ಕುಮಟಾ ಆಡಳಿತ ಸೌಧದ ಅವ್ಯವಸ್ಥೆಗಳ ವಿರುದ್ಧ ಹೋರಾಡುತ್ತಿರುವ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಆಡಳಿತ ಸೌಧದ ಕಟ್ಟಡಕ್ಕಿರುವ ಹುಳುಗಳು ಅವರನ್ನು ಓಡಿಸಿಕೊಂಡು ಬಂದಿದ್ದು, ನೋವು ತಿಂದ ಅವರು ಹೆಜ್ಜೇನು ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.
ಕುಮಟಾ ಆಡಳಿತದ ಬಗ್ಗೆ ಆಗ್ನೇಲ್ ರೋಡ್ರಿಗಸ್ ಅವರು ಮೊದಲಿನಿಂದಲೂ ಅಸಮಧಾನವ್ಯಕ್ತಪಡಿಸುತ್ತಿದ್ದಾರೆ. ವಿವಿಧ ವಿಷಯಗಳಿಗೆ ಅವರು ಆಡಳಿತ ಸೌಧದ ಕಚೇರಿಯಲ್ಲಿ ಅರ್ಜಿ ನೀಡುತ್ತಿದ್ದಾರೆ. ನವೆಂಬರ್ 3ರಂದು ಅರ್ಜಿ ನೀಡುವುದಕ್ಕಾಗಿ ಅವರು ಆಡಳಿತ ಸೌಧದ ಕಚೇರಿಗೆ ಹೋದಾಗ ಅಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ಮಾಡಿದೆ.
`ಶಾಸಕರ ಕಚೇರಿ, ತಹಶೀಲ್ದಾರ್ ಕಚೇರಿ ಜೊತೆ ಅನೇಕ ಇಲಾಖೆ ಕಚೇರಿಗಳು ಈ ಕಟ್ಟಡದಲ್ಲಿವೆ. ಹೀಗಾಗಿ ಇಲ್ಲಿ ನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ವೃದ್ಧರು-ಮಹಿಳೆಯರ ಜೊತೆ ಮಕ್ಕಳು ಸಹ ಬರುತ್ತಿದ್ದು, ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದರೆ ಅಪಾಯ ಖಚಿತ. ಆಡಳಿತ ಸೌಧದ ಕಟ್ಟಡದ ಮೇಲೆ ನಾಲ್ಕು ಜೇನು ಗೂಡುಗಳಿದ್ದು, ಅನಾಹುತ ಆಗುವ ಮುನ್ನ ಅವುಗಳನ್ನು ಸ್ಥಳಾಂತರಿಸಬೇಕು’ ಎಂದು ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದ್ದಾರೆ.