ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ಇಸ್ಪಿಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು ಮೂರು ದಿನದಲ್ಲಿ ನೂರಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಹೊನ್ನಾವರದಲ್ಲಿ ನಿರಂತರ ದಾಳಿ ನಡೆಯುತ್ತಿದೆ. ಅನೇಕ ಕಡೆ ಆರೋಪಿತರು ಸಿಕ್ಕಿಬಿದ್ದಿದ್ದು, ಇನ್ನಿತರ ಕಡೆ ಜೂಜುಕೋರರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಓಡಿ ಹೋದವರ ಹೆಸರು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.
ಅಕ್ಟೊಬರ್ 23ರಂದು ಹೊನ್ನಾವರದ ಒಂದು ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ದಾಳಿ ನಡೆಸಿ 10 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಹಣ, ಮೊಬೈಲ್ ಜೊತೆ ಹಲವು ವಸ್ತುಗಳನ್ನು ಜಪ್ತು ಮಾಡಿದ್ದಾರೆ. ಹಾಡಗೇರಿಯ ಲಕ್ಷಣ ನಾಯ್ಕ, ಈಶ್ವರ ನಾಯ್ಕ, ಅಣ್ಣಪ್ಪ ನಾಯ್ಕ, ಗಣಪತಿ ನಾಯ್ಕ, ರಾಜು ನಾಯ್ಕ, ಶ್ರೀಧರ ನಾಯ್ಕ, ಚಂದ್ರಹಾಸ ನಾಯ್ಕ, ಕೆರೆಮನೆ ಕೆಚ್ಚರೇಕೆಯ ನಾಗರಾಜ ನಾಯ್ಕ, ಕೊಂಡಾಕುಳಿಯ ಗಣಪತಿ ಗೌಡ, ಹುಡಗೋಡದ ರಾಜು ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಈಶ್ವರ ನಾಯ್ಕ ಅವರ ಮನೆಯಲ್ಲಿ ಇಸ್ಪಿಟ್ ಆಡುವಾಗ ಅವರೆಲ್ಲರೂ ಸಿಕ್ಕಿಬಿದ್ದಿದ್ದಾರೆ. ಹೊನ್ನಾವರದ ಹೊದ್ಕೆಶಿರೂರು ಹುಲಿಕಲ್ ಹಸ್ಕಿಯ ಅಕೆಶಿಯಾ ಪ್ಲಾಂಟೇಶನ್ ಒಳಗೆ ಅಡಗಿ ಅಂದರ್ ಬಾಹರ್ ಆಡುತ್ತಿದ್ದ ಅದೇ ಊರಿನ ದಿನೇಶ ನಾಯ್ಕ ಹಾಗೂ ಯೋಗೇಶ ಪಟಗಾರ ಅವರ ಮೇಲೆಯೂ ಪಿಎಸ್‌ಐ ಮಂಜುನಾಥ ಅವರು ದಾಳಿ ಮಾಡಿದ್ದಾರೆ.
ಸಿದ್ದಾಪುರದ ಕಟ್ಟೆಕೈ ಗ್ರಾಮದ ಸೇತುವೆ ಬಳಿ ಜೂಜಾಡುತ್ತಿದ್ದವರ ಮೇಲೆ ಅಕ್ಟೊಬರ್ 23ರಂದು ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಅವರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿಯೂ ಬಿಳಗಿಯ ಅಣ್ಣಪ್ಪ ಗೌಡ, ಹನುಮಂತ ಗೌಡ, ಮರಿಯಾ ಗೌಡ, ಚಂದ್ರಶೇಖರ ಗೌಡ, ಈಶ್ವರ ಗೌಡ ಸಿಕ್ಕಿಬಿದ್ದಿದ್ದಾರೆ. ಹಳಿಯಾಳದ ಹಲವು ಕಡೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಟ್ಟೂ ಮೂರು ಕಡೆ ದಾಳಿ ನಡೆಸಿ 92,650 ರೂ ಹಣವಶಕ್ಕೆಪಡೆದು 50 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಳಿಯಾಳ ಪಟ್ಟಣದ ಕಾರ್ಮೆಲ್ ಸ್ಕೂಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಬಸವರಾಜ, ಧರ್ಮರಾಜ, ವಿನಾಯಕ, ಗಣೇಶ ಮತ್ತು ಅಯೂಬ್ ಬೇಪಾರಿ ಈ ಐವರು ಆರೋಪಿಗಳನ್ನು ಪಿಎಸ್‌ಐ ಬಸವರಾಜ ಎನ್. ಮಬನೂರ ನೇತೃತ್ವದ ತಂಡವು ವಶಕ್ಕೆ ಪಡೆದು ಅವರಿಂದ 28,250 ರೂ ಹಣವಶಕ್ಕೆಪಡೆದಿದೆ. ಹಳಿಯಾಳ ಪಟ್ಟಣದ ಗೋರಿಖಾನ್ ಪೆಟ್ರೋಲ್ ಬಂಕ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಶಿವಾನಂದ, ಶ್ಯಾಮ, ದೇವೇಂದ್ರ, ಅರ್ಜುನ, ಮಾನ್ವೆಲ್, ನಾಸೀರ್‌ಸಾಬ್, ತಬರೇಜ್ ಮತ್ತು ಶ್ರೀಕಾಂತ ಈ ಎಂಟು ಮಂದಿ ಆರೋಪಿಗಳನ್ನು ಪಿಎಸ್‌ಐ ಕೃಷ್ಣಗೌಡ ಅರಕೇರಿ ನೇತೃತ್ವದಲ್ಲಿ ಹಳಿಯಾಳ ಪೊಲೀಸರು ವಶಕ್ಕೆ ಪಡೆದು ಅವರಿಂದ 11,030 ರೂ ಹಣ ಜಪ್ತು ಮಾಡಿದ್ದಾರೆ. ಹಳಿಯಾಳ ತಾಲೂಕಿನ ಶಿವಪುರ ಗ್ರಾಮದ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಪಂಥ ಕಟ್ಟಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಬೃಹತ್ ಗುಂಪಿನ ಮೇಲೆ ಪಿಎಸ್‌ಐ ಬಸವರಾಜ ಎನ್ ಮಬನೂರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದವರಾದ ನಾಗರಾಜ, ಶ್ರೀಕಾಂತ, ಭುಜಂಗ, ವಿನಾಯಕ, ಬಸಪ್ಪ, ಸುರೇಶ, ಬಸವರಾಜ, ಶ್ರೀಕಾಂತ, ಪರಶುರಾಮ, ಸಚಿನ, ರಾಘವೇಂದ್ರ, ಬಾಲಕೃಷ್ಣ, ಶಿವಾನಂದ, ಲೋಕಪ್ಪ, ಶ್ರೀನಾಥ, ಶ್ರೀನಿವಾಸ, ಸುಂದರ, ಸತೀಶ, ಅಭೀಶೇಕ, ಸಂದೀಪ, ದೇವೆಚಿದ್ರ, ಪುಂಡ್ಲಿಕ, ದೀಪಕ, ಜ್ಞಾನೇಶ್ವರ, ಶ್ರೀಕಾಂತ ಹಾಗೂ ಶ್ರೀಕಾಂತ ಸೇರಿ ಒಟ್ಟು 27 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 53,370 ರೂ. ನಗದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ದಾಂಡೇಲಿ ನಗರದ ಬಸ್ ನಿಲ್ದಾಣದ ಎದುರುಗಿನ ಸಾಹೇಲಿ ಲಾಡ್ಜನ ಹಿಂಬದಿಯ ಖಾಲಿ ಸ್ಥಳದಲ್ಲಿ ಅಂದರ-ಬಾಹರ ಜುಜಾಟದಲ್ಲಿ ತೊಡಗಿಸಿಕೊಂಡಿದ್ದವರ ಮೇಲೆಯೂ ಪೊಲೀಸರು ದಾಳಿ ಮಾಡಿದ್ದಾರೆ. ಜೂಜಾಟಕ್ಕೆ ಬಳಸಿದ್ದ ಇಸ್ಪೀಟ್ ಎಲೆಗಳು ಮತ್ತು 3600 ರೂ. ನಗದು ಹಣವನ್ನು ನಗರ ಠಾಣೆಯ ಪೊಲೀಸರು ವಶಕ್ಕೆಪಡೆದಿದ್ದಾರೆ. ಸುಭಾಷನಗರದ ಅಸ್ಲಾಂ ಕಾಸೀಂಸಾಬ ನಿರಲಗಿ, ಸುಭಾಷನಗರದ ದಾವಲಸಾಬ ಕಾಸಿಂಸಾಬ ನಿರಲಗಿ, ಗಾಂಧಿನಗರದ ಮಂಜುನಾಥ ವೀರಭದ್ರ ಹರಿಜನ, ಗಾಂದಿನಗರದ ರಿಜ್ವಾನ ಅಬ್ದುಲ್ ನದಾಫ, ಬಾಲರಾಜ ನಾಗೇಶ ಗಿರಿಯಾಳ, ಮಹ್ಮದ ರಜಾಕ ಸತ್ತಾರ ತಹಶೀಲ್ದಾರ ಸೇರಿ ಹಲವರು ವಿರುದ್ಧ ದಾಂಡೇಲಿ ನಗರ ಪೊಲೀಸ ಠಾಣೆಯ ಪಿಎಸ್‌ಐ ಅಮೀನ್ ಅತ್ತಾರ ಪ್ರಕರಣ ದಾಖಲಿಸಿದ್ದಾರೆ. ಶಿರಸಿಯ ಬನವಾಸಿ ಬಳಿಯ ದನಗನಹಳ್ಳಿ ನವಗ್ರಾಮದ ಸುರೇಶ ರಾಮಾಪುರ ಅವರ ಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಕಾರಣ ಅಲ್ಲಿಯೂ ಪಿಎಸ್‌ಐ ಮಹಾತೇಂಶಪ್ಪ ಕುಂಬಾರ್ ಅವರು ದಾಳಿ ಮಾಡಿದ್ದಾರೆ. ಈ ವೇಳೆ ದಾಸನಕೊಪ್ಪ ದನಗನಹಳ್ಳಿಯ ಬಸವರಾಜ ಕಚವೆ, ರಾಜು ರಾಮಾಪುರ, ಸುರೇಶ ಗೋಯಕರ, ನಾಗರಾಜ ಪಾಟೀಲ. ಮಾಂತೇಶ ಗೋಯಕರ, ಹಜರತ್ ಅಲಿ, ಸಂದೀಪ ರಾಮಾಪುರ, ಸುರೇಶ ರಾಮಾಪುರ ಅವರು ಸಿಕ್ಕಿಬಿದ್ದಿದ್ದಾರೆ.
ಯಲ್ಲಾಪುರ ಹೊಸಳ್ಳಿ ಹಾಗೂ ರವೀಂದ್ರನಗರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿರವತ್ತಿ ಸಮೀಪದ ಹೊಸಳ್ಳಿ ಜನತಾ ಕಾಲೋನಿ ರಸ್ತೆಯ ಪಕ್ಕ ವಿನೋದ ಚೌಹಾಣ, ಶಿವಾಜಿ ಕಾಂಬಳೆ, ಯಲ್ಲಪ್ಪ ಕಾಂಬಳೆ, ಮೌಲಾಲಿ ಮಹಮ್ಮದ್ ಸಾಬ ಸೈಯ್ಯದ್, ಶಿವರಾಜ ಕಿಲಾರಿ, ಬೀರು ಪಟಕಾರೆ ಜೂಜಾಟ ಆಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಇವರಿಂದ 3360 ರೂ ನಗದು ಹಾಗೂ ಜೂಜಾಟದ ಸಲಕರಣೆಗಳನ್ನು ವಶಕ್ಕೆಪಡೆದಿದ್ದಾರೆ.
ಯಲ್ಲಾಪುರ ಪಟ್ಟಣದ ರವೀಂದ್ರನಗರದ ಚೌಡೇಶ್ವರಿ ದೇವಸ್ಥಾನದ ಬಳಿ, ಸಂತೋಷ ಬೋವಿವಡ್ಡರ್, ಗಿರೀಶ ಬೋವಿವಡ್ಡರ್, ಲಕ್ಷ್ಮಣ ಮರಾಠಿ, ಗುರುರಾಜ ಬೋವಿವಡ್ಡರ್, ಪರಶುರಾಮ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಗೌಳಿ, ಸಾಗರ ನಾಯ್ಕ, ಮುಟಿಗೆಪ್ಪ ಬೋವಿವಡ್ಡರ್ ಜೂಜಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಇವರಿಂದ 3220 ರೂ ಹಾಗೂ ಜೂಜಾಟದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.