ಮುಂಡಗೋಡದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಹನುಮಂತ ಬಂಗಾಳೆ ಅವರು ವ್ಯಾಪಾರದಲ್ಲಿನ ನಷ್ಟ ಸಹಿಸಲಾಗದೇ ವಿಷ ಕುಡಿದಿದ್ದಾರೆ. ಅವರನ್ನು ಬದುಕಿಸುವುದಕ್ಕಾಗಿ ಕುಟುಂಬದವರು ಮತ್ತೆ ಸಾಲ ಮಾಡಿ ಆಸ್ಪತ್ರೆ ಓಡಾಟ ನಡೆಸಿದರೂ ಪ್ರಯೋಜನವಾಗಿಲ್ಲ.
ಮುಂಡಗೋಡಿನ ಇಂದೂರಿನ ಹನುಮಂತ ಬಂಗಾಳೆ ಅವರು ತಮ್ಮ ವ್ಯಾಪಾರ ವೃದ್ಧಿಗಾಗಿ ಸಾಲ ಮಾಡಿದ್ದರು. ಬೇರೆ ಬೇರೆ ಊರುಗಳಿಂದ ಅವರು ಬಗೆ ಬಗೆಯ ಬಟ್ಟೆಗಳನ್ನು ತರಿಸಿದ್ದರು. ಸ್ಪರ್ಧಾತ್ಮಕ ಬೆಲೆಯಲ್ಲಿ ಅವರು ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಆದರೆ, ಪ್ರಚಾರ ಕೊರತೆಯಿಂದಾಗಿ ಅವರ ಮಳಿಗೆಗೆ ಗ್ರಾಹಕರು ಮಾತ್ರ ಬರುತ್ತಿರಲಿಲ್ಲ. ಇದರಿಂದ ಅವರ ಸಾಲ ಇನ್ನಷ್ಟು ಹೆಚ್ಚಾಯಿತು. ಆರ್ಥಿಕ ಸಂಕಷ್ಟದಿoದ ಅವರಿಗೆ ಬದುಕು ಬೇಸರವಾಯಿತು.
ಅಕ್ಟೊಬರ್ 30ರಂದು ಟೇಲರ್ ಕೆಲಸ ಮಾಡುವ ಅವರ ತಮ್ಮ ಖಂಡೋಬಾ ಬೊಂಗಾಳೆ ಅವರು ಹಿತ್ತಲಿಗೆ ಹೊಡೆಯಲು ಕ್ರಿಮಿನಾಶಕ ತಂದಿದ್ದರು. ಜೀವನದಲ್ಲಿ ಬೇಸರಗೊಂಡಿದ್ದ ಹನುಮಂತ ಬಂಗಾಳೆ ಅವರು ಆ ಕ್ರಿಮಿನಾಶಕ ಕುಡಿದು ಒದ್ದಾಡಲು ಶುರು ಮಾಡಿದರು. ತಕ್ಷಣ ಕುಟುಂಬದವರು ಅವರನ್ನು ಮುಂಡಗೋಡು ಆಸ್ಪತ್ರೆಗೆ ದಾಖಲು ಮಾಡಿದರು. ಅದಾದ ನಂತರ ಹುಬ್ಬಳ್ಳಿ ಕಿಮ್ಸ್’ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಎರಡು ದಿನಗಳ ಕಾಲ ನಿರಂತರ ಚಿಕಿತ್ಸೆ ಕೊಟ್ಟರೂ ಹನುಮಂತ ಬಂಗಾಳೆ ಅವರು ಬದುಕಲಿಲ್ಲ. ನವೆಂಬರ್ 1ರಂದು ಸಾವನಪ್ಪಿದರು. ಖಂಡೋಬಾ ಬೊಂಗಾಳೆ ಅವರು ಪೊಲೀಸರಿಗೆ ಮಾಹಿತಿ ನೀಡಿ, ಶವಪಡೆದರು.