ಕಾರವಾರ ಬಸ್ ನಿಲ್ದಾಣದ ಬಳಿಯಿರುವ ಬಾಲಾಜಿ ಸ್ಟೋರ್ಸಿನಲ್ಲಿ ಕಳ್ಳತನ ನಡೆದಿದಿದೆ. ಕ್ಷಣಮಾತ್ರದಲ್ಲಿ ಅಂಗಡಿಯವರ ಗಮನ ಬೇರೆಡೆ ಸೆಳೆದ ಕಳ್ಳ ಮೊಬೈಲ್ ಕದ್ದು ಪರಾರಿಯಾದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ADVERTISEMENT
ಮಹಾರಾಷ್ಟದ ಕಂದಾರ್ ನಂದೂರಿನ ಆಕಾಶ ಸರೋಡೆ ಎಂಬಾತರು ಕಾರವಾರಕ್ಕೆ ಬಂದಿದ್ದರು. ಬಸ್ ನಿಲ್ದಾಣ ಬಳಿಯಿರುವ ಮೊಬೈಲ್ ಅಂಗಡಿಗೆ ಹೋದ ಅವರು ಅಲ್ಲಿ ತಮ್ಮ ಆಧಾರ್ ಕಾರ್ಡ ನೀಡಿ ಫೋಟೋ ತೆಗೆಸಿಕೊಂಡಿದ್ದರು. ಅದಾದ ನಂತರ ಅಕ್ಟೊಬರ್ 20ರ ಸಂಜೆ ಬಸ್ ನಿಲ್ದಾಣ ಬಳಿಯ ಬಾಲಾಜಿ ಸ್ಟೋರ್ಸಿಗೆ ಹೋಗಿದ್ದ ಆಕಾಶ ಸರೋಡೆ ಆ ಮಳಿಗೆಯಲ್ಲಿದ್ದ ಮೊಬೈಲ್ ಕದ್ದು ಜೇಬಿಗೆ ಇಳಿಸಿದ್ದರು. ತಕ್ಷಣ ಆಕಾಶ ಸರೋಡೆ ಅಲ್ಲಿಂದ ಪರಾರಿಯಾಗಿದ್ದು, ಮೊಬೈಲ್ ಕದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಯಿತು. ಜೊತೆಗೆ ಅದು ಭಾರೀ ಪ್ರಮಾಣದಲ್ಲಿ ವೈರಲ್ ಆಯಿತು.
ADVERTISEMENT
ವೈರಲ್ ಆದ ವಿಡಿಯೋ ನೋಡಿದ ಬಸ್ ನಿಲ್ದಾಣದ ಬಳಿಯಿರುವ ಮತ್ತೊಂದು ಅಂಗಡಿಯವರು ಅದೇ ವ್ಯಕ್ತಿ ತಮ್ಮ ಅಂಗಡಿಗೆ ಬಂದಿದ್ದನ್ನು ನೆನಪಿಸಿಕೊಂಡರು. ಆತನ ಮುಖ ಹಾಗೂ ಧರಿಸಿದ ಬಟ್ಟೆ ಗಮನಿಸಿ ತಮ್ಮ ಅಂಗಡಿಗೂ ಕಳ್ಳಬಂದಿದನ್ನು ಖಚಿತಪಡಿಸಿಕೊಂಡರು. ಆತ ನೀಡಿದ ದಾಖಲೆಗಳನ್ನು ನೋಡಿ ಅದರಲ್ಲಿದ್ದ ವಿಳಾಸ ನೋಡಿದರು. ತಮ್ಮ ಬಳಿಯಿದ್ದ ಕಳ್ಳನ ಆಧಾರ್ ಕಾರ್ಡ ಹಾಗೂ ಸ್ಪಷ್ಟ ಫೋಟೋವನ್ನು ವೈರಲ್ ಮಾಡಿದರು.
ADVERTISEMENT
ಹೀಗಾಗಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಮೊಬೈಲ್ ಕದ್ದವನ ಹೆಸರು-ವಿಳಾಸ ಗೊತ್ತಾಗಿದೆ. ಮೊಬೈಲ್ ಕಳೆದುಕೊಂಡವರು ಕಳ್ಳನ ಹುಡುಕಾಟಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಲಭ್ಯ ದಾಖಲೆಗಳ ಆಧಾರದಲ್ಲಿ ಆತನ ಶೋಧ ಶುರುವಾಗಿದೆ.