ಮೇಷ ರಾಶಿ: ಇಡೀ ದಿನ ತಾಳ್ಮೆಯಿಂದ ವ್ಯವಹರಿಸುವುದು ಅಗತ್ಯ. ಆರೋಗ್ಯದ ವಿಷಯದಲ್ಲಿ ನಿಷ್ಕಾಳಜಿ ಮಾಡಬೇಡಿ. ಹೊಸ ಬಗೆಯ ಚಟುವಟಿಕೆಗಳಿಗೆ ಅವಕಾಶ ಕೊಡಿ.
ವೃಷಭ ರಾಶಿ: ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರ್ಥಿಕ ವಿಷಯವಾಗಿ ಜಾಗೃತಿ ಅಗತ್ಯ. ವೃತ್ತಿ ಕ್ಷೇತ್ರದಲ್ಲಿ ನವೀನ ಅವಕಾಶ ಸಿಗಲಿದೆ.
ಮಿಥುನ ರಾಶಿ: ನಿಮ್ಮ ರಹಸ್ಯಗಳನ್ನು ಬೇರೆಯವರ ಬಳಿ ಹೇಳಬೇಡಿ. ಮಾತನಾಡುವಾಗ ಎಚ್ಚರಿಕೆ ಅಗತ್ಯ. ವಿಜ್ಞಾನ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ.
ಕರ್ಕ ರಾಶಿ: ಮನಸ್ಸಿನ ಆಳದಲ್ಲಿರುವ ಗೊಂದಲ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಆಪ್ತರ ಸಹಾಯ ಸಿಗಲಿದೆ. ಜೀವನದಲ್ಲಿನ ಸಣ್ಣ ಬದಲಾವಣೆ ಮನಸ್ಸಿಗೆ ಹಿತ ನೀಡಲಿದೆ.
ಸಿಂಹ ರಾಶಿ: ನಿಮ್ಮ ನಾಯಕತ್ವದಲ್ಲಿ ನಡೆಯುವ ಕೆಲಸಗಳು ಸರಾಗವಾಗಿ ಸಾಗಲಿದೆ. ಉದ್ಯೋಗದಲ್ಲಿ ಹೊಸ ವರಮಾನದ ಲಕ್ಷಣಗಳಿವೆ. ಸಮಸ್ಯೆ ಎದುರಾದರೂ ಅವುಗಳನ್ನು ಸಹಜವಾಗಿ ಎದುರಿಸುತ್ತೀರಿ.
ಕನ್ಯಾ ರಾಶಿ: ಕಠಿಣ ಪರಿಶ್ರಮಕ್ಕೆ ಯೋಗ್ಯ ಫಲ ಸಿಗುತ್ತದೆ. ಧೈರ್ಯದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು ಸಾಧ್ಯವಿದೆ. ಆರೋಗ್ಯದ ಕಡೆ ಗಮನಹರಿಸಿ.
ತುಲಾ ರಾಶಿ: ಕಲಹಗಳು ಬಗೆಹರಿಯುವ ಸಾಧ್ಯತೆಗಳಿವೆ. ಮಿತ್ರದ ಜೊತೆ ಕಾಲ ಕಳೆಯುವಿರಿ. ವ್ಯವಹಾರದಲ್ಲಿ ಜಾಗೃತಿ ಅಗತ್ಯ.
ವೃಶ್ಚಿಕ ರಾಶಿ: ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಬರಲಿದೆ. ಹಣಕಾಸಿನ ನಿರ್ವಹಣೆಯಲ್ಲಿ ಏರುಪೇರಾಗಲಿದೆ. ಹೊಸ ವ್ಯಕ್ತಿಗಳ ಭೇಟಿ ಭವಿಷ್ಯದಲ್ಲಿ ನೆರವಾಗಲಿದೆ.
ಧನು ರಾಶಿ: ನಿಮ್ಮ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ಸಿಗಲಿದೆ. ಪ್ರವಾಸದ ಲಕ್ಷಣಗಳಿವೆ. ಧಾರ್ಮಿಕ ಹಾಗೂ ವೈಚಾರಿಕ ಕ್ಷೇತ್ರದಲ್ಲಿ ಶ್ರದ್ಧೆ ಅಗತ್ಯ.
ಮಕರ ರಾಶಿ: ಹಣಕಾಸು ಲಾಭ ಆಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಸರಿಯಾದ ಯೋಜನೆ ರೂಪಿಸಿದರೆ ಮಾತ್ರ ಜೀವನ ಉತ್ತಮವಾಗಲಿದೆ.
ಕುಂಭ ರಾಶಿ: ಪ್ರೇರಣಾದಾಯಕ ಸನ್ನಿವೇಶಗಳು ನಿಮ್ಮ ಉತ್ಸಾಹ ಹೆಚ್ಚಿಸಲಿದೆ. ವೈಚಾರಿಕ ಚಿಂತನೆಗಳು ಕಾರ್ಯಕ್ಷೇತ್ರಕ್ಕೆ ಬೆಂಬಲ ನೀಡಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ.
ಮೀನ ರಾಶಿ: ನಿಮ್ಮ ಕಲಾತ್ಮಕ ಚಟುವಟಿಕೆಗಳ ಬಗ್ಗೆ ಬೇರೆಯವರ ಮೆಚ್ಚುಗೆ ಸಿಗಲಿದೆ. ಸಾಮಾಜಿಕ ಸಂಪರ್ಕ ಜಾಲ ವಿಸ್ತರಣೆ ಆಗಲಿದೆ. ಸಂತೋಷದ ಸುದ್ದಿ ಬರಲಿದೆ.






