ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೇನೂ ಕೊರತೆ ಇಲ್ಲ. ಆದರೆ, ಉತ್ತಮ ಶಿಕ್ಷಕರನ್ನು ರೂಪಿಸಿ ಒಂದೇ ಸೂರಿನ ಅಡಿ ಸಮಗ್ರ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿಲ್ಲ. ಈ ವಿಷಯ ಅರಿತ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜು ಇದೇ ಮೊದಲ ಬಾರಿಗೆ ನವದೆಹಲಿಯ ಎನ್.ಸಿ.ಟಿ.ಇ ಜಾರಿಗೊಳಿಸಿದ ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಪದವಿ ಕೋರ್ಸನ್ನು ಜಿಲ್ಲೆಗೆ ಪರಿಚಯಿಸಿದೆ. B.A.B.Ed ಹಾಗೂ B.Sc. B.Ed (ITEP) ಪದವಿಯನ್ನು ಇಲ್ಲಿ ಶುರು ಮಾಡಲಾಗಿದೆ.
ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜು ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಹುಟ್ಟುಹಾಕಿದ ಕೆನರಾ ವೆಲ್ ಫೇರ್ ಟ್ರಸ್ಟಿನ ಅಂಗಸ0ಸ್ಥೆ. `ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು’ ಎಂಬ ದಿನಕರ ದೇಸಾಯಿ ಅವರ ಕನಸಿಗೆ ಈ ಕಾಲೇಜು ಸದಾ ನೀರೆರೆಯುತ್ತಿದೆ. ಸದ್ಯ ಮೌಲ್ಯಾಧಾರಿತ ಶಿಕ್ಷಣ ನೀಡಲು ಅಗತ್ಯವಿರುವ ಶಿಕ್ಷಕರನ್ನು ಸಿದ್ಧಪಡಿಸುವ ಕೌಶಲ್ಯಾಭಿವೃದ್ಧಿ ಕೋರ್ಸನ್ನು ಅಭ್ಯರ್ಥಿಗಳ ಮುಂದಿರಿಸಿದೆ. ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜು ಇದೀಗ ಉತ್ತಮ ಶಿಕ್ಷಕರನ್ನು ರೂಪಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿಯೇ ಮೊದಲ ಬಾರಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಗೋಖಲೆ ಸೆಂಟಿನರಿ ಕಾಲೇಜು ವಿಶೇಷ ಕೋರ್ಸವೊಂದನ್ನು ಪರಿಚಯಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ B.A.B.Ed ಹಾಗೂ B.Sc. B.Ed (ITEP) ಕೋರ್ಸನ್ನು ಒಟ್ಟಿಗೆ ಕಲಿಸುವ ಕಾಯಕ ಇಲ್ಲಿ ಶುರುವಾಗಿದೆ.
ಭವಿಷ್ಯದ ಭಾರತಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಶಿಸ್ತಿನ ಶಿಕ್ಷಕರನ್ನು ರೂಪಿಸುವಲ್ಲಿ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜಿನ ಅನುಭವಗಳು ಆಧಾರ. ಈ ಕಾಲೇಜಿನಲ್ಲಿ ಕಲಿತ ಅನೇಕ ಮಕ್ಕಳು ಸದ್ಯ ದೇಶ-ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಸಮಾಜಕ್ಕೆ ಉನ್ನತ ಕೊಡುಗೆ ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸುವ ಉಪನ್ಯಾಸಕರು ಇಲ್ಲಿದ್ದು, ಅದರ ಮುಂದುವರೆದ ಭಾಗವಾಗಿ ಈ ಕಾಲೇಜು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸಕ್ಕೆ ಮುನ್ನಡಿಯಿಟ್ಟಿದೆ. ದಿನಕರ ದೇಸಾಯಿಯವರು ಕೆನರಾ ವೆಲ್ ಫೇರ್ ಟ್ರಸ್ಟಿನ ಮೂಲಕ ಸ್ಥಾಪಿಸಿದ ಜನತಾ ವಿದ್ಯಾಲಯಗಳೆಂಬ ಜ್ಞಾನ ದೇಗುಲಗಳು ಈಗಲೂ ಅಕ್ಷರ ಲೋಕವನ್ನು ಬೆಳಗುತ್ತಿವೆ. ಹಿಂದುಳಿದ ಸಮುದಾಯಗಳಲ್ಲಿ ಶಿಕ್ಷಣ ಪ್ರಸರಣ ಮಾಡಿ ಅನ್ನ ಮತ್ತು ಅರಿವಿನ ಮಾರ್ಗ ತೋರಿಸಿದ ಅವರ ನಡೆ-ನುಡಿಯನ್ನು ಗೋಖಲೆ ಸೆಂಟನರಿ ಕಾಲೇಜು ಅಕ್ಷರಶಃ ಪಾಲಿಸುತ್ತಿದೆ. ಶಿಕ್ಷಣ ಪ್ರಸರಣಕ್ಕಾಗಿ ಅಗತ್ಯವಿರುವ ಶಿಕ್ಷಕರನ್ನು ರೂಪಿಸುವ ಈ ಕಾಯಕಕ್ಕೆ ಕರ್ನಾಟಕ ವಿಶ್ವವಿದ್ಯಾಲಯವೂ ಅಧಿಕೃತ ಮುದ್ರೆ ಒತ್ತಿದೆ. ಹಳ್ಳಿಗಾಡಿನ ರೈತರು, ಕಾರ್ಮಿಕರ ಮಕ್ಕಳು ಸಹ ಉನ್ನತ ಶಿಕ್ಷಣಪಡೆದು ಶಿಕ್ಷಕರಾಗಬೇಕು ಎಂಬ ಕನಸಿಗೆ ಈ ಕೋರ್ಸು ಯೋಗ್ಯವಾಗಿದೆ.
