ಮೇಷ ರಾಶಿ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಸಾಧ್ಯವಿದ್ದು ಬದಲಾವಣೆಗೆ ಸಿದ್ಧವಾಗಿರಿ. ಆರೋಗ್ಯದ ಬಗ್ಗೆ ಚಿಂತಿಸುವುದರ ಜೊತೆ ಕೋಪವನ್ನು ತಪ್ಪಿಸಿ. ಕಲಾ ಆರಾಧನೆ ಒಳ್ಳೆಯದು.
ವೃಷಭ ರಾಶಿ: ಐಷಾರಾಮಿ ಜೀವನಕ್ಕಾಗಿ ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಕುಟುಂಬದ ಸಮಸ್ಯೆ ಬಗೆಹರಿಯಲಿದೆ. ಆಪ್ತರು ಹಣ ಕೇಳುವ ಸಾಧ್ಯತೆಯಿದೆ.
ಮಿಥುನ ರಾಶಿ: ಅನೇಕ ದಿನಗಳಿಂದ ಬಾಕಿಯಿರುವ ಹಣ ಮರಳಿ ಸಿಗಲಿದೆ. ಪರಿಶ್ರಮಕ್ಕೆ ಫಲ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲಿದೆ.
ಕರ್ಕ ರಾಶಿ: ಕಾನೂನು ವಿಚಾರಗಳಿಂದ ದೂರವಿರುವುದು ಉತ್ತಮ. ಕಳೆದ ವಸ್ತು ಮರಳಿ ಸಿಗುವ ಸಾಧ್ಯತೆಯಿದೆ. ನಿಮ್ಮ ಮಾತು ಹಿತವಾಗಿರಲಿ.
ಸಿಂಹ ರಾಶಿ: ಬಹುದಿನದ ಕೆಲಸ ಈ ದಿನ ಮುಗಿಯಲಿದೆ. ಕುಟುಂಬದಲ್ಲಿ ವಿವಾದ ಸಾಧ್ಯತೆಯಿದ್ದು, ಜಾಣ್ಮೆಯಿಂದ ಅದನ್ನು ಬಗೆಹರಿಸಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ.
ಕನ್ಯಾ ರಾಶಿ: ಆಪ್ತರ ಮದುವೆಯಲ್ಲಿ ಅಡೆತಡೆ ಆಗುವ ಸಾಧ್ಯತೆಯಿದೆ. ಸಮಸ್ಯೆಗಳ ಬಗ್ಗೆ ಸಂಗಾತಿ ಜೊತೆ ಚರ್ಚಿಸಿ. ಸೋಮಾರಿತನ ನಿಮಗೆ ಸೂಕ್ತವಲ್ಲ.
ತುಲಾ ರಾಶಿ: ಹೊಸ ಅವಕಾಶಗಳು ಎದುರು ನೋಡುತ್ತಿದ್ದು, ಅದನ್ನು ಬಳಸಿಕೊಳ್ಳುವ ಅಗತ್ಯ ನಿಮಗಿದೆ. ಸಾಮಾಜಿಕ ಚಟುವಟಿಕೆಗಳಿಂದ ಯಶಸ್ಸು ಸಿಗಲಿದೆ. ಪೂಜಾ ಕಾರ್ಯಗಳು ಒಳಿತು ಮಾಡಲಿದೆ.
ವೃಶ್ಚಿಕ ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಪ್ರಗತಿ ಸಾಧ್ಯವಿದೆ. ಹಣಕಾಸಿನ ಲಾಭಗಳು ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಧನು ರಾಶಿ: ಹೊಸ ಭರವಸೆಗಳು ಸಿಗಲಿದೆ. ಸ್ನೇಹಿತರ ಜೊತೆ ಉತ್ತಮ ಸಂವಾದ ನಡೆಯಲಿದೆ. ಹಣಕಾಸಿನಲ್ಲಿ ಸುಧಾರಣೆ ಆಗಲಿದೆ.
ಮಕರ ರಾಶಿ: ಆರ್ಥಿಕ ವ್ಯವಹಾರ ಸರಾಗವಾಗಿ ಸಾಗಲಿದೆ. ಆಪ್ತರ ನಡುವೆ ಜಗಳವಾಗುವ ಲಕ್ಷಣವಿದೆ. ಹೊಸ ಕೆಲಸದ ಶುರುವಿಗೆ ಸಕಾಲ.
ಕುಂಭ ರಾಶಿ: ನಿಮ್ಮ ನಿರೀಕ್ಷೆಗಳು ಈಡೇರಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ನಿಮ್ಮೊಳಗೆ ಆಲೋಚನೆ ಬೆಳೆಯಲಿದೆ.
ಮೀನು ರಾಶಿ: ವೃತ್ತಿಯಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಬಂಧು-ಮಿತ್ರರ ಸಹಕಾರ ಸಿಗಲಿದೆ. ಸ್ವಚ್ಚತೆ ಬಗ್ಗೆ ಗಮನಕೊಡಿದ್ದರೆ ರೋಗಬಾಧೆಯ ಲಕ್ಷಣವಿದೆ.