ಮೇಷ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ನಿಮ್ಮ ಹಣಕಾಸಿನ ಚಿಂತೆ ದೂರವಾಗಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಸಿಗಲಿದೆ. ದಾನ ಮಾಡಿದರೆ ಉತ್ತಮ ಫಲ ಸಿಗಲಿದೆ.
ವೃಷಭ ರಾಶಿ: ನಿಮ್ಮ ಅದೃಷ್ಟ ಚನ್ನಾಗಿರುವುದರಿಂದ ಯಶಸ್ಸಿನ ದಾರಿ ಸುಲಭವಾಗಿರಲಿದೆ. ಉದ್ಯೋಗದಲ್ಲಿ ಉನ್ನತ ಹುದ್ದೆ ಸಿಗಲಿದೆ. ಒಳ್ಳೆಯ ಸುದ್ದಿಗಳು ಕೇಳಿ ಬರಲಿದೆ.
ಮಿಥುನ ರಾಶಿ: ತಂದೆ-ತಾಯಿ ಆಶೀರ್ವಾದದಿಂದ ಆಸ್ತಿ ಖರೀದಿ ಸಾಧ್ಯವಿದೆ. ಖರ್ಚುಗಳನ್ನು ನಿಯಂತ್ರಿಸಿದರೆ ನಿಮ್ಮ ಸಂಪತ್ತು ವೃದ್ಧಿ ಆಗಲಿದೆ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಕರ್ಕ ರಾಶಿ: ದೊಡ್ಡ ಪ್ರಮಾಣದಲ್ಲಿ ಆದಾಯ ಹರಿದುಬರಲಿದೆ. ವ್ಯಾಪಾರ-ವಹಿವಾಟುಗಳು ಚನ್ನಾಗಿರಲಿವೆ. ನಿಮ್ಮ ಆತುರದ ನಿರ್ಧಾರಗಳು ದಿಢೀರ್ ಸಮಸ್ಯೆಗೆ ಕಾರಣವಾಗಲಿದೆ.
ಸಿಂಹ ರಾಶಿ: ಸಾಮಾಜಕ ಹಾಗೂ ರಾಜಕೀಯ ಕ್ಷೇತ್ರದಲ್ಲಿದ್ದವರಿಗೆ ಯಶಸ್ಸು ಸಿಗಲಿದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ಶತ್ರುಗಳ ಕುತಂತ್ರದಿoದ ಬೇಸರವಾಗಲಿದೆ.
ಕನ್ಯಾ ರಾಶಿ: ಶೃದ್ಧೆಯಿಂದ ಮಾಡಿದ ಕೆಲಸ ಮುಂದೆ ಫಲ ಕೊಡಲಿದೆ. ನಿಮ್ಮ ವಿರುದ್ಧದ ವಾತಾವರಣವನ್ನು ಶಾಂತಿಯಿAದ ನಿಭಾಯಿಸಿ. ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಲು ಉತ್ತಮ ದಿನ.
ತುಲಾ ರಾಶಿ: ನಿಮ್ಮ ಹಣಕಾಸಿನ ಸಮಸ್ಯೆ ಸದ್ಯಕ್ಕೆ ದೂರವಾದರೂ ಎಚ್ಚರಿಕೆ ಅಗತ್ಯ. ಹೊಸ ಆದಾಯಕ್ಕಾಗಿ ಅನ್ವೇಷಿಸಿ. ಗೌರವ ಸಿಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಖ್ಯಾತಿ ಇನ್ನಷ್ಟು ವಿಸ್ತಾರವಾಗಲಿದೆ. ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಮಿತ್ರರ ಜೊತೆ ಮಾತನಾಡಿದರೆ ಮನಸ್ಸು ಹಗುರವಾಗಲಿದೆ.
ಧನು ರಾಶಿ: ಹಣಕಾಸಿನ ಸಮಸ್ಯೆ ದೂರವಾಗಲಿದೆ. ನಷ್ಟವಾದ ಉದ್ಯೋಗ ಮರಳಿ ಸಿಗಲಿದೆ. ಹನುಮಂತನ ಆರಾಧನೆ ನಿಮಗೆ ಒಳಿತು ಮಾಡುತ್ತದೆ.
ಮಕರ ರಾಶಿ: ನಿಮ್ಮ ಕೆಲಸ ಕಾರ್ಯಗಳಲ್ಲಿ ಮೆಚ್ಚುಗೆಯ ಮಾತುಗಳು ಬರಲಿದೆ. ಧನ ಆಗಮನದ ನಿರೀಕ್ಷೆಯಿದೆ. ಪರೀಕ್ಷೆಗಳು ಸರಾಗವಾಗಿ ಸಾಗಲಿದೆ. ಈ ದಿನ ವಾಹನ ಬಳಕೆ ಬೇಡ.
ಕುಂಭ ರಾಶಿ: ಹಳೆಯ ಬಾಕಿ ವಸೂಲಾತಿ ಆಗಲಿದೆ. ದೇಹಕ್ಕೆ ಸುಸ್ತಾಗಬಹುದು. ಆಸ್ತಿ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ.
ಮೀನ ರಾಶಿ: ಆರೋಗ್ಯ ಮತ್ತು ದಾಂಪತ್ಯದಲ್ಲಿ ಸಾಮರಸ್ಯ ಮುಖ್ಯ. ಪ್ರೀತಿ-ಪ್ರೇಮ ವಿಷಯದಲ್ಲಿ ಉತ್ತಮ ಫಲ. ಸಾಮಾಜಿಕ ಮನ್ನಣೆ ಸಿಗಲಿದೆ. ಕೌಶಲ್ಯ ವೃದ್ಧಿಗೆ ಪ್ರಯತ್ನಿಸಿ.