ಮೇಷ ರಾಶಿ: ನಿಮ್ಮ ಕಾರ್ಯಕ್ಷೇತ್ರದಲ್ಲಿ ನೂತನ ಪ್ರಯತ್ನಗಳು ಯಶಸ್ವಿಯಾಗಲಿದೆ. ಮನೆಯ ವಾತಾವರಣದಲ್ಲಿ ಗೊಂದಲ ಮಾಡಿಕೊಳ್ಳಬೇಡಿ.
ವೃಷಭ ರಾಶಿ: ಈ ದಿನ ನಿಮ್ಮ ನಿರ್ಧಾರಗಳು ಫಲ ನೀಡುತ್ತವೆ. ಕೆಲಸದಲ್ಲಿ ನೂತನ ಅವಕಾಶಗಳು ಅರೆಸಿ ಬರಲಿದೆ. ಕುಟುಂಬದಲ್ಲಿ ಸಂತೃಪ್ತಿಯ ವಾತಾವರಣ ಕಾಣಲಿದೆ. ಆರೋಗ್ಯದಲ್ಲಿ ಸಣ್ಣ ಅಡೆತಡೆಗಳು ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸಿ.
ಮಿಥುನ ರಾಶಿ: ಬದುಕಿನ ಬಗ್ಗೆ ಜೊಸ ಚಿಂತೆಗಳು ಕಾಡಲಿದೆ. ವೃತ್ತಿ ಬದುಕಿನಲ್ಲಿ ಒತ್ತಡದಷ್ಟೇ ಪ್ರಮಾಣದಲ್ಲಿ ಅವಕಾಶಗಳು ಇವೆ. ಹಣಕಾಸು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದರೆ ಜಯ ಖಚಿತ.
ಕರ್ಕ ರಾಶಿ: ಉದ್ಯೋಗದಲ್ಲಿ ಸ್ಥಿತಿಗತಿಗಳಲ್ಲಿ ಸುಧಾರಣೆ ಆಗಲಿದೆ. ಹಣಕಾಸು ನಿರ್ವಹಣೆಯಲ್ಲಿ ಜಾಗೃತಿ ಅಗತ್ಯ. ಸ್ನೇಹಿತರಿಂದ ಸಹಾಯ ಸಿಗಲಿದ್ದು, ಪ್ರೀತಿ-ಪ್ರೇಮ ವಿಚಾರದಲ್ಲಿ ಪ್ರಗತಿ ಕಾಣಲಿದೆ.
ಸಿಂಹ ರಾಶಿ: ಅಧ್ಯಯನ ಅಥವಾ ಕೆಲಸದಲ್ಲಿ ಸ್ನೇಹಿತರಿಂದ ಸಹಕಾರ ಸಿಗುತ್ತದೆ. ಹಿತಕರ ಬದಲಾವಣೆಯಿಂದ ಮನಸ್ಸು ಆರಾಮದಾಯಕವಾಗಿರಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ.
ಕನ್ಯಾ ರಾಶಿ: ಆತಂಕದ ಸ್ವಭಾವ ಸಹಜವಾಗಿದ್ದು, ಅದರಿಂದ ಹೊರಬನ್ನಿ. ಕೆಲಸದಲ್ಲಿ ಒತ್ತಡಗಳನ್ನು ಸಹಿಸಿಕೊಳ್ಳಿ. ಆರೋಗ್ಯ ಸಂಬAಧಿ ಸಮಸ್ಯೆಗಳಿಗೆ ಔಷಧಿ ಅಗತ್ಯ.
ತುಲಾ ರಾಶಿ: ಹೊಸ ಯೋಜನೆಗಳು ಯಶಸ್ಸು ಕಾಣಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯವಿದೆ. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.
ವೃಶ್ಚಿಕ ರಾಶಿ: ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಳವಾಗಲಿದೆ. ಕೆಲಸದಲ್ಲಿ ಬದಲಾವಣೆ ಸಾಧ್ಯವಿದೆ. ಹಣಕಾಸು ಲಾಭ ಬರಲಿದೆ. ಆರೋಗ್ಯದಲ್ಲಿ ಜಾಗೃತಿ ಅಗತ್ಯ.
ಧನು ರಾಶಿ: ಹೊಸ ಯೋಜನೆಗಳನ್ನು ಅನುಸರಿಸಲು ಉತ್ತಮ ಒಳ್ಳೆಯ ದಿನ. ಉದ್ಯೋಗದಲ್ಲಿ ಸಹಾಯ ದೊರೆಯುತ್ತದೆ. ಹಣಕಾಸು ಬೆಳವಣಿಗೆಗೆ ಅವಕಾಶಗಳಿವೆ.
ಮಕರ ರಾಶಿ: ಕುಟುಂಬದ ವಿಷಯದಲ್ಲಿ ಅನಾನುಕೂಲತೆ ಕಾಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಹೊಸ ಅಧಿಕಾರ ಸಿಗುವ ಸಾಧ್ಯತೆಗಳಿವೆ.
ಕುಂಭ ರಾಶಿ: ವಿರೋಧಿಗಳನ್ನು ಸೋಲಿಸುವ ಸಮಯ ಬಂದಿದೆ. ಪ್ರತಿಸ್ಪರ್ಧೆಯಲ್ಲಿ ನಿಮಗೆ ಜಯ ಸಿಗಲಿದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
ಮೀನು ರಾಶಿ: ಮಾನಸಿಕ ಒತ್ತಡವಿಲ್ಲದೆ ಕೆಲಸ ಮಾಡಲು ಸಾಧ್ಯವಿದೆ. ಹಣಕಾಸಿನಲ್ಲಿ ಏರಿಳಿತ ಸಹಜವಾಗಿರುತ್ತದೆ. ಹೊಸ ಅವಕಾಶಗಳು ಅರೆಸಿ ಬರಲಿದೆ.