ಅನೇಕ ಪಾಸ್ಟಪುಡ್ ಅಂಗಡಿಗಳಲ್ಲಿ ಗೋವಾ ಸರಾಯಿ ಮಾರಾಟ ನಡೆದಿದ್ದು, ಅಬಕಾರಿ ಅಧಿಕಾರಿಗಳು ಅಂಥ ಅಂಗಡಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೊನ್ನಾವರದಲ್ಲಿನ ಪಾಸ್ಟಪುಡ್ ಅಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಸರಾಯಿ ಮಾರಾಟ ಪತ್ತೆ ಮಾಡಿದ್ದಾರೆ.
ನವೆಂಬರ್ 27ರ ಸಂಜೆ ಹೊನ್ನಾವರ ಅಬಕಾರಿ ಅಧಿಕಾರಿ-ಸಿಬ್ಬಂದಿ ತಂಡದವರು ಗಸ್ತು ಕಾರ್ಯಾಚರಣೆಯಲ್ಲಿದ್ದರು. ಅವರಿಗೆ ಹೇರಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚರ್ಚ್ ಕ್ರಾಸ್ ಬಳಿಯಲ್ಲಿರುವ ಪಾಸ್ಟಪುಡ್ ಮಳಿಗೆಯಲ್ಲಿ ಅಕ್ರಮ ಮದ್ಯ ಮಾರಾಟದ ವಾಸನೆ ಬಡಿಯಿತು. ಅಂಗಡಿ ಮಾಲಕ ನಾರಾಯಣ ಅಂಕುಶ್ ಗೌಡ ಅವರನ್ನು ಹೊರಗೆಳೆದು ಅಧಿಕಾರಿಗಳು ವಿಚಾರಣೆ ನಡೆಸಿದರು. `ಏನೂ ಇಲ್ಲ’ ಎಂದರೂ ಕೇಳದೇ ಅಂಗಡಿ ತಪಾಸಣೆ ಮಾಡಿದರು. ಆಗ, ಅಲ್ಲಿ ಅಪಾರ ಪ್ರಮಾಣದ ಅಕ್ರಮ ಮದ್ಯ ಸಿಕ್ಕಿತು.
ಓಲ್ಡ್ ಮಂಕ್ ರಮ್‌ನ 90ಮಿಲಿ ಲೀಟರ್‌ನ 48 ಬಾಟಲಿಗಳು ಹಾಗೂ ಡಿಎಸ್‌ಪಿ ಬ್ಲಾಕ್ ವಿಸ್ಕಿಯ 180ಮಿಲಿ ಲೀಟರ್‌ನ 7 ಬಾಟಲಿಗಳನ್ನು ಅಧಿಕಾರಿಗಳು ಜಪ್ತು ಮಾಡಿದರು. ನಾರಾಯಣ ಅಂಕುಶ್ ಗೌಡರ ವಿರುದ್ಧ ಪ್ರಕರಣ ದಾಖಲಿಸಿದರು.