ಶಿರಸಿಯ ಮರಾಠಿಕೊಪ್ಪದ ಪುಟ್ಟನಮನೆ ಬಳಿ ನಾಗಾಶ್ವತ್ಥ ಕಟ್ಟೆ ಸೇವಾ ಸಮಿತಿಯವರು ಅದ್ಧೂರಿಯಾಗಿ ಕಾರ್ತಿಕೋತ್ಸವ ಆಚರಿಸಿದ್ದಾರೆ. ಸಮಿತಿಯವರು ನಡೆಸುತ್ತಿರುವ 39ನೇ ವರ್ಷದ ಕಾರ್ತಿಕ ಉತ್ಸವ ಇದಾಗಿದ್ದು, ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದಿವೆ.
ಕಾರ್ತಿಕ ಉತ್ಸವದ ಭಾಗವಾಗಿ ನವಗ್ರಹಪೂರ್ವಕ ನಾಗಮೂಲ ಮಂತ್ರ ಹವನ ನಡೆದಿದ್ದು, ಅನೇಕ ಭಕ್ತರು ಈ ಕಾರ್ಯದಲ್ಲಿ ಭಾಗಿಯಾದರು. ಪುರುಷ ಸೂಕ್ತ ಹವನ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿತು. ಸಂಜೆ ಅವಧಿಯಲ್ಲಿ ನಡೆದ ದುರ್ಗಾದೀಪ ನಮಸ್ಕಾರ ಹಾಗೂ ಕಾರ್ತಿಕ ದೀಪೋತ್ಸವ ನೆರೆದಿದ್ದವರನ್ನು ನ್ನು ಆಕರ್ಷಿಸಿತು.
ಕಾರ್ತಿಕೋತ್ಸವದ ಪ್ರಯುಕ್ತ `ಮೂರು ಮುತ್ತು’ ನಾಟಕ ಪ್ರದರ್ಶನ ನಡೆದಿದ್ದು. ಇದೇ ವೇದಿಕೆಯಲ್ಲಿ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರನ್ನು ಸಂಘಟಕರು ಸನ್ಮಾನಿಸಿದರು. ಕಟ್ಟೆ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ ಮೊಗೇರ, ಉಪಾಧ್ಯಕ್ಷ ಸೂರಜ್ ಕೆವಿ, ಕಾರ್ಯದರ್ಶಿ ನಾಗೇಂದ್ರ ಶೆಟ್ಟಿಗಾರ, ಖಜಾಂಚಿ ಕಿರಣ್ ಹೊನ್ನಿ ಅವರು ಈ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಥಳೀಯ ಯುವಕ ಮಂಡಳಿಯ ಅಧ್ಯಕ್ಷ ಉಪೇಂದ್ರ ಮೇಸ್ತ, ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷ ಅಧ್ಯಕ್ಷ ಕಲ್ಪನಾ ಶೆಟ್ಟಿ, ಚಂದ್ರಶೇಖರ ಮಾದನಗೇರಿ ಇತರರು ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದರು.