ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸುತ್ತಿರುವ ಯಲ್ಲಾಪುರದ ಯುಕೆ ನೇಚರ್ ಸ್ಟೇ ಪ್ರವಾಸೋದ್ಯಮದ ಮೂಲಕವೇ ಉದ್ಯೋಗ ಸೃಷ್ಠಿಗೆ ಮುಂದಾಗಿದೆ. ದುಡಿಯುವ ಕೈಗಳಿಗೆ ಕಾಸು ಕೊಟ್ಟು ತರಬೇತಿಯನ್ನು ನೀಡುವ ಯೋಜನೆಯೊಂದನ್ನು ಯುಕೆ ನೇಚರ್ ಸ್ಟೇ ಪರಿಚಯಿಸಿದೆ. ನಿಸರ್ಗದೊಳಗೇ ಬದುಕಿ, ಹೊಸದನ್ನು ಕಲಿಯುವ ಒಂದು ಜೀವನ ಶೈಲಿ ರೂಡಿಸಿಕೊಳ್ಳುವವರಿಗೆ ಈ ರೆಸಾರ್ಟ ಕರೆಯುತ್ತಿದೆ!
ಸುತ್ತಲು ನೈಸರ್ಗಿಕ ಕಾಡು-ಮೇಡು, ತಣ್ಣಗೆ ಹರಿಯುವ ಹೊಳೆ, ನಸುಕಿನ ಮಂಜಿನಲ್ಲಿ ಎಚ್ಚರವಾದಾಗ ಇಂಪಾಗಿ ಕೇಳುವ ಹಕ್ಕಿಗಳ ಕೂಗು. ಆ ರೆಸಾರ್ಟಿನಲ್ಲಿ ಚಿಲಿಪಿಲಿ ನಾದದ ಜೊತೆ ಆರಂಭವಾಗುವ ದಿನ. ಇದೆಲ್ಲವನ್ನು ಆಹ್ವಾದಿಸಿ ಒಂದು ವರ್ಷ ಕಳೆಯುವುದೇ ಒಂದು ಸೊಬಗು. ಅದರಲ್ಲಿಯೂ ಗ್ರಾಮೀಣ ಭಾಗದ ನಿರುದ್ಯೋಗಿಗಳನ್ನು ಗುರಿಯಾಗಿರಿಸಿಕೊಂಡು ಯುಕೆ ನೇಚರ್ ಸ್ಟೇ ರೂಪಿಸಿದ `ನೇಚರ್ ಸ್ಟೇ ಮ್ಯಾನೇಜ್ಮೆಂಟ್ ತರಬೇತಿ’ ಮುಗಿಸಿದರೆ ಹೊಸ ಜೀವನ ಶೈಲಿ ಜೊತೆ ಭವಿಷ್ಯ ನಿರ್ಮಾಣದ ಮಾರ್ಗ ಸಿಗುವುದು ಖಚಿತ.
ಆಟವಾಡುತ್ತಲೇ ಪಾಠ ಕಲಿಯಿರಿ!
