ಯಲ್ಲಾಪುರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಶಿಕಾರಿ ಶೂರರ ಸಂಖ್ಯೆ ಹೆಚ್ಚಾಗಿದೆ. ಕಳ್ಳ ಬಂದೂಕು ಹೊಂದಿರುವ ಕೆಲವರು ರಾತ್ರಿ ವೇಳೆ ಕಾಡು ತಿರುಗುತ್ತಿದ್ದಾರೆ. ಪರಿಣಾಮ ಮಂಚಿಕೇರಿ ಅರಣ್ಯ ವಲಯದಲ್ಲಿ ಚಿಂಕೆಯೊoದು ಗುಂಡಿನ ಏಟಿಗೆ ಬಲಿಯಾಗಿದೆ.
ಮಂಚಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಜೀವ ಸಂಕುಲವಿದ್ದು, ವನ್ಯಜೀವಿ ಪ್ರಬೇದವೂ ಹೇರಳವಾಗಿದೆ. ಹೀಗಾಗಿ ಈ ಭಾಗದಲ್ಲಿ ರಾತ್ರಿ ವೇಳೆ ಕಾಡು ಸುತ್ತುವವರ ಸಂಖ್ಯೆಯೂ ಅಧಿಕ ಪ್ರಮಾಣದಲ್ಲಿದೆ. ಕೆಲ ತಿಂಗಳ ಹಿಂದೆ ಇದೇ ಭಾಗದಲ್ಲಿ ಬಂದೂಕು ಹಿಡಿದು ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದರು. ಆ ವೇಳೆ ಬಂದೂಕಿಗೆ ಪರವಾನಿಗೆ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಅದಾದ ನಂತರ ಅರಣ್ಯ ಸಿಬ್ಬಂದಿ ಎಚ್ಚೆತ್ತುಕೊಳ್ಳಲಿಲ್ಲ. ಪರವಾನಿಗೆ ಇಲ್ಲದಿರುವ ಬಂದೂಕುದರಿಗಳನ್ನು ಗುರುತಿಸುವ ಕೆಲಸ ಮಾಡಲಿಲ್ಲ.
ಅದರ ಪರಿಣಾಮವಾಗಿ ಯಾರಿಗೂ ತೊಂದರೆ ಮಾಡದ ಮುಗ್ದ ಜೀವಿಗಳು ಗುಂಡೇಟಿಗೆ ಬಲಿಯಾಗುತ್ತಿದೆ. ಕಳ್ಳ ಭೇಟೆಗಾರರು ರಾಜಾರೋಷವಾಗಿ ಬೆಟ್ಟ ತಿರುಗುತ್ತಿದ್ದಾರೆ. ಈಗಲೂ ಮಂಚಿಕೇರಿ ಅರಣ್ಯ ಪ್ರದೇಶದಲ್ಲಿ ತಡರಾತ್ರಿ ಚಿಂಕೆಯೊAದರ ಶಿಕಾರಿ ನಡೆದಿದೆ. ತುಡುಗುಣಿಯಲ್ಲಿ ಭೇಟೆಗಾರರು ಜಿಂಕೆ ಕೊಂದು ಪರಾರಿಯಾಗಿದ್ದಾರೆ. ಗುಂಡಿನ ಸದ್ದು ಕೇಳಿದ ಬಗ್ಗೆ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಲ್ಲಿ ತೆರಳಿದಾಗ ಜಿಂಕೆ ಸಾವನಪ್ಪಿರುವುದು ಗೊತ್ತಾಗಿದೆ.
ಅರಣ್ಯ ಸಿಬ್ಬಂದಿ ಬರುವುದನ್ನು ನೋಡಿದ ಶಿಕಾರಿ ಶೂರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬ್ಯಾಟರಿ ಬೆಳಕು ನೋಡಿಯೇ ಬಂದೂಕುದಾರಿಗಳು ಓಡಿಹೋಗಿರುವ ಅನುಮಾನವಿದೆ. `ಜಿಂಕೆ ಸಾವನಪ್ಪಿದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಆರೋಪಿತರ ಹುಡುಕಾಟ ನಡೆದಿದೆ’ ಎಂದು ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಮಾಹಿತಿ ನೀಡಿದರು.