಅನಿವಾರ್ಯವಾಗಲಿದೆ.
ಕುಂಭ ರಾಶಿ: ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಆಗಲಿದ್ದು, ಇಡೀ ದಿನ ಉತ್ಸಾಹದಿಂದ ಕೂಡಿರಲಿದೆ. ಆರ್ಥಿಕ ವಿಷಯಗಳು ಪ್ರಗತಿ ಕಾಣಲಿದೆ. ಕನಸಿನ ಯೋಜನೆಗಳು ಯಶಸ್ಸು ಕೊಡಲಿದೆ.
ಮೀನ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸವಾದರೆ ನೀವೇ ಚಿಕಿತ್ಸೆಪಡೆಯುವ ಬದಲು ವೈದ್ಯರನ್ನು ಭೇಟಿ ಮಾಡಿ. ಕುಟುಂಬದವರ ಜೊತೆ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಜೂಜಾಟಗಳಿಂದ ದೂರವಿರುವುದು ಉತ್ತಮ.