ಮೇಷ ರಾಶಿ: ಆರೋಗ್ಯದ ಬಗ್ಗೆ ಗಮನಹರಿಸಿ. ಹಣಕಾಸು ನಿರ್ವಹಣೆಯ ಬಗ್ಗೆ ಕಾಳಜಿ ಅಗತ್ಯ. ಕೆಲಸದಲ್ಲಿ ಒಗ್ಗಟ್ಟು ಅನಿವಾರ್ಯ.
ವೃಷಭ ರಾಶಿ: ನಿಮ್ಮೊಳಗಿನ ಧೈರ್ಯ ಉತ್ಸಾಹ ಹೆಚ್ಚಿಸಲಿದೆ. ಕೆಲಸದಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ಸಮಯ. ಯೋಗ ಹಾಗೂ ಧ್ಯಾನ ಮಾಡಿ.
ಮಿಥುನ ರಾಶಿ: ನಿಮ್ಮ ಮಾತು ಬೇರೆಯವರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ವ್ಯವಹಾರಗಳು ವೃದ್ಧಿ ಆಗಲಿದೆ.
ಕರ್ಕ ರಾಶಿ: ದಾಂಪತ್ಯ ಜೀವನ ಉತ್ತಮವಾಗಿರಲಿದೆ. ವಿದ್ಯಾ ದೇವರ ಆರಾಧನೆ ಮಾಡಿದರೆ ಉತ್ತಮ. ಅನಗತ್ಯ ಜಗಳ ನಿಮಗೆ ಒಳ್ಳೆಯದಲ್ಲ.
ಸಿಂಹ ರಾಶಿ: ನಿಮ್ಮ ಮನಸ್ಸನ್ನು ಉತ್ತಮ ವಿಚಾರದ ಕಡೆ ಸೆಳೆಯಿರಿ. ಕೆಲಸ ಅಧಿಕ ಆದಾಗ ವಿಶ್ರಾಂತಿ ಅಗತ್ಯ. ಶಾಂತಿ ಹಾಗೂ ಧೈರ್ಯದಿಂದ ಕೆಲಸ ಮಾಡಿ.
ಕನ್ಯಾ ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಕೌಶಲ್ಯ ಅಳವಡಿಸಿಕೊಳ್ಳಿ. ಅಪರಿಚಿತರ ಬಳಿ ಮಾತನಾಡುವಾಗ ಎಚ್ಚರಿಕೆವಹಿಸಿ. ನಿಮ್ಮ ಜೀವನಕ್ಕೆ ನೇರ ನಡವಳಿಕೆ ಉತ್ತಮ.
ತುಲಾ ರಾಶಿ: ಆದಾಯದ ಮೂಲಗಳು ವೃದ್ಧಿ ಆಗಲಿದೆ. ಸಮಾಧಾನದಿಂದ ಮಾಡುವ ಕೆಲಸ ಫಲ ಕೊಡಲಿದೆ. ಹಣಕಾಸು ವಿಷಯದಲ್ಲಿ ಸ್ಥಿರತೆ ಕಾಣಲಿದೆ.
ವೃಶ್ಚಿಕ ರಾಶಿ: ವೈಯಕ್ತಿಕ ಜೀವನದಲ್ಲಿ ಬೇರೆಯವರ ದಾಳಿ ಆಗುವ ಲಕ್ಷಣವಿದೆ. ಆಯಾಸ ತಪ್ಪಿಸಿ, ಚಟುವಟಿಕೆಯಿಂದ ಕೆಲಸ ಮಾಡಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಕಡೆ ಗಮನಕೊಡಿ.
ಧನು ರಾಶಿ: ನಿಮ್ಮ ಹಳೆಯ ಯೋಜನೆಗಳು ಫಲ ಕೊಡಲಿದೆ. ಹೊಸ ಉದ್ಯೋಗಗಳು ಅರೆಸಿ ಬರಲಿದೆ. ಕುಟುಂಬದವರ ಜೊತೆ ಕಾಲ ಕಳೆಯಿರಿ.
ಮಕರ ರಾಶಿ: ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ. ನಿವೃತ್ತಿ ಅಂಚಿನಲ್ಲಿದ್ದವರು ಭವಿಷ್ಯದ ಜೀವನದ ಬಗ್ಗೆ ಚಿಂತಿಸಿ. ಕೆಲಸದ ವಿಷಯದಲ್ಲಿ ರಾಜಿ ಬೇಡ.
ಕುಂಭ ರಾಶಿ: ಪ್ರವಾಸದ ಅವಧಿಯಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಗಳಿವೆ. ಕುಟುಂಬದವರ ಜೊತೆ ಸಹನೆಯಿಂದ ವರ್ತಿಸಿ. ನಿಮ್ಮ ಮನಸ್ಸಿನಲ್ಲಿ ಉತ್ತಮ ಆಲೋಚನೆ ಮಾತ್ರ ಬರುವಂತೆ ನೋಡಿಕೊಳ್ಳಿ.
ಮೀನ ರಾಶಿ: ನಿಮ್ಮ ಬುದ್ಧಿವಂತಿಕೆಯ ನಿರ್ಧಾರಗಳು ಫಲ ಕೊಡಲಿದೆ. ಉದ್ಯೋಗದ ವಿಷಯದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ.