ಮೇಷ ರಾಶಿ: ನಿಮ್ಮ ಆದಾಯ ಏರಿಕೆಯಾಗಲಿದ್ದು, ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ನೀವು ಗಮನಸೆಳೆಯುವಿರಿ. ಅಧ್ಯಯನದ ವಿಷಯಗಳು ನಿಮ್ಮ ವೃತ್ತಿ ಜೀವನವನ್ನು ಸುರಳಿತವಾಗಿಸುತ್ತದೆ. ಯಾತ್ರೆ-ಪ್ರವಾಸಕ್ಕೆ ಸರಿಯಾದ ಸಮಯ.
ವೃಷಭ ರಾಶಿ: ಸಾಮಾಜಿಕ ಸಂಪರ್ಕ ಅಭಿವೃದ್ಧಿ ಆದಷ್ಟು ನಿಮ್ಮ ಬೆಳವಣಿಗೆ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಕಡಿಮೆ ಬೆಲೆಗೆ ಹೆಚ್ಚು ಖರೀದಿ ಎಂಬ ಮೋಸಕ್ಕೆ ಒಳಗಾಗಬೇಡಿ.
ಮಿಥುನ ರಾಶಿ: ಕುಟುಂಬದವರ ಬೆಂಬಲದಿ0ದ ಎಲ್ಲಾ ಕೆಲಸಗಳು ಸರಾಗವಾಗಿ ಸಾಗಲಿದೆ. ಹೊಸ ವಿಷಯಗಳ ಕಲಿಕೆಗೆ ಯೋಗ್ಯ ಸಮಯ ಕೂಡಿಬರಲಿದೆ. ಹಣಕಾಸು ಪರಿಸ್ಥಿತಿ ಸರಿಯಾಗಿರಲಿದೆ.
ಕರ್ಕ ರಾಶಿ: ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ಮೋಸ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ. ಉದ್ಯೋಗ ಶಾಂತ ರೀತಿಯಲ್ಲಿ ಸಾಗಲಿದೆ.
ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಬದಲಾವಣೆಯ ಸಮಯ ಬರಲಿದೆ. ಹಣಕಾಸಿನ ಹರಿವು ಚನ್ನಾಗಿ ಆಗಲಿದೆ. ಹೊಸ ವಸ್ತು ಖರೀದಿಗೆ ಯೋಗ್ಯ ದಿನ.
ಕನ್ಯಾ ರಾಶಿ: ಕೆಲಸದ ಸ್ಥಳದಲ್ಲಿ ಪ್ರೀತಿಯ ವಾತಾವರಣ ಸಿಗಲಿದೆ. ಹಣಕಾಸು ಹೂಡಿಕೆ ಅಥವಾ ಹೊಸ ಯೋಜನೆಗಳಿಗೆ ಒಳ್ಳೆಯ ದಿನವಾಗಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ತುಲಾ ರಾಶಿ: ನೀವು ಕೈಗೊಂಡ ಕಾರ್ಯ ಯಶಸ್ವಿಯಾಗಿ ನಡೆಯಲಿದೆ. ಕೆಲಸದಲ್ಲಿ ಸಾಧನೆ ಸಾಧ್ಯವಿದೆ. ದೂರ ಪ್ರಯಾಣ ಈ ದಿನ ಒಳ್ಳೆಯದಲ್ಲ.
ವೃಶ್ಚಿಕ ರಾಶಿ: ಬಂಧು ಮಿತ್ರದಿಂದ ಒಳ್ಳೆಯ ಸುದ್ದಿಗಳು ಬರಲಿದೆ. ಆರೋಗ್ಯ ಸಮಸ್ಯೆ ಕಾಡಬಹುದು. ಉದ್ಯೋಗ ಹಾಗೂ ಹಣಕಾಸು ವಿಷಯದಲ್ಲಿ ಪ್ರಗತಿ ಆಗಲಿದೆ.
ಧನು ರಾಶಿ: ಹಣಕಾಸು ವಿಭಜನೆಗಳು ಸರಿಯಾಗಿ ಆಗಲಿದೆ. ಕುಟುಂಬದ ಒಳತಿಗಾಗಿ ನಿಮ್ಮ ಶ್ರಮ ಅನಿವಾರ್ಯವಾಗಲಿದೆ. ಆರೋಗ್ಯ ಚೇತರಿಕೆ ಆಗಲಿದೆ. ಹೊಸ ಕಾರ್ಯಗಳು ಯಶಸ್ವಿ ಆಗುತ್ತದೆ.
ಮಕರ ರಾಶಿ: ನಿಮ್ಮ ಕೆಲಸದಲ್ಲಿ ಹೊಸ ಜವಾಬ್ದಾರಿ ಬರಲಿದೆ. ಹಣಕಾಸು ವೆಚ್ಚದಲ್ಲಿ ನಿಯಂತ್ರಣ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸೌಂದರ್ಯ ಹಾಳಾಗದಂತೆ ಗಮನಿಸಿ.
ಕುಂಭ ರಾಶಿ: ಉದ್ಯೋಗ ಸಮಸ್ಯೆಗಳಿಗೆ ಸ್ನೇಹಿತರಿಂದ ಪರಿಹಾರ ಸಿಗಲಿದೆ. ಪ್ರಯಾಣದ ಯೋಗ ಕೂಡಿ ಬರಲಿದೆ. ನಿಮ್ಮ ಗುರಿ ಸಾಧನೆ ಸಾಧ್ಯವಿದೆ.
ಮೀನ ರಾಶಿ: ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿ. ಆರ್ಥಿಕ ವಿಷಯಗಳು ಪ್ರಗತಿ ಆಗಲಿದೆ. ಕುಟುಂಬದಲ್ಲಿ ಉತ್ತಮ ವಾತಾವರಣ ಸಿಗಲಿದೆ. ಶೈಕ್ಷಣಿಕ ಕೆಲಸಗಳು ಸರಾಗವಾಗಿ ಸಾಗಲಿದೆ. ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ.