ಮೇಷ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಲಾಭ ಸಿಗಲಿದೆ. ಸಹದ್ಯೋಗಿಗಳ ಸಹಕಾರ ಸ್ಮರಿಸಿ. ವಿರೋಧಿಗಳು ನಿಮ್ಮನ್ನು ಕಾಡಿಸಲಿದ್ದು, ಧೈರ್ಯವೇ ನಿಮಗೆ ಸಾಧನ.
ವೃಷಭ ರಾಶಿ: ಒತ್ತಡ ಹಾಗೂ ಹಣಕಾಸು ಸಮಸ್ಯೆ ಆವರಿಸಲಿದೆ. ಕುಟುಂಬದಲ್ಲಿ ಕಲಹ ಆಗುವ ಸಾಧ್ಯತೆಯಿದೆ. ಅನ್ಯಾಯಗಳನ್ನು ಸಹಿಸದಿರಿ.
ಮಿಥುನ ರಾಶಿ: ವೃತ್ತಿಯಲ್ಲಿ ಸಾಧನೆಗೆ ಅವಕಾಶ ಸಿಗಲಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕವಾಗಿ ಸರಿಯಾಗಿ ನಿರ್ಧಾರ ಪ್ರಕಟಿಸಿ. ಪರಿಸರ ಪ್ರವಾಸ ನಿಮಗೆ ಆರಾಮದಾಯಕ.
ಕರ್ಕ ರಾಶಿ: ವೃತ್ತಿ ಜೀವನದಲ್ಲಿ ಲಾಭ ಆಗಲಿದೆ. ದೈಹಿಕ ಶ್ರಮದ ಕೆಲಸ ಮಾಡುವಾಗ ಜಾಗರೂಕತೆ ಅಗತ್ಯ. ಪ್ರಯಾಣದ ಲಕ್ಷಣಗಳಿವೆ.
ಸಿಂಹ ರಾಶಿ: ಜೀವನದಲ್ಲಿ ಏರಿಳಿತ ಸಾಮಾನ್ಯ. ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿ. ಯೋಗ-ಧ್ಯಾನ ಮಾಡುವುದು ಉತ್ತಮ.
ಕನ್ಯಾ ರಾಶಿ: ವಿವಾಹದ ವಿಷಯದಲ್ಲಿ ಗೊಂದಲ ಬಗೆಹರಿಯಲಿದೆ. ಮಿತ್ರರ ನೆರವಿನಿಂದ ಹಣಕಾಸು ಲಾಭ ಆಗಲಿದೆ. ಕ್ರಿಯಾತ್ಮಕ ಚಟುವಟಿಕೆಗಳಿಂದ ಯಶಸ್ಸು ಸಿಗಲಿದೆ.
ತುಲಾ ರಾಶಿ: ನೀವು ಮಾಡುವ ಕೆಲಸ ಉನ್ನತಿಯ ಕಡೆ ಒಯ್ಯುತ್ತದೆ. ಆರೋಗ್ಯ ಸಮಸ್ಯೆಗಳಿಂದ ಎಚ್ಚರವಾಗಿರಿ. ಜಗಳದಿಂದ ದೂರವಿರಿ.
ವೃಶ್ಚಿಕ ರಾಶಿ: ನಿಮ್ಮ ಪಾಡಿಗೆ ನೀವು ನಿಮ್ಮ ಕೆಲಸ ಮಾಡಿ. ಸಭೆಗಳಲ್ಲಿ ಅಭಿಪ್ರಾಯ ಹೇಳುವುದು ಬೇಡ. ವೈವಾಹಿಕ ಸಮಸ್ಯೆಗಳು ದೂರವಾಗಲಿದೆ.
ಧನು ರಾಶಿ: ಒಳ್ಳೆಯ ಕೆಲಸ ಶುರು ಮಾಡಲು ಉತ್ತಮ ದಿನವಲ್ಲ. ವಾಹನ ಹಾಗೂ ವಸತಿ ವಿಷಯವಾಗಿ ಸಮಸ್ಯೆ ಕಾಡಲಿದೆ. ಸಾಲಗಾರರ ಕಾಟ ಹೆಚ್ಚಾಗಲಿದೆ. ಶಿವನ ಆರಾಧನೆ ಮನಸ್ಸಿಗೆ ಸಮಾಧಾನ ನೀಡಲಿದೆ.
ಮಕರ ರಾಶಿ: ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭ ತರುವ ದಿನ. ಸ್ನೇಹಿತರ ಸಹಕಾರದಿಂದ ಯಶಸ್ಸು ಸಿಗಲಿದೆ. ವಿರೋಧಿಗಳಿಗೆ ಹಿನ್ನಡೆ ಆಗಲಿದೆ.
ಕುಂಭ ರಾಶಿ: ಹಣಕಾಸು ಪರಿಸ್ಥಿತಿ ಸಾಧಾರಣವಾಗಿರಲಿದೆ. ಅನಗತ್ಯ ವಾದ-ವಿವಾದ ಆಗಬಹುದು. ಹಳೆ ಸ್ನೇಹಿತರ ಭೇಟಿ ಸಮಾಧಾನ ಕೊಡಲಿದೆ.
ಮೀನ ರಾಶಿ: ಆರ್ಥಿಕ ಪ್ರಗತಿ ಆಗಲಿದೆ. ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುತ್ತೀರಿ. ಹಣಕಾಸು ಭಿನ್ನಾಭಿಪ್ರಾಯಗಳು ಬಗೆಹರಿಯಲಿದೆ.