ಊಟ ಸ್ವೀಕರಿಸಿದ ಕಾರಣ ಬೆದರಿಕೆ ಒಡ್ಡಿದ ವಿಚಿತ್ರ ಪ್ರಕರಣ ಶಿರಸಿಯಲ್ಲಿ ನಡೆದಿದೆ. ಕಸ್ತೂರಿಬಾನಗರದಲ್ಲಿ ಮದರಸಾ ನಡೆಸುವ ನೂರ್ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ಬೆದರಿಕೆ ಎದುರಿಸುತ್ತಿದ್ದು, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನೂರ್ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ವ್ಯಾಪಾರಿಯಾಗಿದ್ದು, ದುರಾಲ ಉದಮ ಮದಿನ್ ತುನಬ್ಬಿ ಚಾರಿಟೇಬಲ್ ಟ್ರಸ್ಟ್ ಅಡಿ ಮದರಸಾವೊಂದನ್ನು ನಡೆಸುತ್ತಿದ್ದಾರೆ. ಅಕ್ಟೊಬರ್ 23ರಂದು ರಾತ್ರಿ ಶಿರಸಿ ಕಸ್ತೂರಿಬಾನಗರದಲ್ಲಿ ವಾಸವಾಗಿರುವ ಅನೀಶ ತಹಶೀಲ್ದಾರ್, ಇಮ್ರಾನ್ ಮೆಹಬುಲಿ, ರಿಯಾಜ ಹಿರೆಹಳ್ಳಿ ಹಾಗೂ ಮಹಮದ್ ಜಾಪರ್ ಅವರ ಮದರಸಾ ಬಳಿ ಬಂದಿದ್ದರು. ಅವರು ಡಬ್ಬಿಯೊಂದರಲ್ಲಿ ಊಟ ತಂದಿದ್ದು, ಅದನ್ನು ಮದರಸಾ ಬಾಗಿಲ ಬಳಿಯಿರಿಸಿದರು.
ಆದರೆ, ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ಅದನ್ನು ಸ್ವೀಕರಿಸಲಿಲ್ಲ. ಊಟ ಸ್ವೀಕರಿಸಿದ ಕಾರಣ ಅವರೆಲ್ಲರೂ ಬೆದರಿಕೆ ಒಡ್ಡಿದರು. ಊಟ ಸ್ವೀಕರಿಸದೇ ಇದ್ದರೆ ಮದರಸಾವನ್ನು ಬಂದ್ ಮಾಡುವುದಾಗಿ ಎಚ್ಚರಿಸಿದರು. ಹೀಗಾಗಿ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಬೆದರಿಕೆ ಒಡ್ಡಿದವರ ವಿರುದ್ಧ ಪ್ರರಕಣ ದಾಖಲಿಸಿದ್ದಾರೆ.