ಯುಕೆ ನೇಚರ್ ಸ್ಟೇ’ಯಲ್ಲಿ ಗುರುಕುಲ ಪದ್ಧತಿಯ ಆಧಾರದಲ್ಲಿ ಅತಿಥಿ ಸತ್ಕಾರ ಮಾಡುವ ವಿಧಾನಗಳ ಬಗ್ಗೆ ಇಲ್ಲಿ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಉಚಿತ ಊಟ, ವಸತಿ, ವೈಫೈ ಹಾಗೂ ಬಟ್ಟೆಗಳ ಜೊತೆ ಮಾಸಿಕ 3 ಸಾವಿರ ರೂ ಗೌರವಧನ ನೀಡಲಾಗುತ್ತದೆ. ವರ್ಷದ ಕಲಿಕೆ ನಂತರ ವಿವಿಧ ಹೊಟೇಲ್, ರೆಸಾರ್ಟ, ಹೋಂ ಸ್ಟೇಗಳಲ್ಲಿ ಉದ್ಯೋಗ ಅವಕಾಶ ಒದಗಿಸಲಾಗುತ್ತದೆ. ಪ್ರವಾಸೋದ್ಯಮ ವಿಷಯವಾಗಿ ಸ್ವಂತ ಉದ್ಯೋಗ ಬಯಸುವವರಿಗೂ ಯುಕೆ ನೇಚರ್ ಸ್ಟೇ ಬೆಂಬಲ ನೀಡುತ್ತದೆ. ಹೋಂ ಸ್ಟೇ, ರೆಸಾರ್ಟ ನಿರ್ಮಾಣದ ಕನಸು ಹೊಂದಿದವರಿಗೆ ಪ್ರಾಯೋಗಿಕ ತರಬೇತಿಗಳ ಮೂಲಕ ಅವರ ಕೌಶಲ್ಯ ವೃದ್ಧಿಸುವ ಕಾರ್ಯ ನವೆಂಬರ್ 1ರಿಂದ ಶುರುವಾಗುತ್ತಿದೆ.
ಶಾಲೆಯ ತರಗತಿಗಳಲ್ಲಿ ಅಥವಾ ಪುಸ್ತಕದ ಪುಟಗಳಲ್ಲಿ ಕಲಿಯುವ ವಿಷಯಗಳು ಹೆಚ್ಚಿನ ಸಂದರ್ಭಗಳಲ್ಲಿ ಬದುಕಿನ ನೈಜ ಅನುಭವ ನೀಡಲು ಸೋತುಬಿಡುತ್ತವೆ. ಒಬ್ಬ ವಿದ್ಯಾರ್ಥಿ ಹೋಟೆಲ್ ಮ್ಯಾನೇಜ್ಮೆಂಟ್ ಪುಸ್ತಕ ಓದಿದರೂ, ಅವರಿಗೆ ಆ ಅನುಭವ ಕೇವಲ ಪುಸ್ತಕದಿಂದಷ್ಟೇ ಸಿಕ್ಕುವುದಿಲ್ಲ. ಇದನ್ನು ಅರಿತ ಯುಕೆ ನೇಚರ್ ಸ್ಟೇಯ ನಿರಂಜನ ಭಟ್ಟ ಹಾಗೂ ಸೌಮ್ಯಾ ಭಟ್ಟ ದಂಪತಿ ಪ್ರಕೃತಿಯ ನಡುವೆ ಪ್ರಾಯೋಗಿಕ ಪಾಠ ಮಾಡುವ ವಿಧಾನಕ್ಕೆ ಮುಂದಾಗಿದ್ದಾರೆ. ಕಾಡಿನ ಜ್ಞಾನ ಬಿತ್ತರಿಸುವ ನುರಿತ ತಜ್ಞರು ಇಲ್ಲಿ ಮಾತಿಗೆ ಸಿಗುತ್ತಾರೆ. ಔಷಧಗಳ ಸತ್ವವಿರುವ ಗಿಡ ಮೂಲಿಕೆಗಳ ಪರಿಚಯ, ಪ್ರಾಣಿ-ಪಕ್ಷಿಗಳ ಬದುಕಿನ ಆಳ ಅಧ್ಯಯನ ಸೇರಿ ಅನೇಕ ವಿಷಯಗಳ ಬಗ್ಗೆ ಇಲ್ಲಿ ಅರಿವು ಮೂಡಿಸಲಾಗುತ್ತದೆ.
ಪೃಕೃತಿ ಜೊತೆ ಬೆರೆತು ಪರಿಸರ ಆಹ್ವಾದಿಸಿ!
