ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನಲೆ ಅಕ್ಟೋಬರ್ 8ರಿಂದ 11ರವರೆಗೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿದಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕಾರವಾರ ಘಟಕ ವಿರೋಧವ್ಯಕ್ತಪಡಿಸಿದ್ದು, ಅದಾದ ಕೆಲವೇ ಗಂಟೆಗಳಲ್ಲಿ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದೆ. ಈ ಹಿನ್ನಲೆ ಮಾಧ್ಯಮಿಕ ಶಾಲಾ ನೌಕರರ ಸಂಘದವರು ಸಂತಸವ್ಯಕ್ತಪಡಿಸಿದ್ದಾರೆ.
ಸರ್ಕಾರ ಮೊದಲು ಶಾಲಾ ಸಮಯದಲ್ಲಿ ಬದಲಾವಣೆ ಮಾಡಲು ಮುಂದಾಗಿತ್ತು. ಅದರ ಪ್ರಕಾರ `ಬೆಳಗ್ಗೆ 8ರಿಂದ 1ಗಂಟೆಯವರೆಗೆ ಶಿಕ್ಷಕರು ಶಾಲಾ ಕೆಲಸ ಮುಗಿಸಬೇಕು. ಅದಾದ ನಂತರ ಸಮೀಕ್ಷೆಯಲ್ಲಿ ತೊಡಗಬೇಕು’ ಎಂದು ಸೂಚಿಸಲಾಗಿತ್ತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಘಟಕ ಇದಕ್ಕೆ ವಿರೋಧವ್ಯಕ್ತಪಡಿಸಿತ್ತು. ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿತ್ತು.
`ಶಿಕ್ಷಕರು ದಸರಾ ರಜೆಯನ್ನು ಅನುಭವಿಸದೇ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಮತ್ತೆ ಒತ್ತಡದ ಕೆಲಸ ಅಸಾಧ್ಯ’ ಎಂದು ಶಿಕ್ಷಕರು ಹೇಲಿದ್ದರು. ಮಕ್ಕಳ ಮಾನಸಿಕ ಸ್ಥಿತಿಯ ಒತ್ತಡದ ಬಗ್ಗೆಯೂ ಶಿಕ್ಷಕರು ವಿವರಿಸಿದ್ದರು. ಗುಡ್ಡಗಾಡು ಪ್ರದೇಶದಲ್ಲಿ ಮತ್ತು ಶಾಲಾ ವಾಹನದಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರ್ಕಾರಿ ಬಸ್ಸುಗಳ ಸಮರ್ಪಕ ವ್ಯವಸ್ಥೆ ಇಲ್ಲದಿರುವುದನ್ನು ಗಮನಕ್ಕೆ ತಂದಿದ್ದರು.ಈ ಎಲ್ಲಾ ವಿಷಯ ಪರಿಗಣಿಸಿ ಸಕಾರ ಶಾಲೆಗೆ ನೀಡಿದ ರಜಾ ಅವಧಿಯನ್ನು ವಿಸ್ತರಿಸಿದೆ. ಇದಕ್ಕೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಅಧ್ಯಕ್ಷ ಜೈ ರಂಗನಾಥ ಬಿ ಎಸ್ ಸಂತಸವ್ಯಕ್ತಪಡಿಸಿದರು.