ದಿಢೀರ್ ಆಗಿ ಕಣ್ಮರೆಯಾಗಿದ್ದ ಜೊಯಿಡಾದ ಹೆಸ್ಕಾಂ ಪವರ್‌ಮ್ಯಾನ್ ಭುಜಂಗ ಗುಂಜಿಕರ್ ಅವರು ಎರಡು ದಿನದ ನಂತರ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಅವರ ಈ ದುಡುಕು ನಿರ್ಧಾರಕ್ಕೆ ಕಾರಣ ಗೊತ್ತಾಗಿಲ್ಲ.
ಜೊಯಿಡಾದ ಕ್ಯಾಸಲರಾಕ್ ಬಳಿಯ ಲಕ್ಷಿö್ಮÃವಾಡದಲ್ಲಿ ಭುಜಂಗ ಗುಂಜಿಕರ್ (46) ಅವರು ಕುಟುಂಬದ ಜೊತೆ ವಾಸವಾಗಿದ್ದರು. ಹೆಸ್ಕಾಂ ಪವರ್ ಮ್ಯಾನ್ ಆಗಿದ್ದ ಅವರು ಆನಮೋಡದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು. ನವೆಂಬರ್ 10ರಂದು ಕ್ಯಾಸಲರಾಕಿನಿಂದ ಆನಮೋಡಿಗೆ ಹೋಗುವಾಗ ಪತ್ನಿ ಮಂಗಲ ಗುಂಜಿಕರ್ ಅವರನ್ನು ಕರೆದೊಯ್ದಿದ್ದರು. ಮಂಗಲ ಗುಂಜಿಕರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.
ಮಧ್ಯಾಹ್ನ ಅವರಿಬ್ಬರು ಮನೆಗೆ ಮರಳಿದ್ದರು. ಈ ವೇಳೆ ರಾಮನಗರದಿಂದ ಭುಜಂಗ ಗುಂಜಿಕರ್ ಅವರ ತಾಯಿ ಬಸ್ಸಿಗೆ ಕ್ಯಾಸಲರಾಕ್’ಗೆ ಬಂದಿಳಿದಿದ್ದು ತಾಯಿಯನ್ನು ಮನೆಗೆ ತಂದು ಬಿಟ್ಟಿದ್ದರು. ಎಲ್ಲರೂ ಸೇರಿ ಒಟ್ಟಿಗೆ ಊಟವನ್ನು ಮಾಡಿದ್ದರು. ಅದಾದ ಮೇಲೆ `ರಾಮನಗರದಲ್ಲಿರುವ ತಂಗಿಯನ್ನು ಭೇಟಿಯಾಗಿ ಬರೋಣ’ ಎಂದು ಮನೆಯಲ್ಲಿ ಹೇಳಿದ್ದರು. `ಇಲ್ಲೆ ಹೋಗಿ ಬರುವೆ’ ಎಂದು ಹೊರಟ ಭುಜಂಗ ಗುಂಜಿಕರ್ ಸಂಜೆಯಾದರೂ ಮನೆಗೆ ಮರಳಿರಲಿಲ್ಲ.
ಮಂಗಲಾ ಗುಂಜಿಕರ್ ಅವರು ಸಾಕಷ್ಟು ಬಾರಿ ಭುಜಂಗ ಗುಂಜಿಕರ್ ಅವರಿಗೆ ಫೋನ್ ಮಾಡಿದ್ದರು. ಆದರೆ, ಫೋನ್ ರಿಂಗ್ ಆದರೂ ಅವರು ಅದನ್ನು ಸ್ವೀಕರಿಸಿರಲಿಲ್ಲ. ಹುಡುಕಾಟ ನಡೆಸಿದರೂ ಸಿಗದ ಕಾರಣ ಮಂಗಲಾ ಗುಂಜಿಕರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ಭುಜಂಗ ಗುಂಜಿಕರ್ ಅವರು ಈ ದಿನ ಶವವಾಗಿರುವುದು ಗೊತ್ತಾಗಿದೆ. ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕುಣಗಿನ ಕ್ಯಾಸಲರಾಕ್ ಬಳಿಯ ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಭುಜಂಗ ಗುಂಜಿಕರ್ ಪತ್ತೆಯಾಗಿದ್ದಾರೆ.