ಮೇಷ ರಾಶಿ: ಈ ದಿನ ಪೂರ್ತಿ ಉತ್ಸಾಹವಾಗಿರುತ್ತೀರಿ. ಹೊಸ ಕೆಲಸಗಳು ಯಶಸ್ವಿಯಾಗಲಿದೆ. ಆರ್ಥಿಕ ಬೆಳವಣಿಗೆ ಸಂತಸ ಕೊಡಲಿದೆ.
ವೃಷಭ ರಾಶಿ: ಮಾನಸಿಕ ಶಾಂತಿ, ಹಣಕಾಸು ಓಡಾಟ, ಕುಟುಂಬದಲ್ಲಿ ಸಂತೋಷ ಒಟ್ಟಿಗೆ ಕಾಣಲಿದೆ. ಪ್ರಯಾಣದ ಲಕ್ಷಣಗಳಿದೆ. ವ್ಯಾಯಾಮ ಆರಾಮದಾಯಕ.
ಮಿಥುನ ರಾಶಿ: ಉದ್ಯೋಗದಲ್ಲಿನ ನಿಮ್ಮ ಸಾಧನೆ ಮೆಚ್ಚುಗೆಗೆ ಕಾರಣವಾಗಲಿದೆ. ಹಣಕಾಸು ವಿಚಾರಗಳಲ್ಲಿ ಬುದ್ಧಿವಂತಿಕೆ ಅಗತ್ಯ. ಸಂಜೆ ಸಂತೋಷದ ಕ್ಷಣ ಸಿಗಲಿದೆ.
ಕರ್ಕ ರಾಶಿ: ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಲಿದೆ. ಹಳೆಯ ಕೆಲಸಗಳು ಪೂರ್ಣಗೊಳ್ಳಲಿದೆ. ಉದ್ಯಮ ಅಥವಾ ವ್ಯವಹಾರದಲ್ಲಿ ಲಾಭದ ಯೋಗವಿದೆ.
ಸಿಂಹ ರಾಶಿ: ಅನಿರೀಕ್ಷಿತ ಲಾಭ ಸಿಗಲಿದೆ. ಆರ್ಥಿಕ ನಿರ್ಧಾರಗಳಲ್ಲಿ ಧೈರ್ಯ ಬೇಕು. ಆತುರದ ನಿರ್ಧಾರ ಮಾಡಬೇಡಿ.
ಕನ್ಯಾ ರಾಶಿ: ದೀರ್ಘಕಾಲದಿಂದ ಬಾಕಿಯಿರುವ ಕೆಲಸ ಈ ದಿನ ಮುಗಿಯಲಿದೆ. ಕಲೆ ಅಥವಾ ಸಾಹಿತ್ಯ ಕ್ಷೇತ್ರದವರಿಗಿದು ಉತ್ತಮ ದಿನ.
ತುಲಾ ರಾಶಿ: ಆಪ್ತರ ಜೊತೆ ಸ್ನೇಹ ಹೆಚ್ಚಾಗಲಿದ್ದು, ಪರಸ್ಪರ ನಂಬಿಕೆ ಮೂಡಲಿದೆ. ಕೆಲಸದ ಒತ್ತಡ ಕಡಿಮೆಯಾಗಲಿದೆ. ಆರೋಗ್ಯದ ಕಡೆ ಗಮನಹರಿಸಿ.
ವೃಶ್ಚಿಕ ರಾಶಿ: ನಿಮ್ಮ ಮನಸ್ಸಿನ ಯೋಜನೆಗಳು ಯಶಸ್ವಿಯಾಗಲಿದೆ. ಕೆಲಸದಲ್ಲಿ ಹೊಸ ಚಿಂತನೆ ಅಳವಡಿಸಲು ಸೂಕ್ತ ದಿನ. ಧ್ಯಾನ ಅಥವಾ ಪ್ರಾರ್ಥನೆಗೆ ಸಮಯ ಮೀಸಲಿಡಿ.
ಧನು ರಾಶಿ: ಆತ್ಮವಿಶ್ವಾಸದಲ್ಲಿ ಗಣನೀಯ ಏರಿಕೆ ಆಗಲಿದೆ. ಪ್ರಯತ್ನಗಳು ಫಲ ನೀಡುತ್ತವೆ. ಹೂಡಿಕೆ ವಿಚಾರಗಳಲ್ಲಿ ಜಾಗರೂಕರಾಗಿರಿ.
ಮಕರ ರಾಶಿ: ಕುಟುಂಬ ಮತ್ತು ವೃತ್ತಿ ನಡುವೆ ಸಮತೋಲನ ಕಾಪಾಡಿ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣವಿದೆ.
ಕುಂಭ ರಾಶಿ: ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಲಭವಾಗಲಿದೆ. ಹೊಸ ಯೋಜನೆಗೆ ಮೊದಲ ಹೆಜ್ಜೆ ಮೂಡಲಿದೆ. ಕುಟುಂಬದಲ್ಲಿ ಸಂತೋಷ ಕಾಣಲಿದೆ.
ಮೀನ ರಾಶಿ: ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಉದ್ಯೋಗ ಅಥವಾ ವ್ಯಾಪಾರದಲ್ಲಿ ಹೊಸ ಅವಕಾಶಳು ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾದ ದಿನ.