ಯುಕೆ ನೇಚರ್ ಸ್ಟೇ `ಅತಿಥಿ ದೇವೋ ಭವ’ ಎಂಬ ಭಾರತೀಯ ಪರಂಪರೆಯ ಮೌಲ್ಯವನ್ನು ಆಧುನಿಕ ರೀತಿಯಲ್ಲಿ ಜೀವಂತಗೊಳಿಸಿದೆ. ಇಲ್ಲಿನ ೯ ಎಕರೆ ಪ್ರದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಸಸ್ಯಗಳು, ಅರಣ್ಯ, ಔಷಧಿ, ಹಣ್ಣು ಮತ್ತು ಹೂವಿನ ಗಿಡಗಳಿವೆ. ಅರಣ್ಯದ ವಾತಾವರಣದ ಜೊತೆ ಮಾನವನ ವಾಸ ಹಾಗೂ ವಿಶ್ರಾಂತಿಗೆ ಯೋಗ್ಯ ಪರಿಸರ ಇಲ್ಲಿದೆ. ಇಂತಹ ನೆಮ್ಮದಿ ಎಲ್ಲರಿಗೂ ಸಿಗಬೇಕು ಎಂಬ ನಿಟ್ಟಿನಲ್ಲಿ ನಿರಂಜನ್ ಮತ್ತು ಸೌಮ್ಯ ಅವರು ಶ್ರಮಿಸುತ್ತಿದ್ದಾರೆ. ಸದ್ಯ ಆಯೋಜಿಸಿರುವ ಒಂದು ವರ್ಷದ ಕೋರ್ಸಿನಲ್ಲಿ ಗುಡ್ಡ-ಬೆಟ್ಟಗಳ ತಿರುಗಾಟ ನಡೆಸಿ ಅರಣ್ಯ ಜ್ಞಾನ ವೃದ್ಧಿಸುವ ಗುರುಗಳು ಜೊತೆಗಿರುತ್ತಾರೆ. ಅತಿಥಿಯನ್ನು ಹಸನ್ಮುಖಿಯಾಗಿ ಸ್ವಾಗತಿಸುವದರಿಂದಹಿಡಿದು ಅವರ ಆಗುಹೋಗುಗಳಿಗೆ ಸ್ಪಂದಿಸುವ ಪ್ರತಿಯೊಂದನ್ನು ಇಲ್ಲಿ ಕಲಿಸುತ್ತಾರೆ. ಗ್ರಾಹಕರೊಂದಿಗೆ ಹೇಗೆ ಸಂಯಮದಿoದ ರ‍್ತಿಸಬೇಕೆಂಬ ಸಾಮಾನ್ಯಪ್ರಜ್ಞೆ ಜೊತೆ ಅವರ ಮನಗೆಲ್ಲುವ ವಿಧಾನವನ್ನು ತಿಳಿಸುತ್ತಾರೆ. ಕರ‍್ಸ ಮುಗಿಸಿದ ನಂತರ ಅಗತ್ಯವಿದ್ದವರಿಗೆ ಉದ್ಯೋಗ.. ಸ್ವ ಉದ್ಯೋಗ ಮಾಡುವವರಿಗೆ ಬೆಂಬಲ ಕೊಡುತ್ತಾರೆ.
ಇಲ್ಲಿ ನೀವೇನು ಕಲಿಯುತ್ತೀರಿ?
* ನಿಸರ್ಗ ಗುರುಕುಲ ಜೀವನ: ಯೋಗ, ಧ್ಯಾನ, ತೋಟಗಾರಿಕೆ, ಶಾಶ್ವತ ಜೀವನ ಪಾಠಗಳು.
* ಹಾಸ್ಪಿಟಾಲಿಟಿ ನಿರ್ವಹಣೆ: ಫ್ರಂಟ್ ಆಫೀಸ್, ಅಡುಗೆ, ಹೌಸ್ಕೀಪಿಂಗ್, ಅತಿಥಿ ಸಂವಹನ.
* ಇಕೋ ಟೂರಿಸಂ: ಟ್ರೆಕ್, ಕ್ಯಾಂಪಿAಗ್, ಸಾಹಸ ನಿರ್ವಹಣೆ.
