`ಬುದ್ದಿ ಇದ್ದವರಿಗೆ ಏನಾದರೂ ಹೇಳಬಹುದು. ಬುದ್ದಿಯೇ ಇಲ್ಲದಿದ್ದವರಿಗೆ ಏನು ಹೇಳಿಯೂ ಪ್ರಯೋಜನವಿಲ್ಲ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. ಜೆಡಿಎಸ್ ಮುಖಂಡ ಸೂರಜ ನಾಯ್ಕ ವಿರುದ್ಧ ಕಿಡಿಕಾರಿದ ದಿನಕರ ಶೆಟ್ಟಿ, ಸೂರಜ ನಾಯ್ಕ ಸೋನಿ ಅವರ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿದ್ದಾರೆ.
`ಭ್ರಷ್ಟಾಚಾರ, ಭ್ರಷ್ಟಾಚಾರ ಎಂದು ಕೂಗುವ ಸೂರಜ ನಾಯ್ಕ ಸೋನಿ ಅವರು ತಮ್ಮ ಭ್ರಷ್ಟಾಚಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೂರಜ ನಾಯ್ಕ ಸೋನಿ ಅವರ ಧರ್ಮಪತ್ನಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದಾಗ ಅಭಿವೃದ್ಧಿ ಕೆಲಸದ ಕಮಿಷನ್ ಹಣಪಡೆದಿದನ್ನು ನೆನಪಿಸಿಕೊಳ್ಳಬೇಕು’ ಎಂದು ದಿನಕರ ಶೆಟ್ಟಿ ಹೇಳಿದ್ದಾರೆ. `ಸೂರಜ ನಾಯ್ಕ ಸೋನಿ ಅವರಿಗೆ ಸಾಕಷ್ಟು ಸಂಬoಧಿಕರಿದ್ದಾರೆ. ಅವರು ಹೇಳಿದನ್ನೆಲ್ಲ ವಾಟ್ಸಪ್ ಮೂಲಕ ಬಿಡುತ್ತಾರೆ. ನನಗೆ ಅಂಥ ಸಂಬoಧಿಕರಿಲ್ಲ. ಹೀಗಾಗಿ ನಾನು ಹೇಳಿದಲ್ಲ ವಾಟ್ಸಪ್ ಬರುವುದಿಲ್ಲ’ ಎಂದಿದ್ದಾರೆ.
`ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ್ ನಾಪತ್ತೆ ಪ್ರಕರಣದಲ್ಲಿ ತನ್ನ ಕೈವಾಡ ಏನೂ ಇಲ್ಲ. ಆತ ಕೆಲಸಕ್ಕೆ ಸೇರಿದ ದಿನದಿಂದ ಈವರೆಗೂ ಆತನನ್ನು ನೋಡಿಲ್ಲ. ಫೋನ್ ಕೂಡ ಮಾಡಿಲ್ಲ. ವೆಂಕಟೇಶ ಬರೆದ ಪತ್ರದಲ್ಲಿಯೂ ನಾನು ಭ್ರಷ್ಟಾಚಾರದಲ್ಲಿ ತೊಡಗಿರುವ ವಿಷಯ ಇರಲಿಲ್ಲ. ಪುರಸಭೆ ಮುಖ್ಯಾಧಿಕಾರಿ 4 ಲಕ್ಷ ರೂ ಹಣಪಡೆಯುವ ಬಗ್ಗೆ ಪತ್ರದಲ್ಲಿದ್ದು, ನನ್ನ ವಿರುದ್ಧ ಸೂರಜ ನಾಯ್ಕ ಅವರು ಮಾಡಿದ ಆರೋಪದಲ್ಲಿ ಸತ್ಯವಿಲ್ಲ’ ಎಂದು ಸಮರ್ಥಿಸಿಕೊಂಡರು. `ವಿರೋಧಿಗಳು ಪತ್ರವನ್ನು ಓದಿ-ತಿಳಿದು ಆರೋಪ ಮಾಡಬೇಕು. ಈಚೆಗೆ ಅವರು ಹಾಕಿದ ಪ್ರಕರಣದಲ್ಲಿ ನನ್ನ ಪರವಾಗಿ ತೀರ್ಪು ಬಂದಿದ್ದರಿAದ ಹತಾಶರಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ’ ಎಂದು ದಿನಕರ ಶೆಟ್ಟಿ ದೂರಿದರು.
`ಸತ್ಯಕ್ಕೆ ಸಾವಿಲ್ಲ. ಸುಳ್ಳಿಗೆ ಸುಖವಿಲ್ಲ ಎಂದು ನಾನು ನಂಬಿದ್ದೇನೆ. ನಾನು ಮಾಡಿದ ಒಳ್ಳೆಯ ಕೆಲಸಗಳು ನನಗೆ ಶ್ರೀರಕ್ಷೆಯಾಗಿದೆ. ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ್ ಅವರ ಜೀವ ಮುಖ್ಯವಾಗಿದ್ದು, ಅವರು ಮರಳಿ ಬಂದಿದ್ದಾರೆ. ನಾನು ಅಭಿವೃದ್ಧಿಪರವಾಗಿದ್ದು, ನನ್ನ ಮೇಲೆ ಬರುವ ಆರೋಪಗಳಿಗೆ ಇನ್ಮುಂದೆ ಪ್ರತಿಕ್ರಿಯಿಸಲ್ಲ’ ಎಂದು ದಿನಕರ ಶೆಟ್ಟಿ ಸ್ಪಷ್ಟಪಡಿಸಿದರು.