ಕುಮಟಾದ ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಬಳಕೆಯಲ್ಲಿದ್ದ ಕಾರು ಅಪಘಾತಕ್ಕೀಡಾಗಿದೆ. ಶ್ರೀಕುಮಾರ ಬಸ್ಸು ಅವರ ಕಾರಿಗೆ ಹಿಂದಿನಿoದ ಗುದ್ದಿದೆ.
ಅಕ್ಟೊಬರ್ 4ರಂದು ಕುಮಟಾಗೆ ಹಿರಿಯ ನ್ಯಾಯಾಧೀಶರೊಬ್ಬರು ಆಗಮಿಸಿದ್ದರು. ಶಿಷ್ಟಾಚಾರದ ಪ್ರಕಾರ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ನ್ಯಾಯಾಧೀಶರ ಜೊತೆ ಇರಬೇಕಿತ್ತು. ಆದರೆ, ಶ್ರವಣಕುಮಾರ ಅವರ ಕಾರಿನ ಚಾಲಕ ಆ ದಿನ ರಜೆಯಲ್ಲಿದ್ದು, ತಹಶೀಲ್ದಾರ್ ಕಚೇರಿಯ ಚಾಲಕನನ್ನು ತಮ್ಮ ಕಾರಿನ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದರು.
ತಹಶೀಲ್ದಾರ್ ಕಚೇರಿಯ ಜೀಪ್ ಚಾಲಕ ಸಾರಂಗ ಮುಕ್ರಿ ಅವರು ಸಮಯಕ್ಕೆ ಸರಿಯಾಗಿ ಉಪವಿಭಾಗಾಧಿಕಾರಿ ಶ್ರವಣಕುಮಾರ ಅವರ ವಸತಿಗೃಹದ ಬಳಿ ಹೋಗಿದ್ದರು. ಗಿಬ್ ಸರ್ಕಲ್ ದಾಟಿ ಮುಂದಿನ ಸರ್ಕಲ್ ಬಳಿ ಸಾರಂಗ ಮುಕ್ರಿ ಅವರು ಕಾರಿಗೆ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದರು. ಈ ವೇಳೆ ಗುಣವಂತೆ ಬೆಳಗೋಡುವಿನ ಪ್ರಶಾಂತ ಮಂಜುನಾಥ ಗೌಡ ಅವರು ಶ್ರೀಕುಮಾರ ಬಸ್ಸು ಓಡಿಸುತ್ತಿದ್ದರು. ಸರ್ಕಾರಿ ಜೀಪು ಎದುರಿಗಿರುವುದನ್ನು ನೋಡಿಯೂ ಅವರು ಅಲ್ಲಿಂದ ಹಂಪನ್ನು ವೇಗವಾಗಿ ಹಾರಿಸಿದರು. ಅದಾದ ನಂತರ ಜೀಪಿಗೆ ಬಂದು ಬಸ್ಸು ಗುದ್ದಿದರು.
ಹೆಗಡೆ ಹಳಗೇರಿಯ ಸಾರಂಗ ಮುಕ್ರಿ ಅವರು ನುರಿತ ಚಾಲಕರಾಗಿದ್ದು, ಇನ್ನೂ 24 ವರ್ಷದ ಪ್ರಶಾಂತ ಗೌಡ ಅವರಿಗೆ ಬುದ್ದಿ ಹೇಳಿದರು. ಶ್ರೀಕುಮಾರ ಬಸ್ಸನ್ನು ವೇಗವಾಗಿ ಓಡಿಸದಂತೆ ತಿಳಿಸಿದರು. ಆಗ, ಪ್ರಶಾಂತ ಗೌಡ ಅವರು ಆದ ತಪ್ಪಿಗೆ ಕ್ಷಮೆ ಕೋರಿದರು. ಆದರೆ, ಕುಮಟಾ ಕಡೆಯಿಂದ ಹೊನ್ನಾವರ ಕಡೆ ಹೋಗುವ ಬಸ್ಸು ಹಿಂದಿನಿAದ ಸರ್ಕಾರಿ ಜೀಪಿಗೆ ಗುದ್ದಿದ್ದರಿಂದ ಎರಡು ವಾಹನಗಳು ಜಖಂ ಆಗಿದ್ದವು.
ಆ ವೇಳೆ ಶ್ರವಣಕುಮಾರ ಅವರು ಕಾರಿನಲ್ಲಿರಲಿಲ್ಲ. ಸರ್ಕಾರಿ ಕಾರಿನಲ್ಲಿ ಚಾಲಕನ ಜೊತೆ ಸಿಬ್ಬಂದಿ ಒಬ್ಬರಿದ್ದು, ಅವರು ಪ್ರಾಣಾಪಾಯದಿಂದ ಪಾರಾದರು. ಅಪಘಾತದಿಂದ ಸರ್ಕಾರಿ ಆಸ್ತಿಗೆ ನಷ್ಟವಾದ ಕಾರಣ ಸಾರಂಗ ಮುಕ್ರಿ ಅವರು ಪೊಲೀಸ್ ದೂರು ದಾಖಲಿಸಿದರು.