ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಶನಿವಾರ ಚೆಸ್ ಆಡಿದ್ದಾರೆ. ಈ ಆಟದಲ್ಲಿ ಭೀಮಣ್ಣ ನಾಯ್ಕ ಅವರು ತಾತ್ವಿಕ ಸೋಲು ಕಂಡಿದ್ದಾರೆ. ಶಾಸಕರು ಸೋಲುವುದನ್ನು ಸಹಿಸದ ಸಹಾಯಕ ಆಯುಕ್ತರು ಚೆಸ್ ಆಟವನ್ನು ಅರ್ದಕ್ಕೆ ಮೊಟಕುಗೊಳಿಸಿದ್ದಾರೆ!
Advertisement. Scroll to continue reading.
ಶಿರಸಿಯ ಇಳಸೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಚೆಸ್ ಪಾರ್ಕ ಉದ್ಘಾಟನೆ ನಡೆಯಿತು. ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಈ ಉದ್ಯಾನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿದ್ದ ಕಾವ್ಯರಾಣಿ ಅವರು ಚೆಸ್ ಆಡಲು ಶುರು ಮಾಡಿದ್ದು, ಶಾಸಕ ಭೀಮಣ್ಣ ನಾಯ್ಕ ಅವರು ಕಾವ್ಯರಾಣಿ ಅವರಿಗೆ ಪ್ರತಿಸ್ಪರ್ಧಿ ಆಗಿದ್ದರು. ಅವರಿಬ್ಬರ ತುರುಸಿನ ಸ್ಪರ್ಧೆ ನೋಡಲು ಹಲವರು ಜಮಾಯಿಸಿದ್ದು, ಕೊನೆಗೆ ಇಬ್ಬರು ಅರ್ದಕ್ಕೆ ಆಟ ನಿಲ್ಲಿಸಿದ್ದರಿಂದ ಅಲ್ಲಿದ್ದವರು ನಿರಾಶೆಗೆ ಒಳಗಾದರು.
ಕಾವ್ಯರಾಣಿ ಅವರು ಹಂತ ಹಂತವಾಗಿ ಕಾಯಿ ಚಲಿಸಲು ಶುರು ಮಾಡಿದರು. ಎದುರಿಗಿದ್ದ ಭೀಮಣ್ಣ ನಾಯ್ಕ ಅವರು ಕಾಯಿ ಚಲಿಸಿದರು. ಅವರಿಬ್ಬರು ಆಟದಲ್ಲಿ ಎಡವುತ್ತಿರುವುದನ್ನು ನೋಡಿ ಅಲ್ಲಿದ್ದವರು `ಹೀಗಲ್ಲ.. ಹಾಗೇ’ ಎಂದು ಹೇಳಿಕೊಟ್ಟರು. ಕಾವ್ಯರಾಣಿ ಅವರು ಮೊದಲ ಹಂತದಲ್ಲಿ ಉತ್ತಮವಾಗಿ ಕಾಯಿ ಚಲಾಯಿಸಿದರು. ಭೀಮಣ್ಣ ನಾಯ್ಕ ಅವರಿಗೆ ಅಲ್ಲಿದ್ದವರು ತಿಳಿಸಿದರೂ ಒಮ್ಮೆ ತಪ್ಪಾಗಿ ಕಾಯಿ ಮುಂದೆ ಚಲಿಸಿದರು.
ಕೊನೆಗೆ ಶಾಸಕರು ಆಟವನ್ನು ಅಲ್ಲಿಗೆ ಮೊಟಕುಗೊಳಿಸಿದರು. ಸಹಾಯಕ ಆಯುಕ್ತರು ಆಟದಿಂದ ಹಿಂದೆ ಸರಿದರು. ಅದಾಗಿಯೂ ಚೆಸ್ ಪಾರ್ಕ ಉದ್ಘಾಟನೆ ಆಗಿರುವುದಕ್ಕೆ ಅಲ್ಲಿದ್ದ ಜನ ಚಪ್ಪಾಳೆ ತಟ್ಟಿದರು. ಅದಾದ ನಂತರ ಮಕ್ಕಳು ಸಹ ಚೆಸ್ ಆಡಿ ಖುಷಿ ಹಂಚಿಕೊoಡರು. ಉದ್ಘಾಟನೆ ಅಂಗವಾಗಿ ಸ್ಪರ್ಧಾಗಳನ್ನು ಉತ್ತೇಜಿಸಲು ಅಧಿಕಾರಿ-ಜನಪ್ರತಿನಿಧಿ ನಡುವೆ ಈ ಚೆಸ್ ಸ್ಪರ್ಧೆ ನಡೆದಿದ್ದು, `ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತಲೂ ಭಾಗವಹಿಸುವುದು ಮುಖ್ಯ’ ಎಂದು ಅಲ್ಲಿದ್ದವರು ಹೇಳಿದರು.