ಕುಮಟಾದ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತ ಪರಾರಿಯಾಗಿದ್ದರಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ಕುಮಟಾದ ಗಿಬ್ ಸರ್ಕಲ್ ಬಳಿಯ ಅಮರಾನ್ ಬ್ಯಾಟರಿ ಶಾಪ್‌ನಲ್ಲಿ 8 ಸಾವಿರ ರೂ ಮೌಲ್ಯದ 12 ಬ್ಯಾಟರಿ ಕಳ್ಳತನ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದರು. ಅನುಮಾನದ ಮೇರೆಗೆ ಭಟ್ಕಳದ ಇಬ್ಬರನ್ನು ವಶಕ್ಕೆಪಡೆದಿದ್ದರು. ಅವರೇ ಕಳ್ಳತನದಲ್ಲಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಪೊಲೀಸರಿಗೆ ಅರಿವಾಯಿತು. ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಪೌಜಾನ್ ಅಹ್ಮದ್ ಎಂಬ ಕಳ್ಳ ಪರಾರಿಯಾಗಿದ್ದು, ಪೊಲೀಸರು ಆತನನ್ನು ಹಿಡಿಯಲು ಶ್ರಮಿಸಿದರು. ಆದರೆ, ಆ ಕಳ್ಳ ಮಾತ್ರ ಸಿಗಲಿಲ್ಲ.
ಆಸ್ಪತ್ರೆಯ ಕಂಪೌoಡ್ ಹಾರಿ ಕಳ್ಳ ಪರಾರಿಯಾಗಿದ್ದರಿಂದ ಪೊಲೀಸರು ಕಪೌಂಡ್ ಹಾರಿದರು. ಆದರೆ, ಈ ವೇಳೆ ಪೊಲೀಸರು ಗಾಯಗೊಂಡರು. ಆರೋಪಿ ಬಗ್ಗೋಣ ರಸ್ತೆಯ ಸಿಂಧೂರು ಬೇಕರಿ ಪಕ್ಕದ ಗೇಟ್ ಒಳಗಿಂದ ತಪ್ಪಿಸಿಕೊಂಡಿರುವುದನ್ನು ಜನ ನೋಡಿದ್ದಾರೆ. ಶುಕ್ರವಾರ ರಾತ್ರಿ ಆತ ಪರಾರಿಯಾಗಿದ್ದು, ಕತ್ತಲಿನಲ್ಲಿ ಹುಡುಕಾಟ ಸಾಧ್ಯವಾಗಲಿಲ್ಲ.
ಹಳೇ ಹೆರವಟ್ಟಾ, ಬಗ್ಗೋಣ ಸೇರಿ ಎಲ್ಲಾ ಕಡೆ ಹುಡುಕಾಟ ನಡೆದಿದ್ದು, ಫೋಟೋದಲ್ಲಿರುವ ಕಳ್ಳನನ್ನು ಕಂಡರೆ ಪೊಲೀಸರಿಗೆ ಫೋನ್ ಮಾಡುವಂತೆ ಸೂಚಿಸಲಾಗಿದೆ.