ಅoಕೋಲಾದ ಹಟ್ಟಿಕೇರಿ ಶಾಲೆಗೆ ಭೇಟಿ ನೀಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಮಕ್ಕಳ ಜೊತೆ ಜನ್ಮದಿನ ಆಚರಿಸಿದರು. ಈ ವೇಳೆ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
Advertisement. Scroll to continue reading.
ADVERTISEMENT
ಜನಶಕ್ತಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯಕ ಹಾಗೂ ವಿಠಲ್ ನಾಯ್ಕ್ ಅವರು ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ್ದರು. ಮಕ್ಕಳಿಗೆ ಪಟ್ಟಿ, ಪೆನ್ನು, ಪೆನ್ಸಿಲ್ ಸೇರಿ ವಿವಿಧ ವಸ್ತುಗಳು ಅಗತ್ಯವಿರುವ ಬಗ್ಗೆ ಅರಿತು ಅವರು ಅದನ್ನು ಪೂರೈಸಿದರು. ಮಾಧವ ನಾಯಕ ಅವರು ಅಕ್ಟೊಬರ್ 10ರಂದು ಶಾಲೆಯಲ್ಲಿ ಜನ್ಮದಿನ ಆಚರಿಸಲು ನಿರ್ಧರಿಸಿದ್ದರು. ಆದರೆ, ಶೈಕ್ಷಣಿಕ ಸಮೀಕ್ಷೆ ಹಿನ್ನಲೆ ಆ ಅವಧಿಯಲ್ಲಿ ರಜೆ ಘೋಷಿಸಲಾಗಿದ್ದು, ಮಕ್ಕಳ ದಿನಾಚರಣೆಯ ದಿನ ಅವರು ಮಕ್ಕಳ ಜೊತೆ ಸಂಭ್ರಮಾಚರಣೆ ನಡೆಸಿದರು.
ADVERTISEMENT
`ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಭವಿಷ್ಯದಲ್ಲಿ ಉತ್ತಮ ಸಾಧನೆ ತೋರಲು ಶಿಕ್ಷಣ ಮುಖ್ಯ. ಯಾವುದೇ ಸಮಸ್ಯೆಗಳು ಎದುರಾದರೂ ಕಲಿಕೆ ಮಾತ್ರ ಬಿಡಬಾರದು’ ಎಂದು ಮಾಧವ ನಾಯಕ ಅವರು ಈ ವೇಳೆ ಕರೆ ನೀಡಿದರು. ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಮಕ್ಕಳಿಗೆ ಮಾಧವ ನಾಯಕ ಅವರು ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದರು.
ADVERTISEMENT
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿಲೀಪ್ ನಾಯ್ಕ, ಉರಗ ಪ್ರೇಮಿ ಮಹೇಶ್ ನಾಯಕ, ಪ್ರಮುಖರಾದ ನಿತ್ಯಾನಂದ ನಾಯ್ಕ, ಸುರೇಶ್ ನಾಯ್ಕ್, ಷಣ್ಮುಖ ನಾಯ್ಕ, ದಿಗಂಬರ ನಾಯ್ಕ, ವಿಕ್ರಮ ನಾಯ್ಕ, ರಾಮದಾಸ ನಾಯ್ಕ, ಮಹೇಶ ನಾಯ್ಕ, ಗುರು ನಾಯ್ಕ, ಸಾಯಿನಾಥ ನಾಯ್ಕ, ಚಂದ್ರಹಾಸ ನಾಯ್ಕ, ಸುಭಾಕರ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಮಧುಕರ ನಾಯ್ಕ ಮುಂತಾದವರಿದ್ದರು.