ಮೇಷ ರಾಶಿ: ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಆಯ್ಕೆ ನಿಮ್ಮ ಮುಂದಿದೆ. ಬೇರೆಯವರ ಮಾತು ಕೇಳುವ ಬದಲು ಸರಿಯಾದ ನಿರ್ಣಯ ಮಾಡಿ.
ವೃಷಭ ರಾಶಿ: ಹಳೆಯ ಸ್ನೇಹಿತರ ಭೇಟಿ ಆಗಲಿದೆ. ಸ್ನೇಹಿತರ ಮೂಲಕ ಹೊಸ ಅವಕಾಶಗಳು ಸಿಗಲಿದೆ. ನೀವು ಮಾಡಿದ ಸಣ್ಣ ಪ್ರಯತ್ನ ಸಹ ಉತ್ತಮ ಫಲ ಕೊಡಲಿದೆ.
ಮಿಥುನ ರಾಶಿ: ಬೇರೆಯವರು ಹೇಳಿದ ಮಾತಿಗೆ ಬೇಸರಿಸಿ ಪ್ರಯೋಜನವಿಲ್ಲ. ನಿಮ್ಮ ಕುಟುಂಬದವರು ಸದಾ ನಿಮ್ಮ ಬೆಂಬಲಕ್ಕೆ ಇರುತ್ತಾರೆ. ಜೀವನದಲ್ಲಿ ಯಶಸ್ಸುಪಡೆಯಲು ಶ್ರಮ ಅಗತ್ಯ.
ಕರ್ಕ ರಾಶಿ: ಜಗಳ, ಗಲಾಟೆ, ವಿವಾದಗಳು ನಿಮಗೆ ಒಳ್ಳೆಯದಲ್ಲ. ಒತ್ತಡದ ಬದುಕಿನಿಂದ ಹೊರಬರಲು ಪ್ರಯತ್ನಿಸಿ. ತಾಳ್ಮೆಯೇ ನಿಮ್ಮ ಸಾಧನೆಯ ಸೂತ್ರವಾಗಲಿದೆ.
ಸಿಂಹ ರಾಶಿ: ಖರೀದಿ ಯೋಜನೆಗಳಿದ್ದರೆ ಅದನ್ನು ಮುಂದೂಡಿ. ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಾಕಷ್ಟು ವಿಚಾರ ಮಾಡಿ. ಕುಟುಂಬದ ಜೊತೆ ಕಾಲ ಕಳೆಯಿರಿ.
ಕನ್ಯಾ ರಾಶಿ: ನಿಮ್ಮ ಮನಸ್ಸು ಚಂಚಲ ಸ್ಥಿತಿಯಲ್ಲಿದ್ದು, ಶಾಂತ ಚಿತ್ತದಿಂದ ಯೋಚನೆ ಮಾಡುವುದು ಅಗತ್ಯ. ನೀವು ವಾಹನಗಳನ್ನು ಓಡಿಸುವುದು ಒಳಿತಲ್ಲ. ಅನಿವಾರ್ಯವಾಗಿದ್ದರೆ ನಿಧಾನವಾಗಿ ವಾಹನ ಓಡಿಸಿ.
ತುಲಾ ರಾಶಿ: ನಿಮ್ಮ ಆದಾಯ ವೃದ್ಧಿ ಆಗಲಿದೆ. ಲಾಭದಾಯಿಕ ಅವಕಾಶಗಳು ನಿಮ್ಮನ್ನು ಅರೆಸಿ ಬರಲಿದೆ. ಒತ್ತಡ ಮುಕ್ತ ಜೀವನಕ್ಕಾಗಿ ಧ್ಯಾನ ಮಾಡಿ.
ವೃಶ್ಚಿಕ ರಾಶಿ: ಮಿತ್ರರ ಸಹಕಾರದಿಂದ ಹೊಸ ರೀತಿಯ ಸಂಘಟನೆಗಳ ರಚನೆಗೆ ಅವಕಾಶವಿದೆ. ಹೊಸ ಆದಾಯ ಮೂಲಗಳು ಹುಟ್ಟಿಕೊಳ್ಳಲಿದೆ. ಆರೋಗ್ಯದಲ್ಲಿ ಕೊಂಚ ಬದಲಾವಣೆಯ ಲಕ್ಷಣಗಳಿವೆ.
ಧನು ರಾಶಿ: ವೃತ್ತಿಯಲ್ಲಿ ಬೆಳವಣಿಗೆಗೆ ಗುರು-ಹಿರಿಯರ ಸಹಕಾರ ಸಿಗಲಿದೆ. ನಿಮ್ಮ ಮನಸ್ಸು ಪ್ರಸನ್ನತೆಯಿಂದ ಕೂಡಿರಲಿದ್ದು, ಉತ್ಸಾಹ ಹೆಚ್ಚಾಗಲಿದೆ. ಚಿನ್ನ, ಭೂಮಿ ಮೇಲಿನ ಹೂಡಿಕೆಗೆ ಸೂಕ್ತ ಸಮಯ.
ಮಕರ ರಾಶಿ: ಪ್ರೀತಿ-ಪ್ರೇಮ ವಿಷಯಗಳನ್ನು ಇನ್ನಷ್ಟು ಗಾಡವಾಗಿ ನಿಮ್ಮನ್ನು ಕಾಡಲಿದೆ. ಧಾರ್ಮಿಕ ಕಾರ್ಯಗಳು ಸರಾಗವಾಗಿ ಸಾಗಲಿದೆ. ಮದುವೆ ಆಗದವರಿಗೆ ಸಂಗಾತಿಯ ಬಗ್ಗೆ ಸುಳಿವು ಸಿಗಲಿದೆ.
ಕುಂಭ ರಾಶಿ: ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವ ಸಾಧ್ಯತೆಯಿದ್ದು, ತಪ್ಪುಗಳನ್ನು ತಿದ್ದಿ ಮುನ್ನಡೆಯುವುದು ಮುಖ್ಯ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಲಿದ್ದೀರಿ. ಸಾಧನೆ ಮಾಡುವ ಕಡೆ ಗಮನಹರಿಸಿ.
ಮೀನ ರಾಶಿ: ಹೊಸ ಯೋಜನೆಗಳು ನಿಮ್ಮ ಯಶಸ್ಸಿಗೆ ದಾರಿ ತೋರಲಿದೆ. ಪ್ರೀತಿ ವಿಷಯವಾಗಿ ತಮಾಷೆ ಮಾಡಬೇಡಿ. ಆಕಸ್ಮಿಕ ಖರ್ಚು ವೆಚ್ಚಗಳು ಬರುವ ಸಾಧ್ಯತೆಯಿರುವುದರಿಂದ ಆರೋಗ್ಯದಲ್ಲಿ ಎಚ್ಚರಿಕೆವಹಿಸಿ.