ವಿದೇಶದಲ್ಲಿ ವಿವಾಹವಾಗಿ ಒಟ್ಟಿಗೆ ಬದುಕು ಕಂಡುಕೊoಡಿದ್ದ ದಾಂಡೇಲಿಯ ಸನಾ ಅತ್ತಾರ್ ಹಾಗೂ ವಿನೋದಕುಮಾರ ಬಿಜ್ಜಂ ಭಾರತಕ್ಕೆ ಬಂದು ಬೇರೆಯಾಗಿದ್ದಾರೆ. ಸದ್ಯ ವಿನೋದಕುಮಾರ್ ಬಿಜ್ಜಂ ಅವರು ಕಾಣೆಯಾಗಿದ್ದು, `ಪತಿಯನ್ನು ಹುಡುಕಿಕೊಡಿ’ ಎಂದು ಸನಾ ಅತ್ತಾರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಸನಾ ಅತ್ತಾರ್ ಅವರು ಲಂಡನ್’ನಲ್ಲಿ ಸ್ಟಾಫ ನರ್ಸ ಆಗಿದ್ದರು. ವಿನೋದಕುಮಾರ ಬಿಚ್ಚಂ ಅವರು ಸಹ ಅದೇ ದೇಶದಲ್ಲಿದ್ದರು. ಅವರಿಬ್ಬರು ವಿವಾಹವಾಗಿ ಏಳು ವರ್ಷ ಸಂಸಾರ ನಡೆಸಿದರು. ಅದಾದ ನಂತರ ಈ ದಂಪತಿ ಭಾರತಕ್ಕೆ ಮರಳಿದ್ದು, ಕೌಟುಂಬಿಕ ಕಲಹವೊಂದು ಅವರನ್ನು ಕಾಡಿತು.
ಸೆಪ್ಟೆಂಬರ್ 29ರ ಮಧ್ಯಾಹ್ನ ಮನೆಯಲ್ಲಿ ನಡೆದ ಜಗಳದಿಂದ ವಿನೋದಕುಮಾರ ಬಿಜ್ಜಂ ಅವರು ಬೇಸರಿಸಿಕೊಂಡರು. ಭಿನ್ನಾಭಿಪ್ರಾಯದಿಂದ ನೊಂದ ಅವರು `ನನಗೆ ಏನೂ ಬೇಡ’ ಎನ್ನುತ್ತ ಮನೆಯಿಂದ ಹೊರಹೋದರು. ಎಷ್ಟು ಹೊತ್ತಾದರೂ ಅವರು ಮರಳದ ಕಾರಣ ಸನಾ ಅತ್ತಾರ್ ಅವರು ಆತಂಕಕ್ಕೆ ಒಳಗಾದರು. ವಾರ ಕಳೆದರೂ ಪತಿ ಮರಳದ ಕಾರಣ ಪೊಲೀಸರ ಮೊರೆ ಹೋದರು.
ಪ್ರಕರಣ ದಾಖಲಿಸಿದ ಪೊಲೀಸರು ವಿನೋದಕುಮಾರ ಬಿಜ್ಜಂ ಅವರಿಗಾಗಿ ಹುಡುಕಾಟ ನಡೆಸಿದರು. ಲಭ್ಯ ಮಾಹಿತಿ ಪ್ರಕಾರ ಪೊಲೀಸರಿಗೆ ವಿನೋದಕುಮಾರ ಬಿಚ್ಚಂ ಅವರ ಕುರಿತು ಸಣ್ಣ ಸುಳಿವು ಸಿಕ್ಕಿದೆ. ಅವರ ಮನವೊಲೈಸಿ ಮನೆಗೆ ಕರೆತರುವ ಪ್ರಯತ್ನ ನಡೆದಿದೆ.