ಬಸ್ಸು-ಲಾರಿ-ಬೈಕು ಹಾಗೂ ಟೆಂಪೋ ನಡುವೆ ಜೊಯಿಡಾದಲ್ಲಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಒಬ್ಬರು ಸಾವನಪ್ಪಿದ್ದು, ಐವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಇನ್ನೂ ಅನೇಕರಿಗೆ ನೋವಾಗಿದೆ.
ರಾಮನಗರ-ಆನಮೋಡ್-ಗೋವಾ ರಾಷ್ಟಿçÃಯ ಹೆದ್ದಾರಿಯಲ್ಲಿ ಈ ಅವಘಡ ನಡೆದಿದೆ. ಹೈದರಬಾದಿನಿಂದ ಗೋವಾಗೆ ತೆರಳುತ್ತಿದ್ದ ವಿ ಆರ್ ಎಲ್ ಬಸ್ಸು ಬುಧವಾರ ಬೆಳಗ್ಗೆ ಜೊಯಿಡಾದ ರಾಮನಗರ ಮಾರ್ಗವಾಗಿ ಸಂಚರಿಸುತ್ತಿತ್ತು. ಹೆದ್ದಾರಿಯಲ್ಲಿ ಎದುರಿಗಿದ್ದ ಲಾರಿಯನ್ನು ಬಸ್ಸು ಹಿಂದಿಕ್ಕಿತು. ಆಗ, ಮುಂದಿನಿAದ ಟೆಂಪೋ ಬಂದಿದ್ದು, ವೇಗದಲ್ಲಿದ್ದ ವಿ ಆರ್ ಎಲ್ ಬಸ್ಸು ಟೆಂಪೋಗೆ ಡಿಕ್ಕಿಯಾಯಿತು. ಈ ವೇಳೆ ಆ ಟೆಂಪೋಗೆ ಹಿಂದಿನಿAದ ಬರುತ್ತಿದ್ದ ಬೈಕು ಡಿಕ್ಕಿಯಾಯಿತು.
ವಿ ಆರ್ ಎಲ್ ಬಸ್ಸು ಟೆಂಪೋಗೆ ಗುದ್ದಿದ ಪರಿಣಾಮ ಟೇಂಪೊದಲ್ಲಿದ್ದ ಚಾಲಕ ಅಲ್ಲಿಯೇ ಸಾವನಪ್ಪಿದರು. ಅದಾದ ನಂತರ ಬಸ್ಸು ಪಕ್ಕದಲ್ಲಿದ್ದ ಲಾರಿಗೂ ಡಿಕ್ಕಿಯಾಗಿದ್ದು, ಮ್ಯಾಂಗನಿಸ್ ಅದಿರು ತುಂಬಿದ್ದ ಲಾರಿ ಅಲ್ಲಿ ಪಲ್ಟಿಯಾಯಿತು. ಟೆಂಪೋ ಹಿಂದೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಕಿರಣ ಪಾಟೀಲ್ ಅವರು ಈ ಅಪಘಾತದಲ್ಲಿ ಗಾಯಗೊಂಡರು. ಬಸ್ಸಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಂಭೀರ ಪೆಟ್ಟು ಮಾಡಿಕೊಂಡರು.
ಈ ಸರಣಿ ಅಪಘಾತದಲ್ಲಿ ನಾಲ್ಕು ವಾಹನಗಳು ಜಖಂ ಆಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕ್ರೇನ್ ಸಹಾಯದಿಂದ ಅಪಘಾತವಾದ ವಾಹನಗಳನ್ನು ರಸ್ತೆ ಬದಿಗೆ ಸರಿಸಲಾಗಿದ್ದು, ಉಳಿದ ವಾಹನ ಓಡಾಟಕ್ಕೆ ಸಮಸ್ಯೆ ಇಲ್ಲ. ಸಾವನಪ್ಪಿದವರು ಹಾಗೂ ಗಾಯಗೊಂಡವರ ಮಾಹಿತಿ ಬರಬೇಕಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.