ಮೇಷ ರಾಶಿ: ಹೊಸ ಕೆಲಸಗಳ ಶುರು ಮಾಡಲು ಸೂಕ್ತ ದಿನ. ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಗಮನವಿಟ್ಟು ಯೋಜನೆ ರೂಪಿಸಿ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಕಾಣಲಿದೆ.
ವೃಷಭ ರಾಶಿ: ಮನಸ್ಸು ಶಾಂತವಾಗಿರಲು ಯೋಗಾಭ್ಯಾಸ ಮಾಡಿ. ವ್ಯವಹಾರದಲ್ಲಿ ಏರಿಳಿತ ಸಹಜವಾಗಿರಲಿದೆ. ಹಣಕಾಸು ವಿಷಯದಲ್ಲಿ ನಿಗಾವಹಿಸುವುದು ಉತ್ತಮ.
ಮಿಥುನ ರಾಶಿ: ನಿರೀಕ್ಷಿತ ಫಲ ಸಿಗಲಿದೆ. ಸಮಯ ಹಾಳು ಮಾಡಬೇಡಿ. ಹೊಸ ಯೋಜನೆಗಳು ಯಶಸ್ಸು ಕೊಡಲಿದೆ.
ಕರ್ಕ ರಾಶಿ: ಆರೋಗ್ಯ ಹಾಗೂ ಮನೋಬಲ ಹೆಚ್ಚಿಸಲು ಗಮನಹರಿಸಿ. ಉದ್ಯಮಗಳಲ್ಲಿ ಬೆಳವಣಿಗೆ ಆತ್ಮವೃದ್ದಿ ಅಗತ್ಯ. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ.
ಸಿಂಹ ರಾಶಿ: ನಿತ್ಯದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ನೂತನ ಅವಕಾಶಗಳು ಬರಲಿದೆ. ಶರೀರದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಜಾಗೃತಿ ಇರಲಿ.
ಕನ್ಯಾ ರಾಶಿ: ಕೆಲಸದಲ್ಲಿ ಹೆಚ್ಚು ಶ್ರಮ ಅಗತ್ಯವಿದೆ. ಹೊಸ ಗುರಿಗಳ ಕಡೆ ಗಮನ ಕೊಡಿ. ಜೀವನದಲ್ಲಿ ಶ್ರದ್ಧೆ ಅನಿವಾರ್ಯ. ಶುಭ ಕಾರ್ಯಗಳು ನಡೆಯಲಿದೆ.
ತುಲಾ ರಾಶಿ: ನಿರಂತರ ಪ್ರಯತ್ನ ಫಲಕಾರಿಯಾಗಲಿದೆ. ಹಣಕಾಸು ವೆಚ್ಚ ಹೆಚ್ಚಲಿದೆ. ಮನಸ್ಸಿಗೆ ನೆಮ್ಮದಿ ಸಿಗುವ ಕೆಲಸ ಮಾಡಿ. ಕುಟುಂಬದ ಜೊತೆಗೆ ಸಮಯ ಮೀಸಲಿಡಿ.
ವೃಶ್ಚಿಕ ರಾಶಿ: ನಿರ್ಧಾರಗಳಲ್ಲಿ ಸ್ಪಷ್ಟತೆ ಮುಖ್ಯ. ಹಣಕಾಸು ವಿಚಾರದ ಬಗ್ಗೆ ಚಿಂತಿಸಿ. ಉದ್ಯೋಗದಲ್ಲಿ ಮುನ್ನಡೆ ಸಾಧಿಸಲಿದೆ. ಆಧ್ಯಾತ್ಮಿಕ ಚಿಂತನಕ್ಕೆ ಸೂಕ್ತ ದಿನ.
ಧನು ರಾಶಿ: ಕೆಲಸದ ವಿಷಯದಲ್ಲಿ ಚುರುಕುತನ ಬೇಕು. ಸಾಲ ಮಾಡಲು ಹೋಗಬೇಡಿ. ಸ್ನೇಹಿತರಿಂದ ದೊರೆತ ನೆರವು ಸ್ವೀಕರಿಸಿ. ಹೊಸ ವಿಷಯವನ್ನು ಒಪ್ಪಿಕೊಳ್ಳಿ.
ಮಕರ ರಾಶಿ: ವೃತ್ತಿ ಜೀವನದಲ್ಲಿ ಶಾಂತಿ ಮುಖ್ಯ. ಯೋಜನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೆಲಸದ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿದರೆ ಜಯ ಸಿಗಲಿದೆ.
ಕುಂಭ ರಾಶಿ: ಹೊಸ ಸೃಜನಾತ್ಮಕ ಕಾರ್ಯಗಳು ಯಶಸ್ವಿಯಾಗಲಿದೆ. ಉದ್ಯೋಗದಲ್ಲಿ ಪ್ರಸಿದ್ಧಿ ಹೆಚ್ಚಲಿದೆ. ಆಯಾಸದ ಕೆಲಸಗಳನ್ನು ಮಾಡಬೇಡಿ. ಆರೋಗ್ಯದ ವಿಷಯವಾಗಿ ಕಾಳಜಿವಹಿಸಿ.
ಮೀನ ರಾಶಿ: ಔಷಧ ಸೇವನೆಯಿಂದ ಅಡ್ಡಪರಿಣಾಮ ಎದುರಾಗದಂತೆ ನೋಡಿಕೊಳ್ಳಿ. ನಿಮ್ಮ ಮನೋಬಲ ಹೆಚ್ಚಳಕ್ಕೆ ಯೋಗ ಸಹಾಯಕಾರಿ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ.