ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಬಸ್ಸು ಅಪಘಾತಕ್ಕೀಡಾಗಿದೆ. ಆ ಬಸ್ಸಿನಲ್ಲಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ.
ಮೈಸೂರಿನ ಟಿ ಕೆ ಲೇಔಟ್ ಬಳಿಯ ತರಳಬಾಳು ಶಿಕ್ಷಣ ಸಂಸ್ಥೆಯವರು ಮುರುಡೇಶ್ವರ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು. ಅದರ ಪ್ರಕಾರ ಬಸ್ಸಿನ ಮೂಲಕ ಮಕ್ಕಳು ಮುರುಡೇಶ್ವರಕ್ಕೆ ಬರುತ್ತಿದ್ದರು. ಆ ಬಸ್ಸು ಭಾನುವಾರ ಹೊನ್ನಾವರದ ಬಳಿ ಪಲ್ಟಿಯಾಯಿತು. ಗೇರುಸೊಪ್ಪ – ಸುಳೆಮುರ್ಕಿ ತಿರುವಿನಲ್ಲಿ ಈ ಅವಘಡ ನಡೆದಿದ್ದು, ಬಸ್ಸಿನಲ್ಲಿದ್ದ ಮಕ್ಕಳು ಗಾಯಗೊಂಡರು.
ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ ಪವನ್ ಅವರು ಬಸ್ಸಿನಲ್ಲಿಯೇ ಕೊನೆಯುಸಿರೆಳೆದರು. ಉಳಿದ ಮಕ್ಕಳ ರಕ್ಷಣಾ ಕಾರ್ಯ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಸದ್ಯ ವಿವಿಧ ಆಂಬುಲೆನ್ಸ ಸ್ಥಳಕ್ಕೆ ದೌಡಾಯಿಸಿದೆ. ಪೊಲೀಸರು ಸ್ಥಳದಲ್ಲಿದ್ದಾರೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂಬ ಮಾಹಿತಿಯಿದೆ.
ಈಚೆಗೆ ಹೊನ್ನಾವರದ ಸುಳೆಮುರ್ಕಿ ಕ್ರಾಸಿನಲ್ಲಿ ಪದೇ ಪದೇ ಅವಘಡ ನಡೆಯುತ್ತಿದೆ. ಹೆದ್ದಾರಿ ಇಲಾಖೆಯ ಬೇಜವಬ್ದಾರಿಯೂ ಅಪಘಾತಕ್ಕೆ ಕಾರಣ ಎಂದು ಅಲ್ಲಿನವರು ದೂರಿದ್ದಾರೆ.