* ಮಾರ್ಕೆಟಿಂಗ್: ಸೋಷಿಯಲ್ ಮೀಡಿಯಾ, ಬ್ರೋಶರ್, ಶಾರ್ಟ್ ವಿಡಿಯೋ ಸಿದ್ಧತೆ.
* ಮ್ಯಾನೇಜ್ಮೆಂಟ್: ಸ್ವಂತ ಹೋಮ್ಸ್ಟೇ ಸ್ಥಾಪನೆ, ಬಜೆಟಿಂಗ್, ಮಾನವ ಸಂಪನ್ಮೂಲ ಮತ್ತು ವೆಂಡರ್ ನಿರ್ವಹಣೆ
* ಇಂಟರ್ನ್ಶಿಪ್: ನೈಜ ಅತಿಥಿ ಅನುಭವದ ಆಧಾರದ ಮೇಲೆ ಪ್ರಾಜೆಕ್ಟ್.
* ಪ್ರಮಾಣಪತ್ರ ಹಾಗೂ ಉದ್ಯೋಗ ಮಾರ್ಗದರ್ಶನ.
ತರಬೇತಿ ನಂತರದ ಫಲಿತಾಂಶ
* ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ತಕ್ಷಣ ಉದ್ಯೋಗ.
*ಸ್ವಂತ ಹೋಮ್ಸ್ಟೇ ಅಥವಾ ರೆಸಾರ್ಟ್ ಆರಂಭಿಸಲು ಮಾರ್ಗದರ್ಶನ.
* ಯುಕೆ ನೇಚರ್ ಸ್ಟೇ ಪ್ರಮಾಣಪತ್ರ ಹಾಗೂ ಪ್ಲೇಸ್ಮೆಂಟ್ ನೆರವು.
* ನೈಜ ಅನುಭವದ ಮೂಲಕ ನಿರ್ವಹಣಾ ಕೌಶಲ್ಯ.
ಇಲ್ಲಿ ನಿಮಗೇನು ಸಿಗುತ್ತದೆ?
*ನೈಸರ್ಗಿಕ ವಾತಾವರಣದ ವಸತಿ.
*ಸಸ್ಯಾಹಾರ ಮತ್ತು ಹೈಜೀನಿಕ್ ಆಹಾರ.
*ವೈ-ಫೈ, ಯೂನಿಫಾರ್ಮ್ ಹಾಗೂ ಬಟ್ಟೆ. ಮಾಸಿಕ 3 ಸಾವಿರ ರೂ ಆರ್ಥಿಕ ನೆರವು.
*ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನ ಚಟುವಟಿಕೆಗಳು
*ಸಂವಹನ ಕೌಶಲ್ಯ, ಅರ್ಜಿ ಮಾಹಿತಿ, ಅತಿಥಿ ಸತ್ಕಾರದ ಸಂಪೂರ್ಣ ತರಬೇತಿ*ಉದ್ಯೋಗ ಅಥವಾ ಪ್ರವಾಸೋದ್ಯಮದಲ್ಲಿನ ಸ್ವ ಉದ್ಯೋಗಕ್ಕೆ ಬೆಂಬಲ
ಎಲ್ಲಿ ಬರುವುದು? ಯಾರನ್ನು ಸಂಪರ್ಕಿಸುವುದು?
ಈ ತರಬೇತಿ ಯಲ್ಲಾಪುರದ ಸುಂಗನಮಕ್ಕಿಯ ಯುಕೆ ನೇಚರ್ ಸ್ಟೇ ರೆಸಾರ್ಟಿನಲ್ಲಿ ನಡೆಯಲಿದೆ. ಸದ್ಯ 25 ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ಕೊಡಲಾಗುತ್ತದೆ. ಅಕ್ಟೊಬರ್ 31ರ ಒಳಗೆ 9449567673ಗೆ ವಾಟ್ಸಪ್ ಮೂಲಕ ಸಂಪರ್ಕಿಸಿದರೆ ಇನ್ನಷ್ಟು ವಿವರ ಸಿಗಲಿದೆ.

#Sponsored