ರಸ್ತೆಗೆ ಬಿದ್ದ ಗುಂಡಿ ಮುಚ್ಚಲು ಯೊಗ್ಯತೆ ಇಲ್ಲದ ಸರ್ಕಾರ `ರಸ್ತೆಗುಂಡಿಗಳಿoದ ಅಪಘಾತ ಪ್ರಮಾಣ ಕಡಿಮೆ ಆಗಿದೆ’ ಎಂದು ಬಿಂಬಿಸಿದೆ. ರಸ್ತೆ ಗುಂಡಿಗೆ ಜನ ಬಿದ್ದು ಸಾವನಪ್ಪಿದ ಉದಾಹರಣೆಗಳಿದ್ದರೂ ಅದನ್ನು ಮರೆಮಾಚಿ `ಗುಂಡಿ ಮುಚ್ಚದಿರುವುದೇ ದೊಡ್ಡ ಸಾಧನೆ’ ಎನ್ನುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಉದ್ದಗಲಕ್ಕೂ ರಸ್ತೆ ಸರಿಯಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದಹಿಡಿದು ಗ್ರಾಮೀಣ ರಸ್ತೆಯವರೆಗೆ ಎಲ್ಲಾ ಕಡೆ ರಸ್ತೆ ಹಾಳಾಗಿದೆ. ಅದಕ್ಕಿಂತ ಮುಖ್ಯವಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ರಸ್ತೆ ರಿಪೇರಿಗೆ ಆಗ್ರಹಿಸಿ ಈಗಾಗಲೇ ಜನ ಸಿಡಿದೆದ್ದಿದ್ದಾರೆ. ಅನೇಕ ಕಡೆ ಹೋರಾಟಗಳು ನಡೆದಿವೆ. ಇನ್ನೂ ಅನೇಕ ಸಂಘಟನೆಯವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಕ್ರಮವನ್ನು ಹಲವು ಖಂಡಿಸಿದ್ದಾರೆ. ವಾಹನ ಸವಾರರ ಸಮಸ್ಯೆ ಬಗ್ಗೆ ಲಾರಿ ಮಾಲಕ ಸಂಘದವರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲ ನಡೆದರೂ ಸರ್ಕಾರ ಮಾತ್ರ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಕಾರಣ ಸರ್ಕಾರದ ಪ್ರಕಾರ ರಸ್ತೆ ಗುಂಡಿಗಳಿರುವುದರಿoದಲೇ ಅಪಘಾತದ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ಕರ್ನಾಟಕ ಪೊಲೀಸ್ 2024ನೇ ಸಾಲಿನ ರಸ್ತೆ ಅಪಘಾತ ವರದಿಯಲ್ಲಿ ಲೆಕ್ಕಾಚಾರವನ್ನು ಸಹ ನಮೂದಿಸಲಾಗಿದೆ.
ಡಾಂಬರು ರಸ್ತೆಗಳಲ್ಲಿ ಡಾಂಬರು ಕಾಣುತ್ತಿಲ್ಲ. ಕಡಿ ರಸ್ತೆಗಳಲ್ಲಿನ ಕಲ್ಲುಗಳು ಮೇಲೆದ್ದಿವೆ. ಹೆದ್ದಾರಿ ಹೊಂಡಗಳಿಗೆ ಹೊಣೆ ಯಾರು? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಎಲ್ಲಾ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿAದ ಜನ ಹೈರಾಣಾಗಿದ್ದಾರೆ. ಗುಂಡಿಗಳಿoದ ಅಪಘಾತ, ಸಾವು-ನೋವು ಸಂಭವಿಸುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಪೊಲೀಸ್ ಇಲಾಖೆ ವರದಿ ಸಿದ್ಧಪಡಿಸಿದ್ದು, ರಸ್ತೆ ಗುಂಡಿಗಳಿAದ ಅಪಘಾತ, ಸಾವು, ನೋವು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ ಎಂದು ಉಲ್ಲೇಖಿಸಿದೆ. `ರಾಜ್ಯದಲ್ಲಿ ಕಳೆದ ವರ್ಷದಿಂದ ವಿಪರೀತ ಮಳೆಯಾಗಿ ರಸ್ತೆಗಳು ಹಾಳಾಗುತ್ತಿವೆ. ಈ ಎಲ್ಲದರ ನಡುವೆ ರಾಜ್ಯ ಪೊಲೀಸ್ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ 2024ನೇ ಸಾಲಿನ ರಸ್ತೆ ಅಪಘಾತ ವರದಿಯಲ್ಲಿ `ರಸ್ತೆ ಗುಂಡಿಗಳಿoದ ಅಪಘಾತ ಮತ್ತು ಜೀವ ಹಾನಿ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. 2023ನೇ ಸಾಲಿಗೆ ಹೋಲಿಸಿದರೆ ಶೇ.60 ರಷ್ಟು ಗುಂಡಿ ಅಪಘಾತ ಇಳಿದಿದೆ’ ಎಂದು ಬರೆಯಲಾಗಿದೆ.
`ರಾಜ್ಯದಲ್ಲಿ 2023ರಲ್ಲಿ ಗುಂಡಿಗಳ ಸಮಸ್ಯೆ ಇದ್ದರೂ ಈಗಿರುವಷ್ಟು ಅತಿಯಾಗಿರಲಿಲ್ಲ. ಆ ವರ್ಷ ರಾಜ್ಯದಲ್ಲಿ ರಸ್ತೆ ಗುಂಡಿಗಳಿAದ 237 ಅಪಘಾತಗಳು ಆಗಿವೆ. ಅಂಥ ಸ್ಥಿತಿಯ 2024ರ ವರ್ಷದಲ್ಲಿ ಗುಂಡಿಗಳಿAದ 93 ಅಪಘಾತವಷ್ಟೇ ಆಗಿವೆ. ಅದರಿಂದ 24 ಜನ ಮೃತಪಟ್ಟಿದ್ದು, 118 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ’ ಎಂಬ ಲೆಕ್ಕಾಚಾರ ಸರ್ಕಾರದ ಮುಂದಿದೆ. ರಾಜ್ಯದಲ್ಲಿ 2024ನೇ ಸಾಲಿನಲ್ಲಿ ನಡೆದಿರುವ ಒಟ್ಟು 43,062 ಅಪಘಾತದಲ್ಲಿ 12,390 ಜನ ಮೃತಪಟ್ಟಿದ್ದಾರೆ. ಅದರಲ್ಲಿ 34,623 ಅಪಘಾತಗಳು ನೇರವಾದ ರಸ್ತೆಯಲ್ಲಿ ನಡೆದಿದ್ದು, ಅದರಲ್ಲಿಜ ಒಟ್ಟು 10,186 ಜನ ಮೃತಪಟ್ಟಿದ್ದಾರೆ’ ಎಂದು ವರದಿಯಲ್ಲಿದೆ.