ಹೊನ್ನಾವರದ ಗಾಯತ್ರಿ ಗೌಡ ಅವರು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ್ದಾರೆ. 25ನೇ ವಯಸ್ಸಿನಲ್ಲಿಯೇ ಅವರು ತಮ್ಮ ಬದುಕನ್ನು ಕೊನೆಗಾಣಿಸಿದ್ದಾರೆ.
ಹೊನ್ನಾವರದ ಗುಂಡಿಬೈಲ್ ಗ್ರಾಮದಲ್ಲಿ ಗಾಯತ್ರಿ ಕೇಶವ ಗೌಡ ಅವರು ವಾಸವಾಗಿದ್ದರು. ಮಂಕಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯತ್ರಿ ಗೌಡ ಅವರು ಕೆಲಸಕ್ಕೀದ್ದರು. ಕೆಲಸ ಮುಗಿಸಿ ಶನಿವಾರ ಮನೆಗೆ ಬಂದಿದ್ದ ಅವರು ಎಲ್ಲರ ಜೊತೆ ಚನ್ನಾಗಿಯೇ ಇದ್ದರು. ಚಂಚಲ ಮನಸ್ಸಿನ ಗಾಯತ್ರಿ ಗೌಡ ಅವರು ರಾತ್ರಿ 9ಗಂಟೆಗೆ ಪಕ್ಕದಲ್ಲಿಯೇ ಇರುವ ಸಂಬoಧಿಕರ ಮನೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಆದರೆ, ತಾಸು ಕಳೆದರೂ ಗಾಯತ್ರಿ ಗೌಡ ಅವರು ಮನೆಗೆ ಮರಳಲಿಲ್ಲ.
ಮನೆಯವರು ಹುಡುಕಾಡಿದಾಗ ತೋಟದ ಬಾವಿಯಲ್ಲಿ ಗಾಯತ್ರಿ ಗೌಡ ಅವರ ಶವ ಕಾಣಿಸಿದೆ. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಗಾಯತ್ರಿ ಗೌಡ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾದರು. ಅವರ ದುಡುಕುತನಕ್ಕೆ ಕಾರಣ ಏನು? ಎಂಬುದು ಯಾರಿಗೂ ಗೊತ್ತಾಗಲಿಲ್ಲ.
ಇನ್ನೊಂದು ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಕೆಲಕಾಲ ಫೋನಿನಲ್ಲಿ ಮಾತನಾಡಿದ ಗಾಯತ್ರಿ ಗೌಡ ಅವರು ಕೆಲಕಾಲ ಮಂಕಾಗಿದ್ದರು. ಮನಸ್ಸಿನಲ್ಲಿರುವ ದುಗುಡದ ಬಗ್ಗೆ ಅವರು ಯಾರಲ್ಲಿಯೂ ಹೇಳಿಕೊಳ್ಳಲಿಲ್ಲ. ಅದಾದ ನಂತರ ಜೀವನದಲ್ಲಿಯೇ ಜಿಗುಪ್ಸೆಹೊಂದಿ ಅವರು ಬಾವಿಗೆ ಹಾರಿದರು. ಬಾವಿಯಿಂದ ಮೇಲೆ ಬರುವಷ್ಟರಲ್ಲಿ ಗಾಯತ್ರಿ ಗೌಡ ಅವರು ಶವವಾಗಿದ್ದರು.
ಗಾಯತ್ರಿ ಗೌಡ ಅವರ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕೊನೆಯದಾಗಿ ಆಕೆಗೆ ಫೋನ್ ಮಾಡಿದವರು ಯಾರು? ಎಂಬುದು ಹೊರಬಿದ್ದಿಲ್ಲ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಗಾಯತ್ರಿ ಗೌಡ ಅವರ ಆಪ್ತರನ್ನು ಮಾತನಾಡಿಸಿದ್ದಾರೆ. ಗಾಯತ್ರಿ ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆತ್ಮಹತ್ಯೆಯ ಕಾರಣ ಹುಡುಕುವುದಕ್ಕಾಗಿ ತನಿಖೆಯನ್ನು ಶುರು ಮಾಡಿದ್ದಾರೆ.
`ಆತ್ಮಹತ್ಯೆ ಅಪರಾಧ’