ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ಅನೇಕರಿಗೆ ಮೋಸ ಮಾಡುತ್ತಿದ್ದ ಹೊನ್ನಾವರದ ಕಚೇರಿಯೊಂದರ ಮೇಲೆ ಬೆಂಗಳೂರಿನ ವಲಸಿಗರ ರಕ್ಷಣಾ ಇಲಾಖೆಯರು ದಾಳಿ ಮಾಡಿದ್ದಾರೆ. ಟ್ರಾವೆಲ್ ಟಚ್ ಟೂರ್ಸ್ & ಟ್ರಾವೆಲ್ಸ್ ರ‍್ಯಾನ್ ಗ್ರೂಪ್) ಎಂಬ ಕಚೇರಿಯಲ್ಲಿನ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅನೇಕ ದಾಖಲೆಗಳನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.
ಹೊನ್ನಾವರದ ಶರಾವತಿ ಸರ್ಕಲಿನಲ್ಲಿ ಈ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು ಭಟ್ಕಳ, ಹೊನ್ನಾವರವರನ್ನು ಗುರಿಯಾಗಿರಿಸಿಕೊಂಡು ಅನೇಕರನ್ನು ಯಾಮಾರಿಸಿತ್ತು. ಅನೇಕರು ಈ ಕಂಪನಿಗೆ ಕಾಸು ಕೊಟ್ಟು ಮೋಸ ಹೋಗಿದ್ದರು. ಮೋಸ ಹೋದವರ ಮಾಹಿತಿ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನೂರಾರು ಬಗೆಯ ಪಾಸ್‌ಪೋರ್ಟಗಳು ಸಿಕ್ಕಿವೆ.
ವಲಸಿಗರ ರಕ್ಷಣಾ ಇಲಾಖೆಯ ಬೆಂಗಳೂರು ಕಚೇರಿಯ ಅಧಿಕಾರಿ ಅವನೀಶ್ ಶುಕ್ಲಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ತನಿಖೆಗೆ ಸಂಬAಧಿಸಿದ ಪ್ರಮುಖ ದಾಖಲೆಗಳು, ರಿಜಿಸ್ಟರ್‌ಗಳು ಮತ್ತು ಇತರ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಮಾಹಿತಿಗಳ ಪ್ರಕಾರ, ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿ ಸೂಪರ್ ಮಾರ್ಕೆಟ್ ಸಿಬ್ಬಂದಿ ಹುದ್ದೆಗಳನ್ನು ಭರವಸೆ ನೀಡಿ ಅಭ್ಯರ್ಥಿಗಳಿಂದ ಹಲವು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿತ್ತು. ಸೆಪ್ಟೆಂಬರ್ 9ರಂದು ವಲಸಿಗರ ರಕ್ಷಣಾ ಇಲಾಖೆ ನೀಡಿದ ನೋಟಿಸ್‌ಗೆ ಕಂಪನಿ ಕ್ಯಾರೇ ಎನ್ನದೇ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿತ್ತು.
ಇದಲ್ಲದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಅನಧಿಕೃತ ನೇಮಕಾತಿ ಸೇವೆಗಳನ್ನು ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ.