ಕಬ್ಬು ಬೆಳೆಗಾರರು ವಿವಿಧ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಮೂರು ದಿನಗಳಿಂದ ಹಳಿಯಾಳದಲ್ಲಿ ಪ್ರತಿಭಟಿಸುತ್ತಿದ್ದರೂ, ಕಾರ್ಖಾನೆಯವರು ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಮೂರನೇ ದಿನದ ರಾತ್ರಿಯೂ ಪ್ರತಿಭಟನೆ ಮುಂದುವರೆದಿದೆ.
Advertisement. Scroll to continue reading.
`ಮಾತುಕತೆ ಅಂತಿಮವಾಗದೇ ಇರುವುದರಿಂದ ರೈತರ ನಡುವೆ ಯಾವುದೇ ದ್ವಿ ಪಕ್ಷೀಯ ಒಪ್ಪಂದವಾಗಿಲ್ಲ. ಸಮಸ್ಯೆ ಬಗೆಹರಿಯದ ಹೊರತು ಕಬ್ಬು ಕಟಾವು ಮಾಡಲು ಯಾವುದೇ ಒತ್ತಡ ಹಾಕುವಂತಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರೂ ಸ್ಥಳ ಭೇಟಿ ಮಾಡುವ ಕಾರ್ಖಾನೆ ಪ್ರತಿನಿಧಿಗಳು ರೈತರನ್ನು ಪುಸಲಾಯಿಸುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ಕಬ್ಬು ಕಟಾವು ಮಾಡಿಸಿದಲ್ಲದೇ ರೈತರ ಮದ್ಯೆ ಒಡಕು ಮೂಡಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.
ಕಬ್ಬು ಬೆಳೆಗಾರರ ಹಿತಸಂರಕ್ಷಣ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟಿ, ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಕಾರ್ಯದರ್ಶಿ ಅಶೋಕ ಮೇಟಿ, ಹಿರಿಯ ರೈತ ಮುಖಂಡ ಪ್ರಕಾಶ ಪಾಕರಿ, ಸಾತೋರಿ ಗೋಡಿಮನಿ, ರಾಮದಾಸ ಬೆಳಗಾಂವಕರ, ಬಳಿರಾಮ ಮೋರೆ ಇತರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ರೈತರ ಧರಣಿ ಅಹೋರಾತ್ರಿ ಮುಂದುವರೆಯುವ ಬಗ್ಗೆ ಘೋಷಿಸಿದರು.