ದೀಪಾವಳಿ ಹಬ್ಬಕ್ಕೂ ಪತ್ನಿ ಮನೆಗೆ ಬಾರದ ಕೊರಗಿನಲ್ಲಿ ಅಂಕೋಲಾದ ಶಿವಾನಂದ ಆಗೇರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಮುನಿಸಿಗೆ ಕಾರಣ ಹುಡುಕಿ ಸಮಾಧಾನ ಮಾಡಲು ಸಾಧ್ಯವಾಗದ ನೋವಿನಲ್ಲಿಯೇ ಅವರು ನೇಣಿಗೆ ಶರಣಾಗಿದ್ದಾರೆ.
ಅಂಕೋಲಾ ಭಾವಿಕೇರಿಯಲ್ಲಿ ಶಿವಾನಂದ ಶಂಕರ್ ಆಗೇರ್ (34) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಜೀವನ ನಿರ್ವಹಣೆಗೆ ಅಲ್ಲಲ್ಲಿ ಸಾಲವನ್ನು ಮಾಡಿದ್ದರು. ಈಚೆಗೆ ದಂಪತಿ ನಡುವೆ ಸಣ್ಣ ವೈಮನಸ್ಸು ಬಂದಿದ್ದು, ಶಿವಾನಂದ ಆಗೇರ್ ಅವರ ಪತ್ನಿ ಮುನಿಸಿಕೊಂಡಿದ್ದರು. ಆದರೆ, ದೀಪಾವಳಿ ಹಬ್ಬಕ್ಕೆ ಪತ್ನಿ ಮನೆಗೆ ಬರುವ ಬಗ್ಗೆ ಅವರು ಭರವಸೆ ಹೊಂದಿದ್ದರು.
ಆದರೆ, ಶಿವಾನಂದ ಆಗೇರ್ ಅವರ ನಿರೀಕ್ಷೆಯ ಪ್ರಕಾರ ಅವರ ಪತ್ನಿ ಮನೆಗೆ ಬರಲಿಲ್ಲ. ಕಾದು ಕಾದು ಸುಸ್ತಾದ ಅವರು ಬೇಸರಗೊಂಡರು. ಅಕ್ಟೊಬರ್ 21ರಂದು ಬೆಳಗ್ಗೆ 1.45ರ ಆಸುಪಾಸಿಗೆ ಮನೆಯೊಳಗೆ ಪ್ರವೇಶಿಸಿದ ಶಿವಾನಂದ ಆಗೇರ್ ಅವರು ಒಳಗಿನಿಂದ ಚಿಲಕ ಹಾಕಿದರು. ಮನೆಯ ಪಕಾಶಿಗೆ ವೇಲಿನಿಂದ ನೇಣುಬಿಗಿದುಕೊಂಡರು. ತಮ್ಮನ ಶವ ನೋಡಿದ ಅಕ್ಕ ಅಕ್ಕ ಭಾರತಿ ಮಂಜು ಆಗೇರ್ ಅವರು ಬಿಕ್ಕಳಿಸಿ ಅತ್ತರು. ಅದಾದ ನಂತರ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಶವವನ್ನು ಶವಾಗಾರಕ್ಕೆ ಕಳುಹಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’