ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದ ಅಂಗವಾಗಿ ಕಾರವಾರದಲ್ಲಿ ಜರುಗಲಿರುವ ಅರಣ್ಯವಾಸಿಗಳ ಸಮಾವೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಅರಣ್ಯವಾಸಿಗಳಿಂದ 30 ಸಾವಿರಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ಸಲ್ಲಿಕೆಯ ಸಾಧ್ಯತೆಗಳಿವೆ.
ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಟಗೊAಡ ಮಹಾಸತಿ ದೇವಸ್ಥಾನದ ಆªರÀಣದಲ್ಲಿ ಈ ದಿನ ನಡೆದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಈ ವಿಷಯ ಪ್ರಕಟಿಸಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದ ವೈಪಲ್ಯದಿಂದ ನೈಜ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ವೃದ್ದಿಸುವ ಉದ್ದೇಶದಿಂದ ಕಾನೂನು ಜಾಗೃತ ಅಭಿಯಾನವನ್ನ ಸಂಘಟಿಸಲಾಗಿದೆ’ ಎಂದವರು ಹೇಳಿದ್ದಾರೆ.
`ಸುಪ್ರೀಂ ಕೊರ್ಟ ನಿರ್ದೇಶನ ನೀರ್ಲಕ್ಷಿಸಿ ಅರಣ್ಯ ಹಕ್ಕು ಸಮಿತಿಯು ಅರಣ್ಯ ವಾಸಿಗಳ ಅರ್ಜಿ ತಿರಸ್ಕರಿಸುತ್ತಿರುವುದು ವಿಷಾಧಕರ. ಅರಣ್ಯ ಹಕ್ಕು ಕಾಯಿದೆಯ ಅರ್ಜಿ ಪುನರ್ ಪರಿಶೀಲಿಸುವ ಪೂರ್ವದಲ್ಲಿ ಅರಣ್ಯ ಇಲಾಖೆಯು ಅರಣ್ಯವಾಸಿಗಳ ಅರ್ಜಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಪ್ರಾರಂಭಿಸಿರುವುದು ಖಂಡನಾರ್ಹ’ ಎಂದು ಅವರು ಹೇಳಿದ್ದಾರೆ.
ಈ ದಿನ ಭಟ್ಕಳ ತಾಲೂಕಿನ ಯಲ್ವೋಡಿಕವೂರು, ಮುಟ್ಟಳ್ಳಿ, ಕೋಣಾರ, ಹಾಡುವಳ್ಳಿ ಮತ್ತು ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಜಾಗೃತ ಜಾಥ ಕಾರ್ಯಕ್ರಮ ನಡೆದಿದೆ.