ಯಲ್ಲಾಪುರದ ಲಕ್ಷ್ಮಣ ಮರಾಠಿ ಅವರು ದೇವರಕಾಡು ಅರಣ್ಯ ಪ್ರದೇಶದಲ್ಲಿ ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಉಪನಿರೀಕ್ಷಕ ಶೇಡಜಿ ಚೌಹಾಣ ಅವರು ಲಕ್ಷ್ಮಣ ಮರಾಠಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಮುಂಡಗೋಡು ರಸ್ತೆಯ ರವೀಂದ್ರ ನಗರದಲ್ಲಿ ಲಕ್ಷ್ಮಣ ಮಹೇಶ ಮರಾಠಿ (21) ಕೂಲಿ ಕೆಲಸ ಮಾಡಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ದುಶ್ಚಟಕ್ಕೆ ದಾಸರಾದ ಅವರು ಈಚೆಗೆ ಗಾಂಜಾ ಗುಂಗಿಗೆ ಬಿದ್ದಿದ್ದರು. ಕದ್ದು ಮುಚ್ಚಿ ಗಾಂಜಾ ಸೇವಿಸುವುದಕ್ಕಾಗಿ ಅವರು ದೇವರ ಕಾಡು ಪ್ರವೇಶಿಸಿದ್ದರು.
ಅಕ್ಟೊಬರ್ 8ರಂದು ಮುಂಡಗೋಡು ರಸ್ತೆಯ ದೇವರಕಾಡಿನ ಬಳಿ ಅವರು ಗಾಂಜಾ ಸೇದಿ ಹೊಗೆ ಬಿಡುತ್ತಿದ್ದರು. ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಯಲ್ಲಾಪುರ ಪಿಎಸ್‌ಐ ಶೇಡಜಿ ಚೌಹಾಣ ಅವರು ಹೊಗೆ ಮಾನವನನ್ನು ವಿಚಾರಣೆಗೆ ಒಳಪಡಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಲಕ್ಷ್ಮಣ ಮರಾಠಿ ಗಾಂಜಾ ಸೇವಿಸಿದ್ದು ದೃಢವಾಯಿತು. ಪೊಲೀಸರು ಪ್ರಕರಣ ದಾಖಲಿಸಿ