ಕುಮಟಾದ ಗಿಬ್ ಸರ್ಕಲ್ ಬಳಿಯಿರುವ ಬಾಬಾ ಕಾಂಪ್ಲೆಕ್ಸಿನಲ್ಲಿ ಕಳ್ಳತನವಾಗಿದೆ. ಅಲ್ಲಿನ ಸ್ಯಾಮನ್ ಎಂಟರ್ ಪ್ರೈಸಸ್’ಗೆ ನುಗ್ಗಿದ ಕಳ್ಳರು ಬ್ಯಾಟರಿಗಳನ್ನು ಕದ್ದಿದ್ದಾರೆ.
ಅಕ್ಟೊಬರ್ 7ರ ಸಂಜೆ ನ ಸ್ಯಾಮನ್ ಕುಮಟಾದ ಗಿಬ್ ಸರ್ಕಲ್ ಬಳಿಯಿರುವ ಬಾಬಾ ಕಾಂಪ್ಲೆಕ್ಸಿನಲ್ಲಿ ಕಳ್ಳತನವಾಗಿದೆ. ಅಲ್ಲಿನ ಸ್ಯಾಮನ್ ಎಂಟರ್ ಪ್ರೈಸಸ್’ಗೆ ನುಗ್ಗಿದ ಕಳ್ಳರು ಬ್ಯಾಟರಿಗಳನ್ನು ಕದ್ದಿದ್ದಾರೆ.’ ಒಳಗೆ 100ಎಎಚ್’ನ 12 ಬ್ಯಾಟರಿಗಳಿದ್ದವು. ಅಕ್ಟೊಬರ್ 8ರ ಬೆಳಗ್ಗೆ ಬಂದು ನೋಡಿದಾಗ ಅವು ನಾಪತ್ತೆಯಾಗಿದ್ದವು. ಮಳಿಗೆಯ ಶಟರ್ಸ ಒಡೆದ ಕಳ್ಳರು ಅಲ್ಲಿದ್ದ 12 ಬ್ಯಾಟರಿಗಳನ್ನು ಎಗರಿಸಿದ್ದಾರೆ. ಅದಕ್ಕೂ ಮುನ್ನ ಕಳ್ಳರು ಮಳಿಗೆಯ ಗ್ಲಾಸುಗಳನ್ನು ಒಡೆದು ಪುಡಿಪುಡಿ ಮಾಡಿದ್ದಾರೆ.
ಹರವೆಟ್ಟಾ ಬಳಿಯ ಗುಡಾಳದ ಗಣೇಶ ಗೌಡ ಅವರು ಸ್ಯಾಮನ್ ಎಂಟರ್ ಪ್ರೈಸಸ್”ನ ಸೇಲ್ಸ & ಸರ್ವೀಸ್ ಮ್ಯಾನೇಜರ್ ಆಗಿದ್ದು, ಕಳ್ಳತನ ಅವರ ಗಮನಕ್ಕೆ ಬಂದಿದೆ. ಈ ಹಿನ್ನಲೆ ಗಣೇಶ ಗೌಡ ಅವರು ಕಳ್ಳರ ಹುಡುಕಾಟಕ್ಕಾಗಿ ಪೊಲೀಸ್ ದೂರು ನೀಡಿದ್ದಾರೆ. `8 ಸಾವಿರ ರೂ ಮೌಲ್ಯದ 12 ಬ್ಯಾಟರಿ ಕಳ್ಳತನದಿಂದ 96 ಸಾವಿರ ನಷ್ಟವಾಗಿದ್ದು, ಕಳ್ಳರನ್ನು ಹುಡುಕಿ ಬ್ಯಾಟರಿ ಮರಳಿಸಿ’ ಎಂದವರು ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳರ ಶೋಧ ಶುರು ಮಾಡಿದ್ದಾರೆ.