ಮೇಷ ರಾಶಿ: ನಕಾರಾತ್ಮಕ ವಿಚಾರಗಳಿಂದ ದೂರವಿದ್ದರೆ ಈ ದಿನ ಗೆಲುವು ಸಾಧ್ಯ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಅನಾರೋಗ್ಯ ಕಾಡುವ ಸಾಧ್ಯತೆಗಳಿದೆ.
ವೃಷಭ ರಾಶಿ: ಆಪ್ತರ ಸಹಾಯ ಸಿಗಲಿದೆ. ಹಣಕಾಸಿನ ಲಾಭ ಆಗಲಿದೆ. ನಿಮ್ಮ ಕೆಲಸ ನಿಧಾನವಾಗಿ ಸಾಗಲಿದೆ. ಆತಂಕದ ಸಮಯ ಬರಬಹುದು.
ಮಿಥುನ ರಾಶಿ: ನಿಮ್ಮ ಹೊಸ ಪ್ರಯತ್ನ ಯಶಸ್ಸು ಕೊಡಲಿದೆ. ಸರ್ಕಾರಿ ಕೆಲಸಗಳು ಬಗೆಹರಿಯುವ ಸಾಧ್ಯತೆಯಿದೆ. ಸಮಸ್ಯೆಗಳು ದೂರವಾಗಲಿದೆ.
ಕರ್ಕ ರಾಶಿ: ಹಣಕಾಸು ವಿಷಯದಲ್ಲಿ ಮುನ್ನಚ್ಚರಿಕೆ ಅಗತ್ಯ. ಹಿರಿಯರ ಸಲಹೆಪಡೆದು ಮುನ್ನುಗ್ಗುವುದು ಒಳಿತು. ಕುಟುಂಬದವರ ಒಳಿತಿನ ಬಗ್ಗೆ ಚಿಂತಿಸಿ.
ಸಿoಹ ರಾಶಿ: ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಆಗಲಿದೆ. ಸ್ನೇಹಿತರ ಜೊತೆ ಚನ್ನಾಗಿರಿ. ಪೈಪೋಟಿ ನೀಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.
ಕನ್ಯಾ ರಾಶಿ: ಹೊಸ ಮಾತುಕಥೆಗಳು ಸರಾಗವಾಗಿ ಸಾಗಲಿದೆ. ಒಪ್ಪಂದಗಳನ್ನು ಮಾಡಿಕೊಳ್ಳಲು ಒಳ್ಳೆಯ ದಿನ. ವ್ಯಾಪಾರಿಗಳಿಗೆ ಲಾಭ ಆಗಲಿದೆ.
ತುಲಾ ರಾಶಿ: ಪ್ರಯೋಗಶೀಲ ಕೃಷಿಕರಿಗೆ ಈ ದಿನ ಒಳ್ಳೆಯದಾಗಲಿದೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿದೆ. ಹಿರಿಯರು ಹೇಳಿದ ದಾರಿಯಲ್ಲಿ ನಡೆಯುವುದು ಉತ್ತಮ.
ವೃಶ್ಚಿಕ ರಾಶಿ: ವೈಯಕ್ತಿಕ ವಿಷಯಗಳ ಬಗ್ಗೆ ಗಮನಹರಿಸಿ. ಹಣಕಾಸು ವಿಷಯದಲ್ಲಿ ಬೇರೆಯವರ ಮಾತು ಕೇಳಬೇಡಿ. ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆವ್ಯಕ್ತವಾಗಲಿದೆ.
ಧನು ರಾಶಿ: ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಿದರೆ ನಿಮ್ಮನ್ನು ಜನ ಗುರುತಿಸಲಿದ್ದಾರೆ. ಹಣಕಾಸು ಲಾಭ ಆಗಲಿದೆ. ಸ್ನೇಹಿತರ ಸಹಾಯಪಡೆದು ಕೆಲಸ ಮಾಡುವುದು ಸೂಕ್ತ.
ಮಕರ ರಾಶಿ: ಸಂಗೀತ ಹಾಗೂ ಕಲಾ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶವಿದೆ. ಹಳೆಯ ಸ್ನೇಹಿತರು ಭೇಟಿ ಆಗಲಿದ್ದಾರೆ. ಆರೋಗ್ಯ ಸುಧಾರಣೆ ಆಗಲಿದೆ.
ಕುಂಭ ರಾಶಿ: ಕಚೇರಿ ಕೆಲಸಗಳು ಇನ್ನಷ್ಟು ತಡವಾಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ತುರ್ತು ಸನ್ನಿವೇಶವನ್ನು ಉಪಾಯದಿಂದ ನಿಭಾಯಿಸಿ.
ಮೀನ ರಾಶಿ: ಲಾಭದ ನಿರೀಕ್ಷೆ ನಿಮ್ಮನ್ನು ಹುಸಿ ಮಾಡುವುದಿಲ್ಲ. ಹೊಸ ಭರವಸೆಗಳು ಸಿಗಲಿವೆ. ಹಿರಿಯರ ಅನುಗ್ರಹದಿಂದ ಸಾಧನೆ ಸಾಧ್ಯವಿದೆ.