ಮೇಷ ರಾಶಿ: ಧೈರ್ಯದಿಂದ ಮಾತನಾಡಿದರೆ ಮಾತ್ರ ನಿಮ್ಮ ಕೆಲಸ ಆಗುತ್ತದೆ. ಹಣಕಾಸು ವಿಷಯದಲ್ಲಿ ಸ್ನೇಹಿತರ ಸಹಾಯ ಸಿಗಲಿದೆ.
ವೃಷಭ ರಾಶಿ: ಕುಟುಂಬದಲ್ಲಿ ಸಮಾಧಾನ ಕಾಣಲಿದೆ. ಕಾರ್ಯದಲ್ಲಿ ಪ್ರತಿಫಲ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಮಿಥುನ ರಾಶಿ: ನಿಮ್ಮ ಹೊಸ ಯೋಜನೆಗಳಿಗೆ ಪ್ರೋತ್ಸಾಹ ಸಿಗಲಿದೆ. ಸಹೋದ್ಯೋಗಿಗಳ ಬೆಂಬಲ ಸಾಧ್ಯವಿದೆ. ಹಣಕಾಸು ಸ್ಥಿರತೆ ಕಾಪಾಡುವುದು ಮುಖ್ಯ.
ಕರ್ಕ ರಾಶಿ: ಕಾರ್ಯದಲ್ಲಿ ಸುಧಾರಣೆ ಆಗಲಿದೆ. ಬಂಧುಗಳೊAದಿಗೆ ಸಮಯ ಕಳೆಯಿರಿ. ಹಣಕಾಸಿನ ನಿರ್ವಹಣೆ ಹಾಗೂ ಆರೋಗ್ಯ ಸ್ಥಿರವಾಗಿರಲಿ.
ಸಿಂಹ ರಾಶಿ: ಹೊಸ ಯೋಜನೆ ಆರಂಭಕ್ಕೆ ಸೂಕ್ತ ದಿನ. ಕೆಲಸದ ವಿಷಯದಲ್ಲಿ ಸೋಮಾರಿತನ ಬೇಡ. ಆರೋಗ್ಯದಲ್ಲಿ ಚೇತರಿಕೆ ಸಾಧ್ಯವಿದೆ.
ಕನ್ಯಾ ರಾಶಿ: ಕೆಲಸದಲ್ಲಿ ನಿಷ್ಠೆ ಅಗತ್ಯ. ಹಣಕಾಸಿನಲ್ಲಿ ಲಾಭ ಆಗಲಿದೆ. ಸಹೋದ್ಯೋಗಿಗಳ ಸಹಾಯ ಸಿಗಲಿದೆ.
ತುಲಾ ರಾಶಿ: ನಿಮ್ಮ ಗುರಿ ಈಡೇರಿಕೆಗೆ ಪ್ರಯತ್ನಿಸಿ. ಕೆಲಸ-ಕಾರ್ಯದಲ್ಲಿ ಯಶಸ್ಸು ಖಚಿತ. ಜನ ಸಂಪರ್ಕದಿAದ ಲಾಭ ಆಗಲಿದೆ.
ವೃಶ್ಚಿಕ ರಾಶಿ: ಕಠಿಣ ಕೆಲಸಕ್ಕೆ ಫಲ ದೊರೆಯಲಿದೆ. ಹಣ ಲಾಭ ಸಾಧ್ಯವಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ
ಧನು ರಾಶಿ: ಕುಟುಂಬದಲ್ಲಿ ಸಮಾಧಾನ ಸಿಗಲಿದೆ. ಹಣಕಾಸು ಹೂಡಿಕೆ ಸರಳವಾಗಿರಲಿದೆ. ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ.
ಮಕರ ರಾಶಿ: ಆರೋಗ್ಯವನ್ನು ಕಾಪಾಡಲು ವ್ಯಾಯಾವ ಅಗತ್ಯ. ಕಾಯಕದಲ್ಲಿ ಶೃದ್ಧೆಯಿರಲಿ. ಸಾಧನೆ ಮಾಡಲು ಇನ್ನಷ್ಟು ಪ್ರಯತ್ನ ಬೇಕು.
ಕುಂಭ ರಾಶಿ: ಸಂತೋಷದಿoದ ದಿನ ಕಳೆಯುವಿರಿ. ಸಂಕಟಗಳು ದೂರವಾಗಲಿದೆ. ಆರೋಗ್ಯದಲ್ಲಿ ಬದಲಾವಣೆ ಆಗಲಿದೆ.
ಮೀನ ರಾಶಿ: ಅಲಂಕಾರಿಕ ವಿಷಯಗಳ ಬಗ್ಗೆ ಆಸಕ್ತಿ ಮೂಡಲಿದೆ. ಮನಸ್ಸಿನ ಶಾಂತಿಗಾಗಿ ಧ್ಯಾನ ಮಾಡಿ. ವ್ಯಾಯಾಮವೂ ನಿಮಗೆ ಅನುಕೂಲಕರ.