ಪ್ರಾಥಮಿಕ ಮತ್ತು ಪೌಢಶಿಕ್ಷಣ ಹಂತದಲ್ಲಿ ಬೋಧಿಸಲು ಅಗತ್ಯವಿರುವ ಶಿಕ್ಷಕರನ್ನು ರೂಪಿಸುವುದು ಈ ಕೋರ್ಸಿನ ಮುಖ್ಯ ಉದ್ದೇಶ. ಕಲಾ ಮತ್ತು ವಿಜ್ಞಾನ ವಿಭಾಗಗಳ ವಿವಿಧ ಐಚ್ಛಿಕ ವಿಷಯಗಳ ಜೊತೆಗೆ ವಿದ್ಯಾರ್ಥಿಗಳು ಪ್ರಾಯೋಗಿಕ ಪಾಠ ಪ್ರವಚನಗಳ ಅನುಭವ ಇಲ್ಲಿ ಸಿಗುತ್ತದೆ. ಬೋಧನಾ ಉಪಕರಣಗಳ ತಯಾರಿಕೆ, ಪ್ರಯೋಗಾಲಯ ಪ್ರಾತ್ಯಕ್ಷಿಕೆಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗುವುದು ಹೇಗೆ? ಎಂಬ ವಿಷಯವನ್ನು ಇಲ್ಲಿ ಕಲಿಸಲಾಗುತ್ತದೆ. ಮುಂದಿನ ದಿನದಲ್ಲಿ 2 ವರ್ಷಗಳ ಬಿ.ಎಡ್.ಕೋರ್ಸ್ ರೂಪಾಂತರಗೊಳ್ಳಲಿದ್ದು, 4 ವರ್ಷಗಳ ಸಂಯುಕ್ತ ಶಿಕ್ಷಕರ ಪದವಿ ಕೋರ್ಸ್ ಅನಿವಾರ್ಯವಾಗಲಿದೆ. ಸರ್ಕಾರಿ, ಖಾಸಗಿ ವಲಯದಲ್ಲಿನ ಉದ್ಯೋಗಕ್ಕೂ ಈ ಪದವಿ ಪೂರೈಸುವುದು ಕಡ್ಡಾಯವಾಗಲಿದೆ. ಈ ಕೋರ್ಸನ್ನು ಯಶಸ್ವಿಯಾಗಿ ಪೂರೈಸುವ ವಿದ್ಯಾರ್ಥಿಗಳು ಎರಡು ಪದವಿಗಳನ್ನು ಏಕಕಾಲಕ್ಕೆ ಪಡೆಯುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಎರಡು ಪ್ರಧಾನ ವಿಷಯಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ಸಿಗುತ್ತದೆ. ಈ ಕೋರ್ಸು ಆಯ್ಕೆ ಮಾಡಿಕೊಳ್ಳಲು ಪಿಯುಸಿ ಪರೀಕ್ಷೆಯಲ್ಲಿ ಶೇ 50ರ ಅಂಕದೊoದಿಗೆ ಪಾಸಾಗಿರಬೇಕು. ಜೊತೆಗೆ 2025ರ ಏಪ್ರಿಲ್ 29ರಂದು ಎನ್‌ಟಿಎ ನಡೆಸಿದ ಪ್ರವೇಶ ಪರೀಕ್ಷೆಗೆ ಹಾಜರಾಗಿರಬೇಕು.
ನಾಲ್ಕು ವರ್ಷ ಅವಧಿಯ ಈ ಕೋರ್ಸ ಪದವಿಧರ ಶಿಕ್ಷಕ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಎಂದು ರಾಜ್ಯ ಸರ್ಕಾರ ಗೆಜೆಟ್ ಮೂಲಕ ಪ್ರಕಟಿಸಿದೆ. ಶಿಕ್ಷಕರ ಪ್ರಶಿಕ್ಷಣ ತರಬೇತಿಗೆ ಮಾನ್ಯತೆ ನೀಡುವ ರಾಷ್ಟ್ರೀಯ ಶಿಕ್ಷಣ ಮಂಡಳಿ ಈ ಕೋರ್ಸಿಗೆ ಮಾನ್ಯತೆ ಕೊಟ್ಟಿದೆ. ಮಾಹಿತಿ ಕೊರತೆ ಇದ್ದವರಿಗೆ ಕಾಲೇಜಿನವರು ಅರಿವು ಮೂಡಿಸಲು ಸದಾ ಸಿದ್ಧವಾಗಿದ್ದಾರೆ. ಹೀಗಾಗಿ ಶಿಕ್ಷಕರಾಗಲು ಕನಸು ಕಂಡವರಿಗೆ ಈ ಕೋರ್ಸ ಸೂಕ್ತ ಆಯ್ಕೆಯಾಗಿದ್ದು, ಕಾಲೇಜು ಪ್ರವೇಶಕ್ಕೆ ಯಾವುದೇ ಆತಂಕ ಬೇಡ.
ಈ ಮಾಹಿತಿಯನ್ನು ಆಸಕ್ತರಿಗೆ ಶೇರ್ ಮಾಡಿ
ಇನ್ನೆನ್ನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 8971930563, 9964428710, 9448573190, 9901940588
#sponsored